Advertisement

ಹೊಟೇಲ್‌ನಲ್ಲಿ ಭಾರತ ತಂಡಕ್ಕೆ ಕಿರಿಕಿರಿ

09:11 AM Jun 30, 2019 | keerthan |

ಲಂಡನ್‌: ಆತಿಥೇಯ ಇಂಗ್ಲೆಂಡ್‌ ತಂಡವನ್ನು ಎದುರಿಸುವ ಮೊದಲು ಭಾರತದ ಕ್ರಿಕೆಟಿಗರು ಬರ್ಮಿಂಗ್‌ಹ್ಯಾಮ್‌ನಲ್ಲಿ ತಾವು ತಂಗಿರುವ ಹೊಟೇಲ್‌ನಲ್ಲಿ ಕೆಲವು ಗ್ರಾಹಕರಿಂದ ಕಿರಿಕಿರಿ ಅನುಭವಿಸಿದ್ದಾರೆ.

Advertisement

“ಹಯಾತ್‌ ರೀಜೆನ್ಸಿ’ ಹೊಟೇಲ್‌ನಲ್ಲಿರುವ ಭಾರತೀಯ ಕ್ರಿಕೆಟ್‌ ತಂಡದ ಖಾಸಗಿತನವನ್ನು ಉಲ್ಲಂ ಸಿದ ಕಾರಣಕ್ಕಾಗಿ ಭಾರತೀಯ ಮೂಲದ ಮೂವರು ಗ್ರಾಹಕರಿಗೆ ಅಧಿಕೃತ ಎಚ್ಚರಿಕೆ ನೀಡಲಾಗಿದೆ.

ಮೂವರು ಗ್ರಾಹಕರು ಆಟ ಗಾರರ ಖಾಸಗಿತನನ್ನು ಉಲ್ಲಂಸಿದ್ದಾರಲ್ಲದೇ ಕ್ರಿಕೆಟಿಗರ ಅನುಮತಿ ಇಲ್ಲದೇ ಕುಟುಂಬ ಸದಸ್ಯರ ಫೋಟೋ ತೆಗೆದಿದ್ದಾರೆ ಎಂದು ಭಾರತೀಯ ತಂಡ ವ್ಯವಸ್ಥಾಪಕರು ಹೊಟೇಲ್‌ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದೇ ಗ್ರಾಹಕರು ಸಂಜೆ ಹೊಟೇಲ್‌ನ ಲಾಬಿಯಲ್ಲಿ ಕಿರುಚುತ್ತ ತೊಂದರೆ ನೀಡಿದ್ದರು. ಈ ಘಟನೆಯ ಬಳಿಕ ಹೊಟೇಲ್‌ನ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next