Advertisement
ವಿಶ್ವಕಪ್‌ನಲ್ಲಿ ಮಿಂಚುವ ಮುನ್ನ ಫ್ರಾನ್ಸ್‌ನ ದೇಶಿ ಪಂದ್ಯಾವಳಿಯಾದ “ಪ್ಯಾರಿಸ್ ಸೇಂಟ್ ಜರ್ಮೈನ್ ಟೂರ್ನಿ’ಯಲ್ಲೂ ಎಂಬಪೆ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಶಸ್ತಿ ಸ್ಪರ್ಧೆಯಲ್ಲಿರುವ ಆಟಗಾರರ ಯಾದಿಯನ್ನು ಹತ್ತಕ್ಕೆ ಇಳಿಸಲಾಗಿದ್ದು, ಫ್ರಾನ್ಸ್‌ನ ಮತ್ತಿಬ್ಬರು ಸ್ಟಾರ್ ಆಟಗಾರರಾದ ಅಂಟೋನಿ ಗ್ರೀಝಮನ್ ಮತ್ತು ರಫೆಲ್ ವರೇನ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷದ ಕೋಚ್ ಯಾದಿಯಲ್ಲಿರುವ ಪ್ರಮುಖರೆಂದರೆ ಫ್ರಾನ್ಸ್‌ನ ಡಿಡಿಯರ್ ಡಿಶಾಂಪ್ಸ್ ಮತ್ತು ಇಂಗ್ಲೆಂಡಿನ ಗ್ಯಾರೆತ್ ಸೌತ್‌ಗೆಟ್. 6 ಪುರುಷರು ಹಾಗೂ 4 ವನಿತೆಯರು ವರ್ಷದ ಕೋಚ್ ಸ್ಪರ್ಧೆಯಲ್ಲಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ, ಕೆವಿನ್ ಡಿ ಬ್ರುಯಿನ್, ಅಂಟೋನಿ ಗ್ರೀಝಮನ್, ಈಡನ್ ಹಜಾರ್ಡ್, ಹ್ಯಾರಿ ಕೇನ್, ಕೈಲಿಯನ್ ಎಂಬಪೆ, ಲಿಯೋನೆಲ್ ಮೆಸ್ಸಿ, ಲೂಕಾ ಮೊಡ್ರಿಕ್, ಮೊಹಮ್ಮದ್ ಸಲಾಹ್, ರಫೆಲ್ ವರೇನ್. ಸೆ. 24ರಂದು ಲಂಡನ್‌ನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲಾಗುವುದು.