Advertisement

ಜೇವರ್ಗಿ ಸಮಗ್ರ ಅಭಿವೃದ್ಧಿಗೆ ಒತ್ತು: ಅಜಯಸಿಂಗ್‌

03:30 PM Nov 28, 2020 | Suhan S |

ಜೇವರ್ಗಿ: ಜಿಲ್ಲೆಯಲ್ಲಿಯೇ ಜೇವರ್ಗಿ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಈ ಮೂಲಕ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ| ಅಜಯಸಿಂಗ್‌ ಹೇಳಿದರು.

Advertisement

ತಾಲೂಕಿನ ಆಂದೋಲಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜೇವರ್ಗಿ ಮತಕ್ಷೇತ್ರದ ಜನ ಕೊಟ್ಟ ಮತದಿಂದ ಪಡೆದ ಅಧಿ ಕಾರವನ್ನು ಜಾತಿ, ಮತ, ಪಂಥಗಳನ್ನು ಮರೆತು ಅಭಿವೃದ್ಧಿಗಾಗಿ ಬಳಕೆ ಮಾಡಲಾಗಿದೆ. ಕಳೆದ 7 ವರ್ಷಗಳಲ್ಲಿ ಜೇವರ್ಗಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸಲಾಗಿದೆ. ಮಾದರಿ ಕ್ಷೇತ್ರ ಮಾಡುವಕನಸು ನನ್ನದಾಗಿದ್ದು, ಈ ದಿಸೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಇಳಿಮುಖ ಕಂಡಿದೆ. ಆದರೂಮಕ್ಕಳಿಗೆ ತೊಂದರೆಯಾಗಬಾರದೆಂದು ಶಾಲಾಕೊಠಡಿಗಳ ನಿರ್ಮಾಣ ಕಾಮಗಾರಿಗೆ ವಿಶೇಷಒತ್ತು ನೀಡಿ ನಿರ್ಮಿಸಲಾಗಿದೆ ಎಂದರು.

ಆಂದೋಲಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4 ವರ್ಗ ಕೋಣೆಗಳ ನಿರ್ಮಾಣಕ್ಕೆ 40 ಲಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಗ ಕೋಣೆಗಳ ನಿರ್ಮಾಣಕ್ಕೆ 84 ಲಕ್ಷ, ಹರಿಜನವಾಡಾದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 50 ಲಕ್ಷ, ಸಿಸಿರಸ್ತೆಗೆ 30 ಲಕ್ಷ ಹಾಗೂ ಸರಕಾರಿ ಪ್ರೌಢ ಶಾಲೆಯ ಶೌಚಾಲಯ ನಿರ್ಮಾಣಕ್ಕೆ 3.75 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿಆಂದೋಲಾವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಮುಖಂಡರಾದ ಗೌಡಪ್ಪಗೌಡ ಪೊಲೀಸ್‌ ಪಾಟೀಲ, ಸಂಗನಗೌಡ ಮಾಲಿಪಾಟೀಲ, ಕಾಸೀಂ ಪಟೇಲ ಮುದಬಾಳ, ಚಂದ್ರಶೇಖರ ಹರನಾಳ, ಸಂಗನಗೌಡ ಪಾಟೀಲ ಗುಂದಗಿ, ಯಶವಂತ ಹೋತಿನಮಡು, ಪ್ರಶಾಂತಗೌಡ ಜೈನಾಪೂರ, ಸಂತೋಷಪಾಟೀಲ ಬಿರಾಳ, ಶಾಂತಪ್ಪ ಸಾಹು ಅಂಗಡಿ,ಮಲ್ಲಣ್ಣ ಕಟ್ಟಿಕಾರ, ಮಲ್ಲು ಲಕ್ಕಣಿ, ಮಲ್ಲಪ್ಪ ಪೂಜಾರಿ, ಮಲ್ಲಪ್ಪ ತುಪ್ಪದ, ಭಾಗರೆಡ್ಡಿ, ನಬಿಕುಕನೂರ, ಸಂಭಾಜಿ ಶರಣಬಸಪ್ಪ, ದೇವಣ್ಣ ಕಟ್ಟಿ, ವಿಜಯಕುಮಾರ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next