Advertisement
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಸಹಿತ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ವಿವಿಧ ಚಟುವ ಟಿಕೆಗಳು ನಡೆಯುತ್ತವೆ. ಹಡಗು ಗಳು, ನೂರಾರು ಮೀನುಗಾರಿಕೆ ಬೋಟ್ ದಿನನಿತ್ಯ ಸಂಚರಿಸುತ್ತವೆ. ಕಡಲಿನಲ್ಲಿ ದುರ್ಘಟನೆ ಗಳು ಸಂಭವಿಸಿದಾಗ ತತ್‌ಕ್ಷಣ ರಕ್ಷಣೆಗೆ ಹೆಲಿಕಾಪ್ಟರ್ ಅನಿವಾರ್ಯ. ಆದರೆ ನಮ್ಮ ಕರಾವಳಿಯಲ್ಲಿ ಒಂದೂ ಇಲ್ಲ!
ಶನಿವಾರ ಟಗ್ ದುರಂತ ಅರಿವಿಗೆ ಬಂದ ಕೂಡಲೇ ರಕ್ಷಣ ಕಾರ್ಯಾಚರಣೆ ಆರಂಭ ವಾಗಿತ್ತು. ಆದರೆ ಯಶಸ್ವಿಯಾಗಿರಲಿಲ್ಲ. ಹೆಲಿ ಕಾಪ್ಟರ್ ಅನಿವಾರ್ಯವೆನಿಸಿದಾಗ ಸೇನೆಯಿಂದ ತರಿಸಲು ಜಿಲ್ಲಾಡಳಿತ ತೀರ್ಮಾನಿಸಿತು. ರವಿವಾರ ಸಂಜೆ 4ಕ್ಕೆ ಗೋವಾದಿಂದ ಅದು ಮಂಗಳೂರಿಗೆ ಬರಬೇಕಿತ್ತು. ಆದರೆ ಮಳೆಯಿಂದ ಸಾಧ್ಯವಾಗಿಲ್ಲ. ಕೊಚ್ಚಿಯಿಂದ ತರಿಸುವ ಬಗ್ಗೆಯೂ ಮಾತುಕತೆ ನಡೆಯಿತು. ಮಳೆ ಅದಕ್ಕೂ ಕಲ್ಲು ಹಾಕಿತು. ದ.ಕ. ಕರಾವಳಿಯಲ್ಲೇ ಹೆಲಿಕಾಪ್ಟರ್ ಇರುತ್ತಿದ್ದರೆ ಘಟನೆ ಸಂಭವಿಸಿದ ತತ್‌ಕ್ಷಣ ರಕ್ಷಿಸಬಹುದಿತ್ತು.
Related Articles
ಮರವೂರಿನಲ್ಲಿ ಅತ್ಯುನ್ನತ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆಯಾಗಲಿದೆ. ಅದಕ್ಕಾಗಿ ವರ್ಷ ದೊಳಗೆ 2 ಹೆಲಿಕಾಪ್ಟರ್ ಆಗಮಿಸಲಿವೆ ಎಂಬ ಮಾಹಿತಿ ಇದೆ. ಅದುವರೆಗೆ ಕೊಚ್ಚಿ, ಗೋವಾ ಅವ ಲಂಬನೆ ಅನಿವಾರ್ಯ ಎಂದು ದ.ಕ. ಜಿಲ್ಲಾ ಉಸ್ತು ವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Advertisement
ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ನೌಕಾಪಡೆ ಅಥವಾ ವಾಯು ಪಡೆ ಹೆಲಿಕಾಪ್ಟರ್ ಬಳಸಿಕೊಳ್ಳುತ್ತೇವೆ. ಕರಾವಳಿಗೆ ಹೆಲಿಕಾಪ್ಟರ್ ಅಗತ್ಯವಿರುವ ಕುರಿತು ಸರಕಾರದ ಗಮನಕ್ಕೆ ತರುತ್ತೇವೆ.– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ ಸಮುದ್ರದಲ್ಲಿ ಅವಘಡ ಸಂಭವಿಸಿದಾಗ ರಕ್ಷಣೆಗೆ ಹೆಲಿಕಾಪ್ಟರ್‌ನ ತುರ್ತು ಅಗತ್ಯವಿದೆ. ರಾಜ್ಯ ಸರಕಾರಕ್ಕೆ ಪತ್ರ ಬರೆದು ಅಲ್ಲಿಂದ ರಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ವಿನಂತಿಸಲಾಗುವುದು.
– ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ – ದಿನೇಶ್ ಇರಾ