Advertisement

ಯುಎಸ್‌ ಓಪನ್‌ನಿಂದ ಹಿಂದೆ ಸರಿದ ಮರ್ರೆ

10:30 AM Aug 28, 2017 | Team Udayavani |

ನ್ಯೂಯಾರ್ಕ್‌ :ವಿಶ್ವದ ಎರಡನೇ ರ್‍ಯಾಂಕಿನ ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದಿಂದ ಹಿಂದೆ ಸರಿಯಲು ನಿರ್ಧ ರಿಸಿದ್ದಾರೆ. ಸೊಂಟ ನೋವಿನಿಂದ ಬಳಲುತ್ತಿರುವ ಅವರು ಈ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ನಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಯುಎಸ್‌ ಓಪನ್‌ ಕೂಟ ಸೋಮವಾರರಿಂದ ಆರಂಭವಾಗಲಿದೆ.

Advertisement

2012ರ ಯುಎಸ್‌ ಒಪನ್‌ ಸಹಿತ ಮೂರು ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದಿರುವ ಮರ್ರೆ ಯಾವಾಗ ಚೇತರಿಸಿಕೊಳ್ಳುತ್ತಾರೆಂದು ಗೊತ್ತಾಗಿಲ್ಲ. ಸಾಧ್ಯವಾದಷ್ಟು ಬೇಗ ಟೆನಿಸ್‌ ಅಂಕಣಕ್ಕೆ ಬರಲು ಬಯಸಿದ್ದೇನೆ. ಆದರೆ ವೈದ್ಯರ ಸಲಹೆ ಪಡೆದು ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವೆ ಎಂದು ಮರ್ರೆ ತಿಳಿಸಿದರು. ಕಳೆದ ತಿಂಗಳು ಅಮೆರಿಕದ ಸ್ಯಾಮ್‌ ಕ್ವೆರಿ ವಿರುದ್ಧ ವಿಂಬಲ್ಡನ್‌ ಟೆನಿಸ್‌ ಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ಐದು ಸೆಟ್‌ಗಳ ಮ್ಯಾರಥಾನ್‌ ಆಟ ಆಡಿದ ಬಳಿಕ 30ರ ಹರೆಯದ ಮರ್ರೆ ಯಾವುದೇ ಟೆನಿಸ್‌ ಪಂದ್ಯ ಆಡಿಲ್ಲ.

ಮರ್ರೆ ಈ ಕೂಟದಿಂದ ಹಿಂದೆ ಸರಿಯದ ಅಗ್ರ 10ರೊಳಗಿನ ಆಟಗಾರರಲ್ಲಿ ಐದನೆಯವರಾಗಿದ್ದಾರೆ. ಸ್ವಿಸ್‌ನ ವಾವ್ರಿಂಕ, ಜೊಕೋವಿಕ್‌, ಜಪಾನಿನ ಕೆಯಿ ನಿಶಿಕೋರಿ ಮತ್ತು  ರಾನಿಕ್‌ ಈಗಾಗಲೇ ಗಾಯದ ಸಮಸ್ಯೆಯಿಂದ ಕೂಟದಿಂದ ಹಿಂದೆ ಸರಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next