ಸಂದರ್ಭಗಳಲ್ಲಿ ಜನರು ಸಂಚರಿಸಲು ಪಾಸ್ ಪಡೆಯುವುದು ಕಡ್ಡಾಯ ಮಾಡಲಾಗಿದ್ದು, ಡೀಸಿ, ಎಸ್ಪಿ, ತಹಶೀಲ್ದಾರ್ ಕಚೇರಿ ಬಳಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಹಾಸನ್ ಪೊಲೀಸ್‌ಡಾಟ್ ಕಾಂ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಿದರೆ 2 ಗಂಟೆಯೊಳಗೆ ಅವರ ಅರ್ಜಿ ಇತ್ಯರ್ಥಪಡಿಸಲಾಗುತ್ತದೆ. ಅರ್ಜಿ ಅಂಗೀಕಾರವಾದರೆ ಅವರ ಸಮೀಪದ ಪೊಲೀಸ್ ಠಾಣೆಯಲ್ಲಿ ಪಾಸ್ ಪಡೆದುಕೊಳ್ಳಬಹುದು. ಸ್ಮಾರ್ಟ್ ಫೋನ್ ಇಲ್ಲದವರು, ಇಂಟರ್‌ನೆಟ್ ಸೌಲಭ್ಯ ಇಲ್ಲದ, ಬಳಸಲು ಗೊತ್ತಿಲ್ಲದವರು ಸಮೀಪದ ಪೊಲೀಸ್ ಇನ್‌ಸ್ಪೆಕ್ಟರ್ ಕಚೇರಿ ಅಥವಾ ಡಿವೈಎಸ್ಪಿ ಕಚೇರಿಗೆ ಹೋದರೆ ಅಲ್ಲಿಯೇ ಆನ್ ಲೈನ್‌ನಲ್ಲಿ ಅರ್ಜಿ ಅಪ್‌ಲೋಡ್ ಮಾಡಿಕೊಡಲಾಗುತ್ತದೆ ಎಂದರು.
Advertisement
ಪಾಸ್‌ಪಡೆದು ಬೆಂಗಳೂರು, ಮೈಸೂರು ಮತ್ತಿತರ ಕಡೆ ಹೋದವರು ಅಲ್ಲಿಯೇ ಇರಬೇಕು. ಇಲ್ಲವೇ ವಾಪಸ್ ಬಂದರೆ ಅವರಿಗೆ ಕ್ವಾರಂಟೈನ್ ಸೀಲ್ ಹಾಕಿ 15 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಲಾಗುತ್ತದೆ. ಆದ್ದರಿಂದ ಅನಿವಾರ್ಯವಿದ್ದವರು ಮಾತ್ರ ಪಾಸ್ ಪಡೆಯಬೇಕು ಎಂದರು.
ಬೇಲೂರು ತಾಲೂಕು ಪುರ ಎಸ್ಟೇಟ್‌ನ ಮಾಲೀಕ 23 ಕಾರ್ಮಿಕರನ್ನು ಅಕ್ಕಿ ಚೀಲ ತುಂಬಿದ ಲಾರಿಯಲ್ಲಿ ಟಾರ್ಪಲ್ ಹೊದಿಸಿ ಚಿಕ್ಕಮಗಳೂರು ಜಿಲ್ಲೆಗೆ ಕಳುಹಿಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದ್ದು ಮಾಲೀಕ ಮತ್ತು ತೋಟದ ಮ್ಯಾನೇಜರ್ ವಿರುದ್ಧ ಪ್ರರಕಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಸಾಮಾಜಿಕ ಅಂತರ ಕಾಪಾಡಿ:
ಜಿಲ್ಲೆಯಲ್ಲಿ ಈಗ ದಿನಸಿ, ತರಕಾರಿ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರು ಸಹಕರಿಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳದ 2 ಅಂಗಡಿಗಳ ಬಂದ್ ಮಾಡಿಸಿ ಲೈಸೆನ್ಸ್ ರದ್ದುಪಡಿಸಿದ ನಂತರ ವರ್ತಕರೇ ಎಚ್ಚೆತ್ತುಕೊಂಡು ಗ್ರಾಹಕರಿಗೆ ತಿಳಿ ಹೇಳಿ ಸಹಕರಿಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುತ್ತಿದ್ದ 1,150 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.