Advertisement
ಶಿರಸಿ ತಾಲೂಕಿನಲ್ಲಿ ಹರಿವ ವರದಾ, ಅಘನಾಶಿನಿ, ಶಾಲ್ಮಲಾ ನದಿಗಳು ಈ ಬಾರಿ ಬೇಸಿಗೆ ಆರಂಭದಲ್ಲೇ ನಿಧಾನವಾಗಿ ಹರಿವು ನಿಲ್ಲಿಸಿದ್ದರ ಪರಿಣಾಮ ಬಾವಿಗಳಲ್ಲೂ ಜಲ ಕೊರತೆ ಆರಂಭವಾಗಿದೆ. ಕಳೆದ ಏಪ್ರೀಲ್ ಕೊನೆ, ಮೇ ಮೊದಲ ವಾರದ ತನಕವೂ ಅಷ್ಟಾಗಿ ಕಾಡದ ನೀರು ಈಗ ಕೊರತೆಯನ್ನು ಬಳುವಳಿಯಾಗಿ ನೀಡುತ್ತಿದೆ.
Related Articles
Advertisement
ಶಿರಸಿಯಲ್ಲಿ ಜೀವಜಲ ಕಾರ್ಯಪಡೆ ನೀರು ಉಳಿಸುವ ಕೆರೆ ಅಭಿವೃದ್ಧಿ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲೇ ಶ್ರೀನಿವಾಸ ಹೆಬ್ಟಾರ ನೇತೃತ್ವದಲ್ಲಿ ನಡೆಸಿದ್ದಾರೆ. ಬಾವಿಗಳ ನೀರು ಬಳಸಿ ಮಿತವಾಗಿ ಇರಲಿ ನೀರಿನ ವ್ಯಯ ಎಂಬ ಮಾತುಗಳೂ ವ್ಯಕ್ತವಾಗಿದೆ.
ಶಿರಸಿ ನೀರ್ನಳ್ಳಿ ಜನತಾ ಕಾಲನಿಯಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಬನವಾಸಿ ಹೋಬಳಿಯ ಐದಾರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತಾತ್ಕಾಲಿಕವಾಗಿ ಪೂರೈಕೆಗೆ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಕಾಡಿನಲ್ಲಿರುವ ವನ್ಯಮೃಗಗಳಿಗೆ ತೊಂದರೆ ಆಗಬಾರದು ಎಂದು ಅರಣ್ಯ ಇಲಾಖೆ ಬನವಾಸಿ ವಲಯದಲ್ಲಿ ನೀರಿನ ಟಾಕಿ ಇಡಲೂ ಮುಂದಾಗಿದ್ದಾರೆ. ಉಳಿದ ಭಾಗದ ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಅವುಗಳಿಗೆ ಏನು ಮಾಡಬೇಕು ಎಂಬುದೂ, ಉಭಯ ವಾಸಿಗಳು, ಜಲಚರಗಳಿಗೂ ಈಗ ಜಲ ಸಂಕಷ್ಟ ಕಾಡುತ್ತಿದೆ.
ಶಿರಸಿಯ ಉಷ್ಣಾಂಶ ಮಾಧ್ಯಾಹ್ನ 1 ಗಂಟೆ ಸುಮಾರಿಗೆ 39ರಿಂದ 41 ಡಿಗ್ರಿ ಸೆಲ್ಸಿಯಸ್ ಸರಾಸರಿ ಇದ್ದು, ಮಳೆಯೂ ಬಾರದೇ ಕಂಗಾಲಾಗುವಂತೆ ಮಾಡಿದೆ. ಉಷ್ಣಾಂಶ ರಾತ್ರಿ 18:20ಕ್ಕೆ ಬರುತ್ತಿರುವುದರಿಂದ ಅಡಕೆ ಬೇಸಾಯದ ಭವಿಷ್ಯದ ಬೆಳೆಯ ಮೇಲೂ ಪರಿಣಾಮ ಉಂಟು ಮಾಡುವಂತೆ ಆಗಿದೆ.
ಜೀವಜಲ ಕಾರ್ಯಪಡೆ ಎಂಟತ್ತು ಕೆರೆಗಳನ್ನು ಮಾದರಿಯಾಗಿ ಮಾಡಿದೆ. ಮನು ವಿಕಾಸ ಸಂಸ್ಥೆ ಕೆಲವನ್ನು ಮಾಡಿದೆ. ಇನ್ನೂ ಕೆರೆಗಳ ಅಭಿವೃದ್ಧಿ ಆಗಬೇಕಾದ್ದು ಸಾಕಷ್ಟು ಇದೆ. ಎಲ್ಲರೂ ಒಟ್ಟಾಗಿ ಕೆರೆಯ, ಕಾಡಿನ ಉಳಿವಿಗೆ ಪಣ ತೊಡದೇ ಇದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಷ್ಟ ಎಂಬುದಂತೂ ಸುಳ್ಳಲ್ಲ.
•ರಾಘವೇಂದ್ರ ಬೆಟ್ಟಕೊಪ್ಪ