Advertisement
ರವಿವಾರ ಕಾಪು ರಾಜೀವ ಭವನದಲ್ಲಿ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯ ಮುನ್ನೋಟ “ನಮ್ಮ ಕನಸಿನ ಕಾಪು ಪ್ರಣಾಳಿಕೆ” ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
Related Articles
Advertisement
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ : ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರಕ್ಕೆ ಹೊಸ ರೂಪ ನೀಡುವುದು, ಜಗದ್ಗುರು ಮಧ್ವಾಚಾರ್ಯರ ಜನ್ಮ ಕ್ಷೇತ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿ, ಅಷ್ಟ ಮಠದ ಮೂಲ ಕ್ಷೇತ್ರ ದಂಡತೀರ್ಥ ಕೆರೆ ಅಭಿವೃದ್ಧಿ, ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳಾದ ಮಂದಿರ, ಮಸೀದಿ, ಚರ್ಚ್‌ಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು.
ಮನೆ-ಮನೆಗೆ ನೀರು : ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಮರು ಚಾಲನೆ, ಹೆಜಮಾಡಿ ಶಾಂಭವಿ ನದಿ, ಕುರ್ಕಾಲು ಪಾಪನಾಶಿನಿ ನದಿ, ಬೆ„ರಂಪಳ್ಳಿ ಸ್ವರ್ಣಾ ನದಿಯಿಂದ ನೀರೆತ್ತಿ ಶುದ್ದೀಕರಣಗೊಳಿಸಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಮನೆ-ಮನೆಗೆ ನೀರು ಒದಗಿಸುವುದು, ವಾರಾಹಿ ಯೋಜನೆಯ ಮೂಲಕ ಕೃಷಿ ಕಾರ್ಯಕ್ಕೆ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುವುದು.
ಕೌಶಲ್ಯಾಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಕೇಂದ್ರ : ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ. 3ರ ಬಡ್ಡಿದರದಲ್ಲಿ ಸಾಲ ವಿತರಣೆ, ಸೊದ್ಯೋಗಕ್ಕೆ ಉತ್ತೇಜನೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸƒಷ್ಟಿ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಸ್ವಂತ ಉದ್ದಿಮೆ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತದೆ.
ಕಸ ವಿಲೇವಾರಿ ಘಟಕ : ಆಧುನಿಕ ತಂತ್ರಜ್ಞಾನದೊಂದಿಗೆ ಎಲ್ಲೂರಿನ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸುವುದು, ಉದ್ಯಾನವನ, ವಾಕಿಂಗ್ ಟ್ರಾÂಕ್ ನಿರ್ಮಾಣ, ಐದು ಗ್ರಾ.ಪಂ.ಗೊಂದರಂತೆ ಕಸ ವಿಲೇವಾರಿ ಘಟಕ, ಖಾಸಗಿ ಸಹಭಾಗಿತ್ವದೊಂದಿಗೆ ಕಸದಿಂದ ಗೊಬ್ಬರ, ಗ್ಯಾಸ್, ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲಾಗುವುದು.
ಕ್ರೀಡಾಂಗಣ – ಈಜು ಕೊಳ ನಿರ್ಮಾಣ : ಕಾಪು, ಬೆಳಪು, ಪೆರ್ಡೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ, ಹೆಜಮಾಡಿ ಕ್ರೀಡಾಂಗಣ ಮೇಲ್ದರ್ಜೆಗೇರಿಸುವುದು, ವಿಶಾಲವಾದ ಈಜುಕೊಳ ನಿರ್ಮಿಸುವ ಉದ್ದೇಶದೊಂದಿಗೆ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕಾಪು ನಗರವನ್ನು ಕೇಂದ್ರೀಕರಿಸಿ ಸುಸಜ್ಜಿತ ಬಸ್ಸು ನಿಲ್ದಾಣ, ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವುದು.
100 ಬೆಡ್ ಆಸ್ಪತ್ರೆ : ತಾಲೂಕು ಕೇಂದ್ರದಲ್ಲಿ 100 ಬೆಡ್‌ನ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ. 4 ಕಡೆ ಪಶು ವೈದ್ಯಕೀಯ ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಕಾಪು ನಗರವನ್ನು ಕೇಂದ್ರೀಕರಿಸಿ ಸುಸಜ್ಜಿತ ಬಸ್ಸು ನಿಲ್ದಾಣ, ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವುದು.
ರೈತ ಸಂಜೀವಿನಿ ಯೋಜನೆ : ರೈತಾಪಿ ವರ್ಗದ ಜನರ ಅನುಕೂಲತೆಗಾಗಿ ನೀರಾವರಿ ಯೋಜನೆಗಳ ಅನುಷ್ಠಾನ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೆರೆಗಳ ಹೂಳೆತ್ತುವಿಕೆ, ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ, ಕೃಷಿ ಕೇಂದ್ರ ಸ್ಥಾಪನೆ, ದನ, ಕುರಿ, ಆಡು, ಕೋಳಿ ಸಾಕಾಣಿಕೆಗಾಗಿ ಕೃಷಿಕರಿಗೆ ಸಹಾಯಧನ ಒದಗಿಸಲಾಗುವುದು.
