Advertisement
“”ಲೋ… ಇರ್ಲಿ ಮಾತಾಡೋ ನನ್ನದು ಕೂಡ ಅನ್‌ಲಿಮಿಟೆಡ್ ಆಫರ್!”ಇಂಥಾದ್ದೊಂದು ಸಂಭಾಷಣೆಯನ್ನು ನಾವೂ ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಕೇಳಿರುತ್ತೇವೆ. ನಮ್ಮ ಬದುಕಿಗೆ ಯಾವಾಗ ಆಧುನೀಕತೆಯ ಗಾಳಿ ಬೀಸಿ 4-ಜಿ ಸ್ಪೀಡು ಪಡೆದುಕೊಂಡಿತೋ ಆಗಿನಿಂದ ನಾವೆಲ್ಲರೂ ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ಓಡುತ್ತಿದ್ದೇವೆ. ನಮ್ಮ ಈ ಓಟ ನಮ್ಮನ್ನು ಅದು ಎಲ್ಲಿಗೆ ಕರೆದೊಯ್ಯುತ್ತದೆಯೋ ಗೊತ್ತಿಲ್ಲ. ಆದರೆ, ಓಡುವ ಭರದಲ್ಲಿ ನಮ್ಮ ಒಂದೊಂದೇ ಮೌಲ್ಯಯುತ ಭಾವನೆಗಳನ್ನು ಗಾಳಿಗೆ ತೂರುತ್ತ ಸಾಗುತ್ತಿದ್ದೇವೆ. ಅದರಲ್ಲಿ ಸಿಂಹಪಾಲು ಪಡೆದುಕೊಂಡಿರುವುದೇ ಈ ಮೊಬೈಲು. ಹೌದು, ಮೊಬೈಲ್ ಈಗ ನಮ್ಮೆಲ್ಲರ ಪಾಲಿನ “ಹಿತಶತ್ರು’.
ಫೋಟೋಗಳು ಇತ್ತೀಚೆಗೆ ಯುವ ಸಮುದಾಯದವರನ್ನು ಒಳಗೊಂಡಂತೆ ಎಲ್ಲರಲ್ಲಿಯೂ ಹುಟ್ಟು ಹಾಕಿರುವ ವಿಚಿತ್ರ ವಾದ ಕ್ರೇಜ್. ಮುಂಚೆಲ್ಲಾ ಫೋಟೋ ಎಂದರೆ ವಿಶೇಷ ಸಂದರ್ಭಗಳಲ್ಲಿ ಮಣ ಭಾರದ ಕ್ಯಾಮರಾಗಳನ್ನು ಉಪಯೋಗಿಸಿ ತೆಗೆಯುತ್ತಿದ್ದದ್ದು ನೆನಪಿದೆ. ಆದರೆ, ಈಗ ಅಷ್ಟೆಲ್ಲ ಸರ್ಕಸ್ ಮಾಡುವ ಅಗತ್ಯವಿಲ್ಲ. ಹೇ ಗೂಗಲ್, ಓಪನ್ ದ ಕ್ಯಾಮರಾ ಆ್ಯಂಡ್ ಕ್ಲಿಕ್ ಓನ್ ಫೋಟೋ… ಎಂದು ಅರುಹಿದರೆ ಸಾಕು. ಸ್ವಲ್ಪ ಸುಣ್ಣಬಣ್ಣ ಬಳಿದ ಅಂದವಾದ ಫೋಟೋ ಕ್ಲಿಕ್ಕಿಸಿ ನಮ್ಮೆದುರಿಡುತ್ತದೆ. ಸ್ಮಾರ್ಟ್ ಫೋನುಗಳ ಕ್ಯಾಮರಾದ ಎಂ.