Advertisement

ಎಮಿರೆಟ್ಸ್‌ ನಿರ್ಧಾರ ಬದಲು

06:00 AM Jul 05, 2018 | Team Udayavani |

ದುಬೈ/ನವದೆಹಲಿ: ವಿಮಾನ ಸೇವೆಯಲ್ಲಿ “ಹಿಂದೂ ಊಟ’ ನೀಡುವುದಿಲ್ಲ ಎಂದು ಘೋಷಿಸಿದ್ದ ದುಬೈನ ಎಮಿರೆಟ್ಸ್‌ ವಿಮಾನ ಸಂಸ್ಥೆ ತನ್ನ ನಿಲುವು ಬದಲಾಯಿಸಿದೆ. ಜತೆಗೆ ಯಥಾ ಸ್ಥಿತಿಯನ್ನು ಮುಂದುವರಿಸುವುದಾಗಿ ಬುಧವಾರ ಘೋಷಣೆ ಮಾಡಿದೆ. ಗ್ರಾಹಕರು ಸೂಚಿಸಿದ ಅಭಿಪ್ರಾಯ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿತ್ತು. 

Advertisement

 “ಹಿಂದೂ ಗ್ರಾಹಕರು ಟಿಕೆಟ್‌ ಕಾಯ್ದಿರಿಸುವ ಸಂದರ್ಭದಲ್ಲಿ ಭಾರತದ ಇತರ ಪ್ರಾಂತೀಯವಾಗಿ ಲಭ್ಯವಿರುವ ಸಸ್ಯಾಹಾರ ಅಥವಾ ಮಾಂಸಾಹಾರ ಊಟ ಕಾಯ್ದಿರಿಸಬಹುದು ಎಂದು ಹೇಳಿದೆ. ಗ್ರಾಹಕರ ಆಯ್ಕೆ ಮತ್ತು ಆರೋಗ್ಯವನ್ನು ಅನುಸರಿಸಿಕೊಂಡು ಊಟದ ಅಗತ್ಯವನ್ನು ಪೂರೈಸಲಿದೆ. ಸಸ್ಯಾಹಾರಿಗಳಿಗಾಗಿ ಜೈನ್‌ ಸಮುದಾಯದ ಆಹಾರ ವ್ಯವಸ್ಥೆಯೂ ಇದೆ. ಜತೆಗೆ ಬೀಫ್ ಅಥವಾ ಹಂದಿ ಮಾಂಸ  ರಹಿತ ಮಾಂಸಾಹಾರ ಆಹಾರದ ಪೂರೈಕೆ ಮುಂದು ವರಿಯಲಿದೆ ಎಂದಿತ್ತು.  

ಎಮಿರೆಟ್ಸ್‌ ವಿಮಾನ ಯಾನ ಸಂಸ್ಥೆ ಮಂಗಳವಾರ ಘೋಷಣೆ ಮಾಡಿದ ಈ ಕ್ರಮ ಹಲವಾರು ಮಂದಿಯ ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನವದೆಹಲಿಯ ಟ್ರಾವೆಲ್‌ ಏಜೆಂಟ್‌ “ವಿಮಾನದಲ್ಲಿ ಪ್ರಯಾಣಿಸುವ ಎಲ್ಲರಿಗೂ ಅಲ್ಲಿನ ಆಹಾರ ವ್ಯವಸ್ಥೆ ಗೊತ್ತಿರುವುದಿಲ್ಲ. ಒಟ್ಟು ಪ್ರಯಾಣಿಕರ ಪೈಕಿ ಬೆರಳೆಣಿಕೆ ಮಂದಿ ಮಾತ್ರ ಯಾವತ್ತೂ ವಿಮಾನದಲ್ಲಿಯೇ ಪ್ರಯಾಣಿಸುತ್ತಾರೆ. ಅಂಥವರಿಗೆ ಮಾತ್ರ ಈ ವ್ಯತ್ಯಾಸ ಗೊತ್ತಾಗುತ್ತದೆ. ಕೆಲವರು ಮಾಂಸಾಹಾರಿಗಳಾಗಿದ್ದರೂ, ಬೀಫ್ ಆಯ್ಕೆ ಮಾಡಿಕೊಳ್ಳುವುದಿಲ್ಲ. ಇದೊಂದು ಗೊಂದಲಕ್ಕೆ ಕಾರಣವಾಗಲಿದೆ’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next