Advertisement

ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ

02:14 PM Dec 12, 2019 | Suhan S |

ಚಿಕ್ಕೋಡಿ: ಶಿಕ್ಷಕರು ಕಚೇರಿಗೆ ವಿನಾಕಾರಣ ಅಲೆದಾಡುವುದನ್ನು ತಪ್ಪಿಸಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಜಾರಿಗೆ ತರಬೇಕು. ಶಿಕ್ಷಣ ಇಲಾಖೆ ಯಾವಾಗಲೂ ತಮ್ಮೊಂದಿಗಿದ್ದು, ಪ್ರಾಮಾಣಿಕವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.

Advertisement

ತಾಲೂಕಿನ ನನದಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಮ್ಮಿಕೊಂಡ ಗುರುಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳ ಶಿಕ್ಷಕರ ಸೇವಾ ಸಮಸ್ಯೆಗಳನ್ನು ಬಗೆಹರಿಸಲು ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಶಿಕ್ಷಕರಿಗೆ ಸೇವಾನಿವೃತ್ತಿ ಬಳಿಕ ಸೇವಾ ಪುಸ್ತಕದ ಬೆಲೆ ಏನೆಂಬುದು ಗೊತ್ತಾಗುತ್ತದೆ.ಆದ್ದರಿಂದ ಸೇವೆಯಲ್ಲಿರುವಾಗಲೇ ಸೇವಾ ಪುಸ್ತಕದಲ್ಲಿ ತಮ್ಮ ಸಮಸ್ಯೆಗಳನ್ನು ನಮೂದಿಸಿಕೊಳ್ಳಬೇಕು ಎಂದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಎಸ್‌.. ಖಡ್ಡ ಹಾಗೂ ಜಿಲ್ಲಾ ಸಂಘದ ಕೋಶಾಧ್ಯಕ್ಷ ವೈ.ಎಸ್‌.ಬುಡ್ಡಗೋಳ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತ ಸ್ಪಂದನೆ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ನಮ್ಮೊಂದಿಗಿದ್ದು, ಇಂದಿನ ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪೈಪೋಟಿ ನೀಡುವಂತೆ ಪ್ರಯತ್ನಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.. ಮೇಕಣಮರಡಿ ಮಾತನಾಡಿ, ಶಿಕ್ಷಣ ಇಲಾಖೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ತಾವು ಕೂಡಾ ಇಲಾಖೆಯ ಜೊತೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಕಲಿಕಾ ಗುಣಮಟ್ಟ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ನಾಮನಿರ್ದೇಶನ, ಕಾಲಮಿತಿ ಬಡ್ತಿಗಳು, .ಎಲ್‌, ಸೇವಾ ಬಡ್ತಿ ಮುಂತಾದವುಗಳನ್ನು ಪರಿಶೀಲಿಸಿ ಸೇವಾ ಪುಸ್ತಕದಲ್ಲಿ ನಮೂದಿಸಲಾಯಿತು. ಸೇವಾ ಪುಸ್ತಕದಲ್ಲಿ ಸರಿಯಾದ ಮಾಹಿತಿ ನಮೂದಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಕವಿತಾ ಜಯಕರ ಹಾಗೂ ಸಿಬ್ಬಂದಿಯ‌ನ್ನು ಸನ್ಮಾನಿಸಿ ಗೌರವಿಸಲಾಯಿತು.

Advertisement

ರಾಜ್ಯ ನೌಕರರ ಸಂಘದ ಗೌರವಾಧ್ಯಕ್ಷ ಎಸ್‌.ಎನ್‌.ಬೆಳಗಾವಿ, ಸಿದ್ದು ದುಪದಾಳ, ಚಂದ್ರಶೇಖರ ಅರಭಾಂವಿ, ಕಚೇರಿ ಅ ಧೀಕ್ಷಕ ಮೋರೆ, ಆರ್‌.ದಾತಾರ, ಜಿ.ಎಂ.ಕಾಂಬಳೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಜಿ.ಪಾಟೀಲ, ಕಚೇರಿ ವ್ಯವಸ್ಥಾಪಕ ಎಸ್‌.ಕೆ.ಮೋರೆ, ಯೋಜನಾ ಸಮನ್ವಯ ಅಧಿಕಾರಿ ಎಸ್‌.ಎಸ್‌.ಹಚಡದ, ಯಕ್ಸಂಬಾ ಮತ್ತು ಹಿರೇಕೋಡಿ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಶಿಕ್ಷಕರು ಹಾಜರಿದ್ದರು. ಪ್ರಕಾಶ ಪಾಯನ್ನವರ ಸ್ವಾಗತಿಸಿದರು. ಎಂ.ಎಂ. ಪಾಟೀಲ ನಿರೂಪಿಸಿದರು. ಕೆ.ಎನ್‌. ಖೋತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next