ಸಿಂಧನೂರು: ರಾಜ್ಯ-ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.
ನಗರದ ಸತ್ಯಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಸಂಘಟನೆ ಎಲ್ಲದಕ್ಕೂ ಮುಖ್ಯ ಎನ್ನುವುದನ್ನು ಮನಗಂಡು ಪಕ್ಷ ಕಟ್ಟಬೇಕು. ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಕಾಂಗ್ರೆಸ್ ನಾಯಕರು ಕಿತ್ತಾಟದಲ್ಲಿ ತೊಡಗಿದ್ದು, ಮುಂದಿನ ದಿನಗಳಲ್ಲೂ ಬಿಜೆಪಿ ಅಧಿಕಾರಕ್ಕೆ ತರಲು ಸನ್ನದ್ಧರಾಗಬೇಕು ಎಂದರು.
ಜಿಪಂ ಮಾಜಿ ಸದಸ್ಯ ಎನ್. ಶಿವನಗೌಡ ಗೋರೆಬಾಳ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಏನು ಸಮಸ್ಯೆ ಇದೆ? ಎಂಬುದನ್ನು ಅರಿಯಬೇಕು. ನಗರಸಭೆಯಲ್ಲಿ ನಮ್ಮ ಸದಸ್ಯರಿದ್ದಾರೆ. ಅಲ್ಲಿ ಫಾರ್ಮ್ ನಂ.3, ಮ್ಯುಟೇಶನ್ ಕೆಲಸ ಆಗುತ್ತಿವೆಯೋ ಇಲ್ಲವೋ ಗಮನಿಸಬೇಕು. ಜನರಿಗೆ ಸೌಲಭ್ಯ ಕೊಡಿಸಬೇಕು ಎಂದರು.
ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಾವ್ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅರ್ಹತೆ ಡಿ.ಕೆ. ಶಿವಕುಮಾರ್‌ಗೆ ಇಲ್ಲ. ಜೈಲಿಗೆ ಹೋಗಿ ಬಂದ ಮನುಷ್ಯ. ಹಲವು ಸಿಎಂಗಳು ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅದೇ ರೀತಿ ಇವರ ಕತೆ. ಮೋದಿಯವರನ್ನು ಟಾರ್ಗೆಟ್ ಮಾಡಿ ಸಿದ್ದರಾಮಯ್ಯ ದೊಡ್ಡ ಮನುಷ್ಯ ಆಗಲು ಹೊರಟಿದ್ದಾರೆ. ಇದು ಅಸಾಧ್ಯ ಎಂದರು.
ಈ ವೇಳೆ ಬಿಜೆಪಿ ಉಪಾಧ್ಯಕ್ಷ ಮಧ್ವರಾಜ್ ಆಚಾರ್, ರಾಜ್ಯ ಶಿಕ್ಷಕರ ಪ್ರಕೋಷ್ಠಕ ಸಂಚಾಲಕ ಶಿವಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಮರೇಶ ರೈತನಗರ, ಜಿಲ್ಲಾ ಕಾರ್ಯದರ್ಶಿ ಶೈಲಜಾ ಷಡಕ್ಷರಪ್ಪ, ನಗರ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಮಂಜುನಾಥ ಅರಸೂರು, ರವಿ ರಾಠೊಡ್ ಸೇರಿದಂತೆ ಇತರರು ಇದ್ದರು.