ನಾಲ್ಕು ಗೋಡೆಗಳ ಮಧ್ಯೆ ವೇದಿಕೆ ಮೇಲೆ ನಡೆಯುವ ನಾಟಕವನ್ನು ನೋಡಿರುತ್ತೀರಾ, ಬಯಲಲ್ಲಿ ಚಪ್ಪರದಡಿ ಆಡುವ ನಾಟಕವನ್ನೂ ನೋಡಿರುತ್ತೀರಾ. ನಾಟಕದಲ್ಲಿ ರಂಗಸಜ್ಜಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲೊಂದು ನಾಟಕದ ರಂಗಸಜ್ಜಿಕೆ ವಿನೂತನವಾಗಿದೆ. ಏಕೆಂದರೆ ಇಲ್ಲಿ ಲಾರಿಯನ್ನೇ ರಂಗಸಜ್ಜಿಕೆಯಾಗಿ ಮಾರ್ಪಾಡು ಮಾಡಲಾಗಿದೆ. ಅಂದರೆ ಪೂರ್ತಿ ನಾಟಕ ಲಾರಿಯ ಹಿಂಭಾಗದಲ್ಲಿ ನಡೆಯುತ್ತದೆ. ನಾಟಕದ ಹೆಸರು “ಸಾಮ್ರಾಟ ಸುಯೋಧನ’. ಶ್ರೀರಾಮ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ ಈ ನಾಟಕ ನಡೆಯುತ್ತಿದೆ. ಈ ನಾಟಕದಲ್ಲಿ ಅಭಿನಯಿಸುತ್ತಿರುವವರೆಲ್ಲರೂ ಹವ್ಯಾಸಿ ಕಲಾವಿದರು. ಇವರಲ್ಲಿ ವ್ಯಾರಿಗಳಿದ್ದಾರೆ, ಸರ್ಕಾರಿ ನೌಕರರಿದ್ದಾರೆ, ರಾಜಕಾರಣಿಗಳಿದ್ದಾರೆ, ಸಾಫ್ಟ್ವೇರ್ ಎಂಜಿನಿಯರ್‌ಗಳಿದ್ದಾರೆ… ಇವರೆಲ್ಲರೂ ಕೆಂಗೇರಿ ಉಪನಗರದ ಆಸುಪಾಸಿನಲ್ಲಿರುವವರು. ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಿರುವ ಈ ನಾಟಕ ಗ್ರಾಮೀಣ ಸೊಗಡಿನಿಂದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.
ಎಲ್ಲಿ?: ಬಿಡಿಎ ಬಡಾವಣೆ, 2ನೇ ಅಡ್ಡರಸ್ತೆ, ಡಬಲ್ ರೋಡ್, ಜ್ಞಾನಭಾರತಿ
ಯಾವಾಗ?: ಮಾರ್ಚ್ 29, ರಾತ್ರಿ 8