Advertisement
ಭಾವನೆಗಳನ್ನು ವ್ಯಕ್ತಪಡಿಸಲು, ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಗುಣವನ್ನು ಹೊಂದಿರುವ ವ್ಯಕ್ತಿಯು ಭಾವನಾತ್ಮಕ ಬುದ್ಧಿವಂತಿಕೆಯಿಂದ ಕೂಡಿರುತ್ತಾನೆ. ವ್ಯಕ್ತಿಯು ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ, ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೋ ಅವರ ಬುದ್ಧಿವಂತಿಕೆ ಮತ್ತು ಗ್ರಹಿಸುವ ಸಾಮರ್ಥ್ಯ ಉತ್ತಮವಾಗಿದೆ ಎಂದು ಹೇಳಲು ಸಾಧ್ಯ.
Related Articles
Advertisement
ಉದ್ಯೋಗಕ್ಕೆ ಅಗತ್ಯಯಾವುದೇ ಕಂಪೆನಿಗಳಿಗೆ ನೇಮಕಾತಿ ಸಮಯದಲ್ಲಿ ನಮ್ಮ ಬೌದ್ಧಿಕ ಸಾಮರ್ಥ್ಯವು ಪ್ರಮುಖವಾಗಿರುತ್ತದೆ. ವಿವಿಧ ಪರೀಕ್ಷೆಗಳನ್ನು ನಡೆಸಿದರೂ ಅದು ಶೇ.30ರಷ್ಟು ಮಾತ್ರ ಪರಿಣಾಮ ಬೀರುತ್ತದೆ. ಬದಲಾಗಿ ನಮ್ಮಲ್ಲಿನ ಕೌಶಲಗಳೇ ಪ್ರಮುಖವಾಗುತ್ತವೆೆ. ಭಾವನಾತ್ಮಕ ಬುದ್ಧಿವಂತಿಕೆಯು ವಿಭಿನ್ನ ವ್ಯಾಯಾಮ ಮತ್ತು ಆಚರಣೆಯ ಮುಖೇನ ವಿಕಸನಗೊಳ್ಳಬಹುದು. ಭಾವನಾತ್ಮಕ ಬುದ್ಧಿವಂತಿಕೆಯು ವಿವಿಧ ಕೌಶಲಗಳಿಂದ ಕೂಡಿರುತ್ತದೆ. ಮುಖ್ಯವಾಗಿ, ನಮ್ಮ ಭಾವನೆಗಳು, ಮೌಲ್ಯಗಳನ್ನು ಗುರುತಿಸಿ ನಮ್ಮ ಬಗ್ಗೆ ಸ್ವಯಂ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ. ಜತೆಗೆ ಸ್ವಯಂ ನಿಯಂತ್ರಣದಿಂದ ಕೂಡಿರುತ್ತದೆ. ಇತರರೊಂದಿಗೆ ಸಂವಹನ ಮಾಡುವ ನಮ್ಮ ಸಾಮರ್ಥ್ಯವನ್ನು ಭಾವನಾತ್ಮಕ ಬುದ್ಧಿವಂತಿಕೆಯು ನಿರ್ಣಯಿಸುತ್ತದೆ. ಭಾವನಾತ್ಮಕ ಬುದ್ಧಿವಂತಿಕೆಯನ್ನು ಮೂರು ಆಯಾಮಗಳಲ್ಲಿ ವ್ಯಾಖ್ಯಾನಿಸಬಹುದಾಗಿದೆ. ಸಾಮರ್ಥ್ಯದ ಮಾದರಿ, ಮಿಶ್ರ ಮಾದರಿಯ ಮತ್ತು ವಿಶೇಷ ಗುಣಗಳುಳ್ಳ ಮಾದರಿಗಳಲ್ಲಿ ವ್ಯಾಖ್ಯಾನ ಮಾಡಬಹುದಾಗಿದೆ.
