ಉಡುಪಿ: ಧಾರ್ಮಿಕ ಶ್ರದ್ಧಾಕೇಂದ್ರದ ಅಭಿವೃದ್ಧಿಯು ಭಕ್ತಾದಿ ಜನರ ನಂಬಿಕೆ ಮತ್ತು ಆಶಯಗಳಿಗೆ ಪೂರಕವಾಗಿ ಆಡಳಿತ ಮಂಡಳಿಯ ಇಚ್ಚಾಶಕ್ತಿಯಿಂದ ಸಾಕಾರಗೊಳ್ಳುತ್ತದೆ ಎಂದು ಮಣಿಪಾಲ ವಿ.ವಿ. ಸಹ ಕುಲಪತಿ ಡಾ|ಎಚ್.ಎಸ್.ಬಲ್ಲಾಳ್ ಹೇಳಿದರು.
ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಪ್ರಾಂಗಣದ ಮತ್ತು ಸರಳೆಬೆಟ್ಟು ಸರಕಾರಿ ಹಿ.ಪ್ರಾ. ಶಾಲೆಯ ಆಟದ ಮೈದಾನದ ಇಂಟರ್‌ಲಾಕ್ ಹೊದಿಕೆ ಕಾಮಗಾರಿಯನ್ನು ಅವರು ಪತ್ನಿ ಸಹಿತವಾಗಿ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟಿ ದಿನೇಶ್ ಸಾಮಂತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇರ್ಣೋ¨ªಾರ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಮಾತ ನಾಡಿ, ಹತ್ತು ಲಕ್ಷ ರೂ. ವೆಚ್ಚದ ಕಾಮಗಾರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಸದರ ನಿಧಿಯಿಂದ 5 ಲಕ್ಷ ರೂ.ಗಳನ್ನು , ಶಾಸಕ ಕೆ. ರಘುಪತಿ ಭಟ… ಅವರು ತಮ್ಮ ಶಾಸಕರ ನಿಧಿಯಿಂದ 4 ಲಕ್ಷ ರೂ.ಗಳನ್ನು ಮಂಜೂರು ಮಾಡಿ¨ªಾರೆ ಹಾಗೂ ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು 1 ಲಕ್ಷ ರೂ. ಕೊಡುಗೆಯಾಗಿ ನೀಡಿ¨ªಾರೆ ಎಂದರು.
ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಠಾಕೂರ್, ಟ್ರಸ್ಟಿಗಳಾದ ಶುಭಕರ್ ಸಾಮಂತ್, ದಿನೇಶ್ ಪ್ರಭು, ರಾಮದಾಸ್ ಪ್ರಭು, ರಮಾನಂದ ಸಾಮಂತ್, ಶ್ರೀಧರ್ ಕೆ. ಸಾಮಂತ್, ವಿದ್ಯಾ ಪ್ರಚಾರಕ ಮಂಡಳಿ ಇದರ ಅಧ್ಯಕ್ಷ ಸತೀಶ್ ಪಾಟೀಲ…, ಕೃಷ್ಣರಾಯ ಪಾಟೀಲ…, ರಾಧಾಕೃಷ್ಣ ಸಾಮಂತ್, ವೈಷ್ಣವಿದುರ್ಗ ದೇವಸ್ಥಾನದ ಅಧ್ಯಕ್ಷ ಆಡಳಿತ ಮಂಡಳಿ ಜಯರಾಜ್ ಹೆಗ್ಡೆ, ಸರಕಾರಿ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ನಾಯಕ್, ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ಮಂಜುನಾಥ್ ಮಣಿಪಾಲ, ಉದ್ಯಮಿಗಳಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಸಂಜಯ ಪ್ರಭು ಮತ್ತು ರಾಘವೇಂದ್ರ ಪ್ರಭು ಉಪಸ್ಥಿತರಿದ್ದರು.