Advertisement

ದಿಢೀರ್‌ ಸರ್ವೆ: ಆತಂಕಗೊಂಡ ತಣ್ಣಿಮಾನಿ ಗ್ರಾಮಸ್ಥರು

11:58 PM Jun 02, 2019 | Team Udayavani |

ಮಡಿಕೇರಿ: ಡಾ.ಕಸ್ತೂರಿರಂಗನ್‌ ವರದಿಯ ತೂಗುಗತ್ತಿಯಡಿಯಲ್ಲೇ ದಿನದೂಡುತ್ತಿದ್ದ ಭಾಗಮಂಡಲದ ತಣ್ಣಿಮಾನಿ ಗ್ರಾಮಸ್ಥರಿಗೆ ಆಘಾತವೊಂದು ಎದುರಾಗಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ದಿಢೀರ್‌ ಸರ್ವೆ ಕಾರ್ಯ ಆರಂಭಿಸಿರುವ ಅರಣ್ಯ ಇಲಾಖೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

Advertisement

ಅರಣ್ಯಾಧಿಕಾರಿಗಳ ಕ್ರಮದಿಂದ ದಾರಿ ತೋಚದಾಗಿರುವ ಗ್ರಾಮಸ್ಥರು ಶನಿವಾರ ಜಿಲ್ಲಾಡಳಿತವನ್ನು ಭೇಟಿಯಾಗಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲು ಸೂಚನೆ ನೀಡುವಂತೆ ಮನವಿ ಮಾಡಿದರು.

ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಣ್ಣಿಮಾನಿ ಗ್ರಾಮ ನಿವಾಸಿಗಳು ಏಕಾಏಕಿ ಸರ್ವೆ ಕಾರ್ಯ ಆರಂಭಿಸುವ ಮೂಲಕ ಕೃಷಿ ಜಮೀನುಗಳನ್ನು ಅರಣ್ಯ ಎಂದು ಹೇಳುವ ಮೂಲಕ ಅರಣ್ಯ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ ಎಂದು ಆರೋಪಿಸಿದರು. ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸದಿದ್ದಲ್ಲಿ ಭಾಗಮಂಡಲ ಹೋಬಳಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಒಗ್ಗೂಡಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮಸ್ಥರ ಪರವಾಗಿ ಮಾತನಾಡಿದ ಮಡಿಕೇರಿ ತಾಲೂಕು ಲ್ಯಾಂಪ್ಸ್‌ ನಿರ್ದೇಶಕ ಹಾಗೂ ಬಿಜೆಪಿ ಎಸ್‌ಟಿ ಮೋರ್ಚಾದ ಅಧ್ಯಕ್ಷ ಮಿಟ್ಟು ರಂಜಿತ್‌ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಅವರುಗಳು ಅರಣ್ಯ ಇಲಾಖೆ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮದ ಅರಣ್ಯದ ಅಂಚಿನಲ್ಲಿರುವ ಪ್ರದೇಶವು ಕಂದಾಯ ಜಾಗವಾಗಿದ್ದು, ಇಲ್ಲಿ ಸುಮಾರು 70-80 ವರ್ಷಗಳಿಂದ ಜನರು ಕೃಷಿ ಮಾಡಿಕೊಂಡು ವಾಸವಾಗಿದ್ದಾರೆ.

ಅರಣ್ಯ ಇಲಾಖೆ ತೆಗೆದುಕೊಂಡಿರುವ ಜನವಿರೋಧಿ ಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಕ್ಷೇತ್ರದ ಸಂಸದರ ಗಮನ ಸೆಳೆಯುವುದಾಗಿ ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಆರ್‌.ದಾಸಪ್ಪ, ದೇವಂಗೋಡಿ ಭಾಸ್ಕರ, ಕೆ.ಕೆ.ಪಾರ್ವತಿ ಹಾಗೂ ಕೆ.ಸಿ.ಸರಸ್ವತಿ ಉಪಸ್ಥಿತರಿದ್ದರು

Advertisement

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಗ್ರಾಮದ 20 ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಭರವಸೆ ನೀಡಿದ್ದರು!

ಎರಡು ವರ್ಷಗಳ ಹಿಂದೆ ಇದೇ ರೀತಿ ಸರ್ವೆ ಕಾರ್ಯ ಆರಂಭಿಸಿದಾಗ, ಗ್ರಾಮಸ್ಥರು ಮೂರು ದಿನಗಳ ಕಾಲ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದಾಗ ಮುಂದೆ ಈ ರೀತಿಯ ತೊಂದರೆ ಮಾಡುವುದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈಗ ರಾಜ್ಯ ಸರಕಾರದ ಆದೇಶವಿದೆ ಎಂದು ಹೇಳಿಕೊಂಡು ಸರ್ವೆ ಕಾರ್ಯ ಆರಂಭಿಸಿದ್ದು, ಗ್ರಾಮಸ್ಥರು ಬೆಳೆದಿರುವ ಕೃಷಿಯನ್ನೂ ಹಾಳುಗೆv ‌ವಿದ್ದಾರೆ. ವಾರಸುದಾರರು ಇಲ್ಲದಿರುವ ಸಂದರ್ಭದಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದು, ಮನೆಯಲ್ಲಿರುವವರಿಂದ ಬಲವಂತ ವಾಗಿ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next