Advertisement

ಮದುವೆಗೆ ಹೋಗಲು ತುರ್ತು ಪಾಸ್‌ ದುರ್ಬಳಕೆ

12:01 PM Apr 16, 2020 | Suhan S |

ಧಾರವಾಡ: ತುರ್ತು ವೈದ್ಯಕೀಯ ಅಗತ್ಯಕ್ಕಾಗಿ ನೀಡಿದ್ದ ಪಾಸ್‌ ದುರುಪಯೋಗಪಡಿಸಿಕೊಂಡು ಮದುವೆಗೆ ಹೋಗಿ ಬಂದವರನ್ನು ಹೋಮ್‌ ಕ್ವಾರಂಟೈನ್‌ ಮಾಡಿದ್ದಲ್ಲದೇ ಇನೊವಾ ವಾಹನ ಜಪ್ತಿ ಮಾಡಿದ ಘಟನೆ ಬುಧವಾರ ನಡೆದಿದೆ.

Advertisement

ಪಾಸ್‌ ದುರುಪಯೋಗಪಡಿಸಿಕೊಂಡು ಹುಬ್ಬಳ್ಳಿಯಲ್ಲಿ ಮಂಗಳವಾರ ಮದುವೆ ಕಾರ್ಯ ಮುಗಿಸಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ ಇನ್ನೊವಾ ವಾಹನದಲ್ಲಿ ಹೊರಟಿದ್ದರು. ಡಿವೈಎಸ್‌ಪಿ ರವಿ ನಾಯಕ ವಾಹನ ನಿಲ್ಲಿಸಿ ಪರಿಶೀಲಿಸಿದಾಗ ತುರ್ತು ವೈದ್ಯಕೀಯ ಅಗತ್ಯಕ್ಕಾಗಿ ನೀಡಿದ್ದ ಪಾಸ್‌ ದುರುಪಯೋಗ ಪಡಿಸಿಕೊಂಡಿದ್ದು ಗಮನಕ್ಕೆ ಬಂತು.

ಎಸ್‌ಪಿ ವರ್ತಿಕಾ ಕಟಿಯಾರ್‌ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಡಿವೈಎಸ್‌ಪಿ ರವಿ ನಾಯಕಇನೊವಾ ವಾಹನದಲ್ಲಿದ್ದ 9ಜನರನ್ನು ಪೊಲೀಸ್‌ ವಾಹನದಲ್ಲಿವೈದ್ಯಕೀಯ ತಪಾಸಣೆಗೆಂದು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಕಳುಹಿಸಿದ್ದಲ್ಲದೇ ಇನೊವಾ ವಾಹನ ಜಪ್ತಿ ಮಾಡಿದ್ದಲ್ಲದೇ ತಪಾಸಣೆ ನಂತರ 9 ಜನರನ್ನೂ ಹೋಮ್‌ ಕ್ವಾರಂಟೈನ್‌ ಕಡ್ಡಾಯಗೊಳ್ಳಿಸಿ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ. ಪಾಸ್‌ ದುರುಪಯೋಗ ಪಡಿಸಿಕೊಂಡ 9 ಜನರು ವಧುವಿನ ಕಡೆಯವರಾಗಿದ್ದು, ಉಪ್ಪಿನಬೆಟಗೇರಿ ಗ್ರಾಮದವರೆಂದು ತಿಳಿಸಿದ್ದಾರೆ.

ಅಗತ್ಯ ಮತ್ತು ತುರ್ತು ನೆರವಿಗೆ ಜಿಲ್ಲಾಡಳಿತ ನೀಡುವ ಪಾಸ್‌ ದುರುಪಯೋಗ ಪಡಿಸಿಕೊಂಡವರ ವಾಹನಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದು ಹೆಚ್ಚಿನ ಮೊತ್ತದ ದಂಡ ವಿ ಸಲಾಗುವುದು ಅಲ್ಲದೇ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿದ ಒಂದು ಸಾವಿರಕ್ಕೂ ದ್ವಿಚಕ್ರ ವಾಹನಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. -ರವಿ ನಾಯಕ, ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next