Advertisement

ಅತಿಕ್ರಮಿತರನ್ನು ಒಕ್ಕಲೆಬ್ಬಿಸುವುದು ಕಾನೂನು ಬಾಹಿರ

04:11 PM Apr 13, 2019 | pallavi |
ಭಟ್ಕಳ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿರಸಿ ಇವರು ಸರಕಾರಕ್ಕೆ ಕಳುಹಿಸಿದ ವರದಿಯಲ್ಲಿ ಭಟ್ಕಳ ತಾಲೂಕಿನ ಒಟ್ಟೂ 1863 ಕುಟುಂಬಗಳು ಅತಿಕ್ರಮಿಸಿಕೊಂಡಿದ್ದ 611 ಎಕರೆ 45 ಗುಂಟೆ ಜಮೀನನ್ನು ಒಕ್ಕಲೆಬ್ಬಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಕಳುಹಿಸಿದ ಕುರಿತು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರು.
ನೂರಾರು ಅತಿಕ್ರಮಣದಾರರ ನಿಯೋಗದೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್‌.ಸಿ.
ಅವರನ್ನು ಭೇಟಿಯಾದ ಎ. ರವೀಂದ್ರ ನಾಯ್ಕ ಅವರು ಕಾನೂನಿನ  ವಿಧಾನ ಅನುಸರಿಸದೇ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸದೇ ಅರಣ್ಯ ಹಕ್ಕು ಕಾಯಿದೆಯಲ್ಲಿ ಅತಿಕ್ರಮಣದಾರರ ಅರ್ಜಿ ಮಂಜೂರಿ ಪ್ರಕ್ರಿಯೆ ಊರ್ಜಿತ ಇರುವಾಗಲೇ ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿ ಭೂಮಿ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿ ಕಾಲ್ಪನಿಕವಾಗಿದ್ದು ವಾಸ್ತವಿಕ ಅಂಶಕ್ಕೆ ವ್ಯತಿರಿಕ್ತವಾಗಿದೆ ಎಂದರು.
ಅತಿಕ್ರಮಣದಾರರು ಅರಣ್ಯ ಭೂಮಿಯಲ್ಲಿಯೇ ಸಾಗುವಳಿ ಮಾಡಿ ವಾಸ್ತವ್ಯದ ಇಮಾರತಿನೊಂದಿಗೆ ಜೀವನ ನಡೆಸುತ್ತಿದ್ದು ಅದು ಹೇಗೆ ಒಕ್ಕಲೆಬ್ಬಿಸಿ ಅತಿಕ್ರಮಣ ಭೂಮಿ ವಶಪಡಿಸಿಕೊಂಡಿದ್ದೇವೆ ಎಂದು ವರದಿಯಲ್ಲಿ ಪ್ರಸ್ತಾಪಿಸಲು ಸಾಧ್ಯ ಎಂದೂ ಕೇಳಿದ ಅವರು, ತಕ್ಷಣ ವರದಿಯನ್ನು ಹಿಂಪಡೆಯಬೇಕು ಎಂದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಮಂಜೂರಿ ಹಂತದಲ್ಲಿ ಇರುವಂಥ ಸಂದರ್ಭದಲ್ಲಿಯೇ ಒಕ್ಕಲೆಬ್ಬಿಸುವ 64ಎ ಪ್ರಕಾರ ಕಾನೂನು ಪ್ರಕ್ರಿಯೆಗೆ ಅರಣ್ಯ ಅತಿಕ್ರಮಣದಾರರನ್ನು ಒಳಪಡಿಸುತ್ತಿರುವುದು ವಿಷಾದಕರ. ಅರಣ್ಯ ಹಕ್ಕು ಕಾಯಿದೆ ಅರ್ಜಿ ಮಂಜೂರಿ ಪ್ರಕ್ರಿಯೆಯಲ್ಲಿರುವಾಗಲೇ ಪೂರ್ಣಗೊಳ್ಳುವವರೆಗೆ ಅತಿಕ್ರಮಣದಾರನ ಅಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸತಕ್ಕದ್ದಲ್ಲ ಅಥವಾ ಹೊರಹಾಕತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗ್ಯೂ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಸರಿಯಲ್ಲ ಎಂದ ಅವರು ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆಯೊಂದಿಗೆ ಕೆಲವು ಕಡೆಗಳಲ್ಲಿ ಕ್ರಿಮಿನಲ್‌ ಪ್ರಕರಣ ಕೂಡಾ ದಾಖಲಿಸಿರುವುದು ಖಂಡನಾರ್ಹ ಎಂದರು.
