Advertisement
ಕಳೆದ ಆರು ತಿಂಗಳ ಹಿಂದೆಯೇ ಕೊಂತ ದುರಸ್ಥಿ ಮಾಡಬೇಕು ಎಂದು ಮದಗದಕೆರೆಯಲ್ಲಿ ಇದ್ದಂತಹ 25 ಅಡಿನೀರನ್ನು ಖಾಲಿ ಮಾಡಿಸಲಾಗಿತ್ತು. ಆದರೆ ಮಳೆಗಾಲ ಪ್ರಾರಂಭವಾದರೂ ದುರಸ್ಥಿ ಕಾರ್ಯ ನಡೆದಿರಲಿಲ್ಲ.
ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದರು. ತಾಲೂಕಿನಲ್ಲಿ ಅತೀ ದೊಡ್ಡ ಕೆರೆ ಮತ್ತು ರೈತರ ಜೀವನಾಡಿ ಹಾಗೂ ಇತಿಹಾಸ ಹೊಂದಿರುವ ಕೆರೆಯಾಗಿದೆ. ಈ ಕೆರೆ ತುಂಬಿದರೆ ಕೆಳಭಾಗದ ಕೆರೆಗಳಿಗೆ ನೀರು ಹರಿಯುತ್ತದೆ. ಇದರಿಂದ
ಕೆಳಭಾಗದ ಕೊಳವೆಬಾವಿಗಳಿಗೆ ಅಂರ್ತಜಲ ವೃದ್ಧಿಯಾಗಲಿದೆ ಎಂದರು. ಶಾಶ್ವತ ದುರಸ್ಥಿ ಕಾರ್ಯಕ್ಕೆ ಹಣವಿಲ್ಲ. ತಾವು ಶಾಸಕರಾಗಿ ಇನ್ನೂ 15 ದಿನಗಳಾಗಿವೆ. ಈ ಹಿಂದೆ ಕೆರೆಯ ಕೊಂತ ರಿಪೇರಿಗೆ ಅನುದಾನ ಬಾರದೇ ಇರುವುದರಿಂದ ಮುಂದಿನ ವರ್ಷ ಈ ಕೆರೆಯ ಶಾಶ್ವತ ದುರಸ್ಥಿಗೆ 50 ಲಕ್ಷ ರೂ. ತರುತ್ತೇನೆ ಎಂದರು.
Related Articles
Advertisement
ಕೆರೆಯೆಂದರೆ ಶಾಸಕರು, ಅಧಿಕಾರಿಗಳು ಮಾತ್ರ ಜವಾಬ್ದಾರರು ಎಂಬದಾಗಿದೆ. ಕೆರೆಯ ನೀರನ್ನು ಬಳಸುವ ಎಲ್ಲರಿಗೂ ಇದು ನಮ್ಮ ಕೆರೆ ಎಂಬ ಭಾವನೆ ಬರಬೇಕು. ತೂಬಿನ ದುರಸ್ಥಿ ಸಂದಂರ್ಭ ಪ್ರತಿಯೊಬ್ಬ ರೈತರು ನಿಂತು ಸಹಕಾರ ನೀಡಬೇಕು, ಈ ಕಾರ್ಯಕ್ಕೆ ನೀರು ಬಳಸುವ ಎಲ್ಲರೂ ಜವಾಬ್ದಾರರಾಗಬೇಕು ಎಂದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್. ಎನ್. ಚನ್ನಬಸಪ್ಪ ಮಾತನಾಡಿ, ಕಳೆದ 10 ವರ್ಷಗಳಷ್ಟು ಹಳೇಯದಾಗಿರುವ ತೂಬಿನ ಸವಕಳಿಯಾಗಿ ಅನಾವಶ್ಯಕವಾಗಿ ಕೆರೆಯ ನೀರು ಸೊರಿಕೆಯಾಗುತ್ತಿದೆ, ತಾತ್ಕಾಲಿಕವಾಗಿ ಮರಳು ಚೀಲ ತುಂಬಿ ರಬ್ಬರ್ ಬುಷ್ ಅಳವಡಿಸುವ ಮೂಲಕ ಕೆರೆಯ ನೀರನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅರೇಕಲ್ ಪ್ರಕಾಶ್, ಕೆ.ಎನ್. ಬೊಮ್ಮಣ್ಣ, ರಮೇಶ್ ನಾಯ್ಕ, ಚಿಕ್ಕಯ್ಯ, ರಾಮಾನಾಯ್ಕ, ಶಶಿ, ವೀರೇಶ್ ಬಾಬು, ವೀರಪ್ಪ, ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.