Advertisement
ಕನಸು ಕಾಣುವ ಮನಸ್ಸು ಎಲ್ಲರಿಗೆ ಇರುತ್ತದೆ. ಎಲ್ಲ ಕನಸುಗಳಿಗೆ ನನಸಾಗುವ ಸೌಭಾಗ್ಯ ಇರುವುದಿಲ್ಲ ಅಷ್ಟೇ!.
Related Articles
Advertisement
ಬಣ್ಣ ಬಣ್ಣದ ಕನಸು ನನಸಾಗುವುದು ಡೌಟ್ !ನಿದ್ದೆಯ ಕನಸುಗಳೆಂದರೆ, ಅಲ್ಲಿ ಸ್ವಾರ್ಥಗಳಿರುತ್ತವೆ, ಆಸೆಗಳಿರುತ್ತವೆ. ನಮ್ಮ ಮೆಚ್ಚಿನ ನಟ- ನಟಿಯರನ್ನು ಭೇಟಿಯಾಗ ಬೇಕು, ತಾನು ಒಂದೊಳ್ಳೆ ವ್ಯಕ್ತಿಯಾಗಬೇಕು, ಬೆಳೆಯಬೇಕು, ಸಾಧಿಸಬೇಕು, ಹೀಗೆ ಬಣ್ಣದ ಜಗತ್ತಿನ ಕನಸುಗಳು ಎಷ್ಟು ಸುಲಭವಾಗಿ ಕಣ್ಣಿನಂಚಿನಲ್ಲಿ ಬರುತ್ತದೆ. ನಾವು ಗಾಢ ನಿದ್ದೆಗೆ ಹೋದಷ್ಟು ನಮ್ಮ ಕನಸಿನ ಕಲ್ಪನೆ ಅಷ್ಟೇ ಗಾಢವಾಗಿ ನಮ್ಮನ್ನು ಕಾಡಿಸುತ್ತದೆ. ಕನಸಿನ ಮೂಲ ಉದ್ದೇಶವೇ ಮನಸ್ಸನ್ನು ಎಚ್ಚರಿಸುವುದು, ಭೀತಿಗೊಳಿಸುವುದು. ನಮ್ಮ ಜೀವನದಲ್ಲಿ ಕನಸುಗಳಿಗೆ ಮಹತ್ವ ಹೆಚ್ಚು, ಯಾರ ಬಳಿಯೂ ಹೇಳಿಕೊಳ್ಳದೆ ಇದನ್ನು ಮಾಡಬೇಕು, ಯಾರು ಇದನ್ನು ಮಾಡಿರಬಾರದು ಹೀಗೆ ಗೌಪ್ಯವಾಗಿಟ್ಟು ಕನಸಿನ ಮಹತ್ವವನ್ನು ನಾವು ಕಾಪಿಟ್ಟುಕೊಳ್ಳುತ್ತೇವೆ. ಆದರೆ ಕಾಪಿಟ್ಟ ಎಲ್ಲ ಸಂಗತಿಗಳು ಅನುಭವಿಸುವ ಮುನ್ನವೇ ಮುಗ್ಗರಿಸಿ ಬಿಡುತ್ತವೆ ಅನ್ನುವುದು ವಿಪರ್ಯಾಸ. ಕನಸುಗಳು ಯಾವುದೇ ಇರಲಿ, ಅಲ್ಲಿ ಸ್ವಾರ್ಥ, ಆಸೆ, ನಿರಾಸೆ, ಭೀತಿ ಅಕಾಂಕ್ಷೆ, ನಿರೀಕ್ಷೆಗಳು ಇದ್ದೇ ಇರುತ್ತವೆ. ಅಂದ ಹಾಗೆ ನಿನ್ನೆ ಯಾವ ಕನಸು ಬಿತ್ತು ನೆನಪಿಕೊಳ್ಳಿ, ಅದರಲ್ಲಿ ಮೇಲಿನ ಅಂಶವೊಂದು ಇದ್ದೆ ಇರುತ್ತದೆ. ಕನಸೊಂದೇ ಉಚಿತ ಉಡುಗೊರೆ
ನಿದ್ದೆಯಲ್ಲಿ ಕಾಣುವ ಕನಸುಗಳು ಒಂಥರ ವಿಭಿನ್ನ, ಕೆಲವೊಮ್ಮೆ ವಿಚಿತ್ರ. ಜಗತ್ತಿನಲ್ಲಿ ಕನಸಿಲ್ಲದೆ ನಿದ್ರಿಸುವವನು ಯಾರೂ ಇಲ್ಲ. ನಿದ್ದೆಗೆ ಭಂಗ ತರುವುದು ಕನಸು, ನಿದ್ದೆಗೆ ಆಧಾರವಾಗುವುದು ಇದೇ ಕನಸು. ನಡುರಾತ್ರಿಯ ಭಯಭೀತಿಯ ಕನಸು, ಅರೆ ಮುಂಜಾನೆಯ ವಿಚಿತ್ರ ಕನಸು, ಕನಸಿನ ನಡುವೆ ಮನೆಯ ಅಟ್ಟದಲ್ಲಿ ಇಲಿಯೂ ಬೆಕ್ಕೋ ಹಾರುವ ಸದ್ದು ಕೇಳಿ ಒಮ್ಮೆ ಜೀವ ಹೌಹಾರುವುದುಂಟು. ಈ ಅನುಭವ ಆಸ್ವಾದಿಸುವುದೇ ಒಂದು ಖುಷಿ. ಶ್ರೀಮಂತರು ಬಡವರಾಗುವ ಕನಸು, ಬಡವ ಶ್ರೀಮಂತನಾಗುವ ಕನಸು, ಯಾರೋ ಅಸ್ಪಷ್ಟವಾಗಿ ಆಳುವ ಕನಸು, ಮಗು ಹುಟ್ಟುವ ಕನಸು ಈ ಕನಸುಸಗಳಿಗೆಲ್ಲ ಒಂದೊಂದು ರೂಪ, ಅರ್ಥ ಕೊಡುವವರು ನಮ್ಮ ಅಜ್ಜಿ ಅಜ್ಜಂದಿರು… ಸುಹಾನ್ ಶೇಕ್