ಸಮುದಾಯ ಭವನ : ವಿವಿಧ ಧರ್ಮ, ಜಾತಿಗಳ ಸಮುದಾಯ ಭವನ ನಿರ್ಮಾಣ, ಪುರಸಭಾ ವ್ಯಾಪ್ತಿಯಲ್ಲಿ ರಾಜೀವಗಾಂಧಿ ಸಭಾಭವನ, ರಾಣಿ ಅಬ್ಬಕ್ಕ ಸಾಂಸ್ಕೃತಿಕ ಕಲಾಭವನ ನಿರ್ಮಾಣ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅಭಿವೃದ್ಧಿಗೆ ಹೊಸ ಯೋಜನೆಗಳು, ದಲಿತ ಕಾಲೋನಿಗಳ ಅಭಿವೃದ್ಧಿ, ಮೊರಾರ್ಜಿ ಶಾಲೆಗಳ ನಿರ್ಮಾಣದ ಉದ್ದೇಶವಿದೆ.
ಸಿಆರ್‌ಝಡ್, ಮತ್ಸ್ಯಾಶ್ರಯ ಯೋಜನೆ : ಮೀನುಗಾರರ ಡೀಸೆಲ್, ಸೀಮೆಎಣ್ಣೆ ಸಬ್ಸಿಡಿ ಹೆಚ್ಚಿಸುವುದರೊಂದಿಗೆ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣ, ಮತ್ಸಾಶ್ರಯ ಯೋಜನೆ, ಹೆಜಮಾಡಿ ಬಂದರಿಗೆ ಕಾಯಕಲ್ಪ, ಹೆ„ಟೆಕ್ ಮೀನು ಮಾರುಕಟ್ಟೆ ನಿರ್ಮಾಣ, ಜೆಟ್ಟಿ ನಿರ್ಮಾಣ ಸಹಿತವಾಗಿ ಮತ್ಸೊÂàದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಸಿಆರ್‌ಝಡ್ ನಿಯಮದಿಂದ ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ನಿಯಮದ ತಿದ್ದುಪಡಿಗೆ ಪ್ರಯತ್ನಿಸುವುದು.
ಕಾಪು ತಾಲೂಕು, ಪುರಸಭೆಯನ್ನು ರಾಜ್ಯಕ್ಕೆ ನಂ.1 ಆಗಿಸುವ ಗುರಿ
2013ರಲ್ಲಿ ಕಾಪು ಕ್ಷೇತ್ರದ ಶಾಸಕನಾಗಿ, ನಗರಾಭಿವೃದ್ಧಿ ಸಚಿವನಾಗಿದ್ದ ಸಂದರ್ಭ 2015ರಲ್ಲಿ ಕಾಪು ಪುರಸಭೆ ರಚಿಸಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. 2018ರಲ್ಲಿ ತಾಲೂಕನ್ನಾಗಿ ರಚಿಸುವ ಐತಿಹಾಸಿಕ ನಿರ್ಧಾರದೊಂದಿಗೆ ತಾಲೂಕು ಘೋಷಣೆ ಜತೆಗೆ ಹತ್ತಾರು ಸರಕಾರಿ ಕಚೇರಿಗಳನ್ನು ಕಾಪುವಿನೆಡೆಗೆ ತಂದಿದ್ದೇವೆ. ಈ ಬಾರಿ ಮತ್ತೆ ಶಾಸಕನಾಗಿ ಆಯ್ಕೆಯಾದಲ್ಲಿ ಕಾಪು ತಾಲೂಕು ಮತ್ತು ಪುರಸಭೆಯನ್ನು ರಾಜ್ಯಕ್ಕೆ ನಂ. 1 ಆಗಿ ಅಭಿವೃದ್ಧಿಪಡಿಸುವ ಗುರಿಯಿದೆ. ಸುಂದರ ಕಾಪು – ಸ್ವತ್ಛ ಕಾಪು ಕಾಪು ಅಭಿವೃದ್ಧಿಯ ನೀಲನಕಾಶೆಯೊಂದಿಗೆ ಕಸ ವಿಲೇವಾರಿ, ಕೊಳಚೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಪುರಸಭೆ ಸುತ್ತ ರಿಂಗ್ ರೋಡ್ ನಿರ್ಮಾಣ, ಕಾಪು ಬೀಚ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು.
ಕಾಪು ಪ್ರಾಧಿಕಾರದ ಎಲ್ಲಾ ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗುವುದು. ಕಾಪುವಿನಲ್ಲಿ ಆಕರ್ಷಣೀಯವಾದ ವಾಕಿಂಗ್ ಟ್ರ್ಯಾಕ್, ಪಾರ್ಕಿಂಗ್ ವ್ಯವಸ್ಥೆ, ಈಜು ಕೊಳ, ಸಮುದಾಯ ಭವನ, ನ್ಯಾಯಾಲಯ ಸಂಕೀರ್ಣ, ನೊಂದಾವಣೆ ಕೇಂದ್ರ ಸಹಿತ ಎಲ್ಲಾ 32 ಸರಕಾರಿ ಕಚೇರಿಗಳ ನಿರ್ವಹಣೆ, ಬಡಜನತೆಯ ಅನುಕೂಲತೆಗಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಗುರಿ ಹೊಂದಿದ್ದೇವೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಪ್ರಮುಖರಾದ ಮಾಧವ ಆರ್. ಪಾಲನ್, ಅಮೀರ್ ಕಾಪು, ಶರ್ಪುದೀªನ್ ಶೇಖ್, ಪ್ರಶಾಂತ್ ಜತ್ತನ್ನ, ದೇವರಾಜ್ ಕೋಟ್ಯಾನ್, ಉಪಸ್ಥಿತರಿದ್ದರು.