“ಸ್ವಂತವಾಗಿ ತಾನೇ ಅರಿತು ಮಾಡುವುದು ಭಾವನಾತ್ಮಕಕ ಬುದ್ಧಿವಂತಿಕೆಯ ಪ್ರಮುಖ ವಿಚಾರವಾಗಿದೆ. ಸ್ವ ಜಾಗೃತಿ ಹೊಂದುವುದು, ಭಾವನೆಗಳನ್ನು ಗುರುತಿಸುವಂತಹ ಸಾಮರ್ಥ್ಯ ಇರುವುದನ್ನು ಭಾವನಾತ್ಮಕ ಬುದ್ಧಿವಂತಿಕೆ’ ಎಂದು ಮನಃಶಾಸ್ತ್ರಜ್ಞ ಹಾಗೂ ಲೇಖಕ ಡೇನಿಯಲ್ ಗೊಲೆಮನ್ ಅವರು ಹೇಳಿದ್ದಾರೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪರಿಣಾಮ
ಭಾವನಾತ್ಮಕ ಬುದ್ಧಿವಂತಿಕೆ ಮೇಲೆ ನಡೆದ ಸಂಶೋಧನೆಯಲ್ಲಿ ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 1966ರಲ್ಲಿ ಬಳಕೆ
“ಭಾವನಾತ್ಮಕ ಬುದ್ಧಿವಂತಿಕೆ’ ಎಂಬ ಪದವು 1966ರಲ್ಲಿ ಲ್ಯೂನರ್ ಎಂಬಾತ ಬಳಸಿದ. ವೇನ್ ಪೇನ್ ಎಂಬಾತ 1985ರಲ್ಲಿ ತನ್ನ ಡಾಕ್ಟರೇಟ್ ಮಹಾಪ್ರಬಂಧವಾದ “ಭಾವಗಳ ಅಧ್ಯಯನ’ ಎಂಬ ಕೃತಿಯಲ್ಲಿ ಭಾವನಾತ್ಮಕ ಬುದ್ಧಿವಂತಿಕೆಯ ¸ಳವಣಿಗೆಗೆ ಸಂಬಂಧಿಸಿದಂತೆ ಬಳಸಿದ್ದಾರೆ. 1990ರಲ್ಲಿ ಸಲೋವೆ, 1995ರಲ್ಲಿ ಗೊಲೆಮನ್ ಬಳಿಕ ಗ್ರೀನ್‌ಸ್ಟಾನ್ ಕೂಡ ಇಕ್ಯೂ ಮಾದರಿಯನ್ನು ಮುಂದಿಟ್ಟಿದ್ದರು. ಬುದ್ಧಿವಂತಿಕೆಗೆ ವಿವಿಧ ಆ್ಯಪ್
ಭಾವನಾತ್ಮಕ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಮೊಬೈಲ್‌ನಲ್ಲಿಯೇ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ಲೇಸ್ಟೋರ್‌ನಲ್ಲಿ ಎಮೋಷನಲ್ ಇಂಟೆಲಿಜೆನ್ಸ್, ಎಮೋಷನಲ್ ಇಂಟಲಿಜೆನ್ಸ್ ಆ್ಯಂಡ್ ಲೀಡರ್‌ಶಿಪ್, ಎಮೋಷನಲ್ ಇಂಟಲಿಜೆನ್ಸ್ ಝೋನ್/ಎಟ್ ವರ್ಕ್ ಸೇರಿದಂತೆ ಹತ್ತಾರು ಆ್ಯಪ್‌ಗ್ಳಿವೆ. ಗ್ರಹಿಕೆಗೆ ಮುಖ್ಯ
ಭಾವನಾತ್ಮಕ ಬುದ್ಧಿವಂತಿಕೆ ಅಂದರೆ ಸಂದರ್ಭಕ್ಕೆ ತಕ್ಕಂತೆ ಬರುವ ಪ್ರತಿಕ್ರಿಯೆಯಾಗಿದೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ಉತ್ತರಿಸುವ ಸಂದರ್ಭವಾಗಿದೆ. ಇಕ್ಯೂನಲ್ಲಿ ನಮ್ಮ ಸುತ್ತಮುತ್ತಲಿನ ವಿಷಯ ಗ್ರಹಿಸುವುದು ಮುಖ್ಯವಾಗಿರುತ್ತದೆ.
– ಡಾ| ಹರಿಪ್ರಸಾದ್ ಸುವರ್ಣ, ವೈದ್ಯರು - ನವೀನ್ ಭಟ್ ಇಳಂತಿಲ