Advertisement

ಮೂಲ ಸೌಕರ್ಯ ಕಲ್ಪಿಸಲು ಒತ್ತು

01:06 PM Feb 09, 2022 | Team Udayavani |

ಹುಣಸಗಿ: ಗ್ರಾಮೀಣ ಭಾಗದ ಸಮಸ್ಯೆ ಪರಿಹರಿಸಲು ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ನರಸಿಂಹನಾಯಕ ಸಹೋದರ ಹಣಮಂತನಾಯಕ (ಬಬ್ಲೂಗೌಡ) ಹೇಳಿದರು.

Advertisement

ತೋಳದಿನ್ನಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅಂಗನವಾಡಿ ಕಟ್ಟಡ ಹಾಗೂ ಕಾಂಕ್ರೀಟ್‌ ರಸ್ತೆ ಕಾಮಗಾರಿ ಕಳಪೆಯಾಗದಂತೆ ಗುಣಮಟ್ಟದಾಗಿ ನಿರ್ಮಿಸಿ, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಪ್ರತಿಯೊಂದು ಕಾಮಗಾರಿ ಕೆಲಸಗಳಿಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ. ಸಹಕಾರ ಇದ್ದಾಗ ಮಾತ್ರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ದೇವು ಗೋಪಾಳೆ, ಕನಕು ಜೀರಾಳ, ಮಲ್ಲು ನವಲಗುಡ್ಡ, ಯಮನಪ್ಪ ಪೂಲಬಾವಿ, ದ್ಯಾಮಣ್ಣ ಕಕ್ಕೇರಿ, ಮೌನೇಶ ದಂಡಿನ್‌, ಸೋಮು ಪೂಲಬಾವಿ, ಜಟ್ಟೆಪ್ಪ ಪೂಜಾರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next