ಚೇಳ್ಯಾರು: ನಮ್ಮ ಜೀವನವನ್ನು ರೂಪಿಸುವ ಶಿಲ್ಪಿಗಳು ನಾವೇ ಆಗಿದ್ದೇವೆ. ಧನಾತ್ಮಕವಾದ ಯೋಚನೆಗಳೊಂದಿಗೆ ನಾವು ಕಾಣುವ ಕನಸು ಗುರಿಯೆಡೆಗೆ ತಲುಪಿಸುವ ಪರಿಕರವಾಗಬೇಕು. ಜೀವನ ಮೌಲ್ಯವನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಬೆಳೆಯಿರಿ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಇಲ್ಲಿ ನಡೆದ ವಿದ್ಯಾನಿಧಿ ಸಮರ್ಪಣೆ, ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಯೊಂದು ಎಲ್ಲ ಮೂಲಸೌಕರ್ಯಗಳೊಂದಿಗೆ ಸುಮಾರು 700 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದು, ನನ್ನ ಕ್ಷೇತ್ರ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮಾದರಿ ಶಾಲೆಯಾಗಿರುವುದು ಹೆಮ್ಮೆ. ಈ ಶಾಲೆಯ ಅಭಿವೃದ್ಧಿ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರಲ್ಲದೆ, ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸಿದ ಮುಂಬಯಿ ಉದ್ಯಮಿ ಕರುಣಾಕರ ಶೆಟ್ಟಿ ಮಧ್ಯ ಗುತ್ತು ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಮುಂಬಯಿ ಉದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯ ಗುತ್ತು ಶಾಲೆಯ ಶಾಶ್ವತ ನಿಧಿಗೆ ಚಾಲನೆ ನೀಡಿ ಮಾತನಾಡಿ, ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಅತ್ಯಗತ್ಯ ನಮ್ಮಲ್ಲಿರುವ ಸಾಮರ್ಥ್ಯಕ್ಕೆ ತಕ್ಕುದಾದ ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಲಿ. ಕಠಿನ ಪರಿಶ್ರಮ ಪಡುವ ಎಲ್ಲರೂ ಖಂಡಿತಾ ಯಶಸ್ವಿಯಾಗುತ್ತಾರೆ ಎಂದರು. ಪ್ರಾರಂಭಿಕವಾಗಿ 5 ಲಕ್ಷ ರೂ. ವನ್ನು ವಿದ್ಯಾನಿಧಿಗೆ ಹಸ್ತಾಂತರಿಸಿದರಲ್ಲದೆ, ಈ ಶಾಲೆಯು ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ಶಾಲೆಯ ಪಕ್ಕದಲ್ಲಿನ 2 ಎಕ್ರೆ
ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ, ಕಾಂಪೌಂಡು ರಚನೆ , ಆಟದ ಮೈದಾನ ಮಾಡುವ ಉದ್ದೇಶವಿದ್ದು, ನೆರವು ನೀಡುವುದಾಗಿ ನುಡಿದರು.
ಮುಖ್ಯ ಅತಿಥಿಗಳಾಗಿದ್ದ ಪದ್ಮಶ್ರೀ ಪುರಸ್ಕಾರ ಪಡೆದ ಹರೇಕಳ ಹಾಜಬ್ಬ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಳಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ವಹಿಸಿದ್ದರು. ಉದ್ಯಮಿಗಳಾದ ರಘರಾಮ್ ಶೆಟ್ಟಿ ಬೋಳ, ಉದ್ಯಮಿ ಮೋಹನ್ ಚೌಟ ಮಧ್ಯ, ಕರ್ನಿರೆ ವಿಶ್ವನಾಥ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಡಿ.ಕೆ.ಶೆಟ್ಟಿ ಸೂರಿಂಜೆ, ಚೇಳಾರು ಪಿಡಿಒ ನಿತ್ಯಾನಂದ, ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ, ಎಂಆರ್‌ಪಿಎಲ್ ಸಂಸ್ಥೆಯ ಹಿರಿಯ ಪ್ರಭಂದಕ ಸೀತಾರಾಮ ರೈ, ಶಾಲೆಯ ನಿವೃತ್ತ ಶಿಕ್ಷಕ ಶಂಕರ್, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ಗುಣಪಾಲ ದೇವಾಡಿಗ, ಕೋಶಾಧಿಕಾರಿ ಪ್ರಕಾಶ್ ಎಂ. ಶೆಟ್ಟಿ, ಸದಸ್ಯರಾದ ವಿಟಲ ಶೆಟ್ಟಿ, ವಜ್ರಾಕ್ಷಿ ಪಿ. ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ದೇವಾಡಿಗ, ಕೋಶಾಧಿಕಾರಿ ಹರೀಶ್ ಭಂಡಾರಿ, ಸಂಘಟನ ಕಾರ್ಯದರ್ಶಿ ಕಿರಣ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿ ಹರಿಪ್ರಸಾದ್ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾ, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಪ್ಷರಾಜ್ ಶೆಟ್ಟಿ ಸ್ವಾಗತಿಸಿದರು. ಶಾಲಾಭಿವೃದ್ಧಿ
ಸಮಿತಿ ಅಧ್ಯಕ್ಷ ಭಗವಾನ್ ವಂದಿಸಿದರು. ಪ್ರಸಾದ್ ಎಂ. ಶೆಟ್ಟಿ ನಿರೂಪಿಸಿದರು.