Advertisement

ಫೂಟ್‌ಬ್ರಿಡ್ಜ್‌ ಉದ್ಘಾಟನೆ: ರಿಬ್ಬನ್‌ ಕತ್ತರಿಸುವ ವೇಳೆ ಕುಸಿದ ಸೇತುವೆ; ವಿಡಿಯೋ ವೈರಲ್‌…

06:12 PM Sep 07, 2022 | Team Udayavani |

ಕಾಂಗೋ: ಕಾಲ್ಸೇತುವೆ ಅಧಿಕೃತ ಉದ್ಘಾಟನೆಯಲ್ಲಿ ಅಧಿಕಾರಿಗಳು ರಿಬ್ಬನ್‌ ಕತ್ತರಿಸುವ ವೇಳೆ ಸೇತುವೆ ಕುಸಿದು ಬಿದ್ದ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆದಿದ್ದು, ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪಾದಚಾರಿ ಸೇತುವೆ ನಿರ್ಮಾಣದ ಗುಣಮಟ್ಟವನ್ನು ಮತ್ತಷ್ಟು ಪ್ರಶ್ನಿಸುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ!: ಕಾಂಗ್ರೆಸ್

ಹಳೆಯ ತಾತ್ಕಾಲಿಕ ಸೇತುವೆ ಪದೇ ಪದೇ ಹಾನಿಗೊಳಗಾಗುತ್ತಿತ್ತು. ಮಳೆಗಾಲದ ಅವಧಿಯಲ್ಲಿ ಸ್ಥಳೀಯರಿಗೆ ನದಿ ದಾಟಲು ಸಹಾಯ ಮಾಡಲು ಈ ಕಾಲುಸೇತುವೆಯನ್ನು ನಿರ್ಮಿಸಲಾಗಿದ್ದು, ಸೇತುವೆಯ ಉದ್ಘಾಟನೆಗಾಗಿ ಅಧಿಕಾರಿಗಳು ನಿಂತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.

ಉದ್ಘಾಟನೆ ವೇಳೆ ಕಿರಿದಾದ ಸೇತುವೆ ಮೇಲೆ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ನಿಂತಿದ್ದರಿಂದ ಈ ಅವಘಡ ಸಂಭವಿಸಿದೆ. ಸಮಾರಂಭ ವೀಕ್ಷಿಸಲು ಸೇತುವೆಯ ಕೆಳಗೆ ಹಲವಾರು ಜನರು ಜಮಾಯಿಸಿದ್ದರು ಎಂದು ತಿಳಿದುಬಂದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next