ಪಿ. ಹೆಚ್ಚಾದಂತೆಲ್ಲ ಯುವಪೀಳಿಗೆಯವರ ಕ್ರೇಜ್ ಎಂಬ ಬಿ.ಪಿ.ಯೂ ಹೆಚ್ಚಾಗುತ್ತಿದೆ. ಚೆಂದವಾಗಿ ರೆಡಿಯಾದ ದಿನ ಒಂದಿಷ್ಟು ಸೆಲ್ಫಿಗಳಿಗೆ ಫೋಸ್ ಕೊಡದೇ ಇದ್ದರೆ ನಾವಷ್ಟೇ ಅಲ್ಲ, ನಮ್ಮ ಫ್ರಂಟ್ ಕ್ಯಾಮರಾ ಕೂಡ ಒಂದೇ ಕಣ್ಣಲ್ಲಿ ಅಳುತ್ತದೆ. ಹಿಂದೆ ಒಂದು ಮಾತಿತ್ತು- ಅದು ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು. ಆದರೆ, ಇಂದು ಅದು ಬದಲಾಗಿದೆ. ಹೇಗೆಂದರೆ, “ಎಲ್ಲರೂ ಕ್ಲಿಕ್ಕಿಸುವುದು ಲೈಕಿಗಾಗಿ. ಒಂದಿಷ್ಟು ವೀವಿÕಗಾಗಿ’ ಎಂದು. ಇದು ಅಕ್ಷರಶಃ ಸತ್ಯ ಅಲ್ಲವೆ. ಏಕೆಂದರೆ, ತೆಗೆದ ಫೋಟೋಗಳು ಕೇವಲ ಗ್ಯಾಲರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಫೇಸ್‌ಬುಕ್, ವಾಟ್ಸಾಪ್‌ಗ್ಳ ಗೋಡೆಗೆ ತಗುಲಿ ಹಾಕಿ, ಸ್ಟೇಟಸ್‌ಗಳಲ್ಲಿ ಹರಿಬಿಡುವ ಒಂದು ತರಹದ ವಿಚಿತ್ರ ವ್ಯಾಧಿ ನಮ್ಮದು. ಸರ್ವಂ ಸೆಲ್ಫಿಮಯಂ ಎನ್ನುವ ಮಂತ್ರ ಪಠಿಸುತ್ತ ಅನಗತ್ಯವೆನಿಸುವಷ್ಟು ಫೋಟೋಗಳಿಗೂ ಸ್ಟೇಟಸ್‌ಗಳಲ್ಲಿ ಸ್ಥಾನವಿದೆ. ಕೋಪ-ತಾಪ, ದುಃಖ-ದುಮ್ಮಾನ, ಹಿತಕರ-ಅಹಿತಕರವೆನಿಸುವ ಎಲ್ಲಾ ಭಾವನೆಗಳನ್ನು ಮಾರುವ ಸುಲಭವಾದ ಮಾರುಕಟ್ಟೆಯೇ ಈ ಸ್ಟೇಟಸ್ ಎನ್ನುವ ವೇದಿಕೆ. ಭಾವನೆಗಳು ಬಡವಾಗುತ್ತಿವೆ!