ಅನಾದಿಕಾಲದಿಂದಲೂ ಅರಣ್ಯಭೂಮಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿ ಮಾಡಿಕೊಂಡು ಬಂದಿರುವಂಥ ಅತಿಕ್ರಮಣದಾರರು ಭೂಮಿಯಲ್ಲಿ ಜೀವನಾಂಶದ ಅಭಿವೃದ್ಧಿ ಕಾರ್ಯ, ಬದಲೀ ಕೃಷಿ ಪದ್ಧತಿ ಅಳವಡಿಸುವ ಸಂದರ್ಭದಲ್ಲಿ ಅರಣ್ಯ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆ ಕಾಯಿದೆ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ಅರಣ್ಯ ಇಲಾಖೆಯಿಂದ ದಾಖಲಿಸಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು ಇಂತಹ ಕ್ರಮವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಮಾತನಾಡಿ ಭಟ್ಕಳ ನಗರದಲ್ಲಿ 1300 ರಿಂದ 1400 ಅತಿಕ್ರಮಣ ಪ್ರಕರಣಗಳಿವೆ. ಅವುಗಳ ವರದಿಗಳನ್ನು ಸರಿಯಾಗಿ ಪರಿಶೀಲಿಸಲಾಗುತ್ತಿದ್ದು ಇನ್ನು ಮೂರು ತಿಂಗಳ ಒಳಗಾಗಿ ವರದಿ ನೀಡಲಾಗುವುದು ಎಂದ ಅವರು, ನಾವು ಕರ್ನಾಟಕ ಅರಣ್ಯ ಸೇವೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ. ನಮಗೆ ಯಾರ ಮೇಲೂ ದ್ವೇಷವಿಲ್ಲ. ಕಾನೂನು ಏನು ಹೇಳುತ್ತದೆ ಅದರಂತೆ ಕರ್ತವ್ಯ ಮಾಡುವುದು ನಮ್ಮ ಕರ್ತವ್ಯ ಎಂದರು.
ಚರ್ಚೆ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಾಮಾ ಮೊಗೇರ, ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಅಬ್ದುಲ್‌ ಖಯೂಮ್‌, ಮಹಮ್ಮದ್‌ ರಿಜ್ವಾನ್‌, ಎಫ್‌.ಕೆ. ಮೊಗೇರ ಮುಂತಾದವರು ಉಪಸ್ಥಿತರಿದ್ದರು.
ಅತಿಕ್ರಮಣ ಜಾಗ ಮಾರಾಟ ಭಟ್ಕಳದ ಅತಿಕ್ರಮಣ ಜಾಗಾ ಒ.ಎಲ್‌. ಎಕ್ಸ್‌ನಲ್ಲಿ ಮಾರಾಟವಾಗುತ್ತದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಒಂದು ಸ್ಥಳವನ್ನು ಒ.ಎಲ್‌.ಎಕ್ಸ್‌ ನಲ್ಲಿ 85 ಲಕ್ಷ ರೂಪಾಯಿಗೆ ಮಾರಾಟಕ್ಕಿಡಲಾಗಿತ್ತು
Advertisement

Udayavani is now on Telegram. Click here to join our channel and stay updated with the latest news.

Next