Advertisement

Emergency;ಕೆಲವು ದೃಶ್ಯಕ್ಕೆ ಕತ್ತರಿ ಬಿದ್ದರಷ್ಟೇ ಅನುಮತಿ: ಕೋರ್ಟ್‌ಗೆ ಸಿಬಿಎಫ್ಸಿ

01:21 AM Sep 27, 2024 | Team Udayavani |

ಮುಂಬಯಿ: ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್‌ ನಿರ್ದೇಶಿಸಿ, ನಟಿಸಿರುವ ಎಮರ್ಜೆನ್ಸಿ ಸಿನೆಮಾ ತೆರ ಕಾಣಲು ಅನುಮತಿ ನೀಡ ಬೇಕಾದರೆ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲೇ ಬೇಕು ಎಂದು ಸಿಬಿಎಫ್ಸಿ ಬಾಂಬೆ ಹೈಕೋ  ರ್ಟ್‌ಗೆ ತಿಳಿಸಿದೆ. 1975ರ ತುರ್ತುಪರಿಸ್ಥಿತಿ ಆಧಾ ರಿತವಾದ ಈ ಸಿನೆಮಾ ದಲ್ಲಿ ಸಿಕ್ಖರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಮಾಣ ಪತ್ರ ಸಿಕ್ಕಿರಲಿಲ್ಲ. ಸಿಬಿಎಫ್ಸಿ ಅನ್ನು ಕಳೆದ ವಾರ ಕೋರ್ಟ್‌ ತರಾಟೆ ತೆಗೆದುಕೊಂಡ ಹಿನ್ನೆಲೆಯಲ್ಲಿ 11 ದೃಶ್ಯಗಳಿಗೆ ಕತ್ತರಿ ಹಾಕುವ ಸಲಹೆ ನೀಡಲಾಗಿದ್ದು, ಇದಾದರಷ್ಟೇ ಸರ್ಟಿಫಿಕೆಟ್‌ ನೀಡುವುದಾಗಿ ಕೋರ್ಟ್‌ಗೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next