ಹೌದು, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆಲ್ಲ ನಮ್ಮ ತೀರ ವೈಯಕ್ತಿಕ ವಿಷಯಗಳು ಪ್ರಚಾರ ಪಡೆಯುತ್ತಿವೆ, ನಾವಿಂದು ಹೃದಯತುಂಬಿ ನಗುತ್ತಿಲ್ಲ, ನೋವಾದಾಗ ಮನಬಿಚ್ಚಿ ಅಳುತ್ತಿಲ್ಲ, ಏಕೆಂದರೆ ನಮ್ಮ ನಗು, ಅಳು, ಸಿಟ್ಟು , ಕೋಪ ಸೇರಿದಂತೆ ಎಲ್ಲಾ ಭಾವನೆಗಳ ಕೆಲಸವನ್ನು ಜೀವವಿಲ್ಲದ ಇಮೋಜಿಗಳಿಗೆ, ಸ್ಟಿಕ್ಕರ್‌ಗಳಿಗೆ ಓಪ್ಪಿಸಿದ್ದೇವೆ. ನಮ್ಮ ಮನಸ್ಸಿನ ಭಾವನೆಗಳನ್ನು ಮನಸಾರೆ ಅಭಿವ್ಯಕ್ತಪಡಿಸುವುದು ಕಡಿಮೆಯಾಗಿದೆ. ಜಾಲತಾಣಗಳಲ್ಲಿ ಕೇವಲ ಆಕರ್ಷಣೆ, ಒಣ ಪ್ರತಿಷ್ಠೆಯೇ ಹೆಚ್ಚಾಗಿದ್ದು , ಇಲ್ಲಿ ಚಿಗುರೊಡೆಯುವ ಸ್ನೇಹ, ಪ್ರೀತಿ ದುರಂತದಲ್ಲಿ ಕೊನೆಯಾಗಿರುವ ದೃಷ್ಟಾಂತಗಳಿಗೇನು ಕಡಿಮೆ ಇಲ್ಲ. ಮೊಬೈಲಿನ ಡಿಸ್‌ಪ್ಲೇಯಾಗಿ ರುವ ದೃಷ್ಟಾಂತಗಳಿಗೇನು ಕಡಿಮೆ ಇಲ್ಲ. ಮೊಬೈಲಿನ ಡಿಸ್‌ಪ್ಲೇ ಒಡೆದುಹೋದಾಗ ಆಗುವಷ್ಟು ನೋವು ಮನಸುಗಳ ನಡುವೆ
Related Articles
ಖಾತೆಗೆ ಜಮಾ ಆಗುತ್ತಿದೆ. ಮುಂಚೆ ಅಂತ ರ್ಜಾಲದಲ್ಲಿ ಏನನ್ನಾದರೂ ಹುಡುಕುತ್ತಿದ್ದಾಗ ಇರುತ್ತಿದ್ದ ಉತ್ಸಾಹ ಈಗ ಇಲ್ಲವಾಗಿದೆ. ಸ್ವಲ್ಪ ಬಫರ್ ಆದರೆ ಸಾಕು, ನಮ್ಮ ತಲೆ ಗಿಮ್ಮನೆ ತಿರುಗಿ ಕೋಪ ನೆತ್ತಿಗೇರುತ್ತದೆ. ಆಗ ಇದ್ದ ಕಾಯುವಿಕೆ, ಅಲ್ಲಿದ್ದ ಉತ್ಸುಕತೆ, ತಾಳ್ಮೆ, ಕೋಪ ನೆತ್ತಿಗೇರುತ್ತದೆ. ಆಗ ಇದ್ದ ಕಾಯುವಿಕೆ, ಅಲ್ಲಿದ್ದ ಉತ್ಸುಕತೆ, ತಾಳ್ಮೆ ಈಗ ಏಕೆ ಇಲ್ಲ? ತರಗತಿಯಲ್ಲಿ ಮಾಡಿದ ಪಾಠ ಅರ್ಥವಾಗದಿದ್ದರೆ ಶಿಕ್ಷಕರನ್ನು ಕೇಳಿ ತಿಳಿ ಯುವ, ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳುವ ಪ್ರವೃತ್ತಿ ಹೋಗಿ ಮೊಬೈಲ್ ಉಂಟಲ್ಲ ಸರ್ಚ್ ಮಾಡಿದರಾಯಿತು ಬಿಡು ಎನ್ನುವ ತಾತ್ಸಾರ. ಮೆದುಳಿಗೆ ಹೆಚ್ಚು ಹೊರೆಕೊಡದೆ ರೆಡಿಮೇಡ್ ಉತ್ತರ ಹುಡುಕುವ ಆಲಸ್ಯತನ ಏಕೆ? ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ!
Advertisement
ಮಹೇಶ್ ಎಂ.ಸಿ.ದ್ವಿತೀಯ ಬಿ.ಎಡ್
ಎಸ್‌ಡಿಎಂ ಕಾಲೇಜು, ಉಜಿರೆ