Advertisement

Bollywood: ಮಗಳ ವಯಸ್ಸಿನ ನಟಿ ಜೊತೆ ರೊಮ್ಯಾನ್ಸ್; ಅಕ್ಷಯ್‌ ಕುಮಾರ್ ಮೇಲೆ ನೆಟ್ಟಿಗರು ಗರಂ

02:44 PM Mar 14, 2024 | Team Udayavani |

ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹಾಗೂ ಟೈಗರ್‌ ಶ್ರಾಫ್‌ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ʼಬಡೇ ಮಿಯಾನ್ ಚೋಟೆ ಮಿಯಾನ್ʼ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ.

Advertisement

ಇತ್ತೀಚೆಗೆ ಚಿತ್ರತಂಡ ಲಕ್ನೋದಲ್ಲಿ ಭರ್ಜರಿ ಪ್ರಚಾರವನ್ನು ಮಾಡಿತ್ತು. ಈ ವೇಳೆ ಜನರ  ನೂಕುನುಗ್ಗಲು  ಉಂಟಾಗಿತ್ತು. ಇದೀಗ ಸಿನಿಮಾ ತಂಡ ಹೊಸ ಹಾಡನ್ನು ರಿಲೀಸ್‌ ಮಾಡಿದೆ.

ʼವಲ್ಲಾ ಹಬೀಬಿʼ ಎನ್ನುವ ಹಾಡು ರಿಲೀಸ್‌ ಆಗಿದೆ. ಇದಕ್ಕೆ ವೀಕ್ಷಣೆಯ ಜೊತೆಗೆ ಅಕ್ಷಯ್‌ ಕುಮಾರ್‌ ವಿರುದ್ದ ನೆಟ್ಟಿಗರು ಕಿಡಿಕಾಡಿದ್ದಾರೆ. ಹಾಡು ಚೆನ್ನಾಗಿ ಮೂಡಿಬಂದಿದೆ ಆದರೆ ಹಾಡಿನಲ್ಲಿ ಅಕ್ಷಯ್‌ ಕುಮಾರ್‌ ನಟಿ ಮಾನುಷಿ ಚಿಲ್ಲರ್  ಜೊತೆ ಕಾಣಿಸಿಕೊಂಡದ್ದಕ್ಕೆ ಕೆಲವರು ʼಇದು ಅಸಹ್ಯʼವೆಂದಿದ್ದಾರೆ.

ಮಾನುಷಿ ಹಾಗೂ ಅಕ್ಷಯ್‌ ನಡುವೆ 30 ವರ್ಷಗಳ ಅಂತರವಿದೆ. ಮಗಳ ವಯಸ್ಸಿನ ನಟಿಯ ಜೊತೆ ಅಕ್ಷಯ್‌ ರೊಮ್ಯಾನ್ಸ್‌ ಮಾಡಿರುವುದು ಅಸಹ್ಯವೆಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

“ಹಾಡಿನಲ್ಲಿ ಮಾನುಷಿ ಹಾಟ್ ಆಗಿ ಕಾಣುತ್ತಿದ್ದಾರೆ ಆದರೆ ಇದು ಅಕ್ಷಯ್‌ ಗೆ ಮುಜುಗರ ಮತ್ತು ನಾಚಿಕೆಗೇಡಿನ ಸಂಗತಿ. ಮಗಳ ವಯಸ್ಸಿನ ನಟಿ ಜೊತೆ ಈ ರೀತಿ ಕಾಣಿಸಿಕೊಂಡಿರುವುದು ಸರಿಯಲ್ಲ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

Advertisement

“ನನ್ನ ಹಾಗೂ ನನ್ನ ತಂದೆಯ ನಡುವೆ ಇದ್ದಕ್ಕಿಂತ ಕಡಿಮೆ ವಯಸ್ಸಿನ ಅಂತರವಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಅಕ್ಷಯ್‌ ಕುಮಾರ್‌ ಈ ರೀತಿಯಾಗಿ ಟೀಕೆಗೆ ಒಳಗಾಗುವುದು ಇದೇ ಮೊದಲಲ್ಲ. 2022 ರ ಚಲನಚಿತ್ರ ʼಸಾಮ್ರಾಟ್ ಪೃಥ್ವಿರಾಜ್‌ʼ ನಲ್ಲೂ ಮಾನುಷ್‌ ಅವರ ಜೊತೆ ಜೋಡಿಯಾಗಿ ಅಕ್ಷಯ್‌ ಕಾಣಿಸಿಕೊಂಡಿದ್ದರು. ಈ ವೇಳೆಯೂ ತಂದೆ – ಮಗಳ ಜೋಡಿಯಂತಿದೆ ಎಂದು ಕೆಲವರು ಕಮೆಂಟ್‌ ಮಾಡಿದ್ದರು.

ಅಕ್ಷಯ್ ಮತ್ತು ಟೈಗರ್ ಜೊತೆಗೆ, ‘ಬಡೆ ಮಿಯಾನ್ ಚೋಟೆ ಮಿಯಾನ್’ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ,ಸೋನಾಕ್ಷಿ ಸಿನ್ಹಾ, ಮಾನುಷಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡಿದ್ದಾರೆ. ಇದೇ ವರ್ಷದ ಈದ್‌ ಹಬ್ಬದಂದು ಸಿನಿಮಾ ತೆರೆ ಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next