ಸಮಾಜಘಾತುಕ ಶಕ್ತಿಗಳು ಹಾಗೂ ಸರ್ಕಾರ ಬುಡಮೇಲು ಮಾಡುವ ಪ್ರಯತ್ನಕ್ಕೆ ಮುಂದಾದವರನ್ನು ಮಾತ್ರ ನಿಯಂತ್ರಣ ಮಾಡಲಾಗಿತ್ತು. ಅಂದಿನ ಹೋರಾಟಗಾರರು ಇಂದಿರಾ ಗಾಂಧಿ ಅವರ ಸರ್ಕಾರದ ವಿರುದ್ಧ ಹೋರಾಟ ಮಾಡದೆ, ದೇಶದ ಸೇನೆ ಹಾಗೂ ಸಶಸ್ತ್ರ ಪಡೆಗಳು ದಂಗೆ ಏಳುವಂತೆ ಕರೆ ನೀಡಿದ್ದರು. ಆಗ ಬೇರೆ ದಾರಿಯಿಲ್ಲದೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ನಿಯಂತ್ರಿಸಿದರು. ನಂತರದಲ್ಲಿ ಸ್ವತಃ ಇಂದಿರಾ ಗಾಂಧಿ ಅದನ್ನು ವಾಪಸ್ ಕೂಡ ಪಡೆದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥನೆ ನೀಡಿದರು.
ಎಂದಿಗೂ ತಮ್ಮ ಎದುರಾಳಿಗಳ ಮನೆ ಮುಂದೆ ಬುಲ್ಡೋಜರ್ ಕಳುಹಿಸಲಿಲ್ಲ. ಐಎಎಸ್ ಅಧಿಕಾರಿಗಳನ್ನು ಬಂಧಿಸಿರಲಿಲ್ಲ. ನಕಲಿ ಎನ್‌ಕೌಂಟರ್ ಮಾಡಲಿಲ್ಲ. ಹಾಗೆ ನೋಡಿದರೆ, ಆರೆಸ್ಸೆಸ್‌ನ ಅಂದಿನ ಮುಖಂಡರು ತುರ್ತು ಪರಿಸ್ಥಿತಿಗೆ ಬೆಂಬಲ ಘೋಷಿಸಿದ್ದರು. ವಿಚಿತ್ರವೆಂದರೆ ಇಂದು ಬಿಜೆಪಿ ಅದನ್ನು ವಿರೋಧಿಸುತ್ತಿದೆ. ಯಾಕೆ ಬಿಜೆಪಿಯವರು ಆರೆಸ್ಸೆಸ್ ನಿಲುವಿನ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.
Advertisement