Advertisement

EMAIL First Look : ರಿಲೀಸ್ ಆಯ್ತು ರಾಗಿಣಿ ನಟನೆಯ ‘ಇ-ಮೇಲ್’ ಫಸ್ಟ್ ಲುಕ್

05:25 PM Jan 16, 2024 | Team Udayavani |

ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇ-ಮೇಲ್’ ಸಿನಿಮಾದ ಫ‌ಸ್ಟ್‌ಲುಕ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ “ಇ-ಮೇಲ್‌’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

“ಎಸ್‌. ಆರ್‌. ಫಿಲಂ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಎಸ್‌. ಆರ್‌ ರಾಜನ್‌ ನಿರ್ಮಿಸಿ, ನಿರ್ದೇಶಿಸಿರುವ “ಇ-ಮೇಲ್’ ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಯಕಿ ರಾಗಿಣಿ ದ್ವಿವೇದಿ ಅವರೊಂದಿಗೆ ಮುರುಗ ಅಶೋಕ್‌, ಮನೋಬಲ, ಬಿಲ್ಲಿ, ಲೊಳ್ಳುಸಭಾ ಮನೋಹರ್‌, ಅಕ್ಷಯ್‌ ರಾಜ್‌, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್‌ ಸನ್ನಿ, ನಯನ ಚೌಹಾನ್‌, ಶೈಲಜ, ಶ್ವೇತ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಇ-ಮೇಲ್’ ಸಿನಿಮಾದ ಹಾಡುಗಳಿಗೆ ತಮಿಳಿನಲ್ಲಿ ಜುಬಿನ್‌ ಹಾಗೂ ಕನ್ನಡದಲ್ಲಿ “ಐ ಲವ್‌ ಯು’ ಚಿತ್ರದ ಖ್ಯಾತಿಯ ಕಿರಣ್‌ ತೋಟಂಬೈಲ್ (ಕನ್ನಡ) ಸಂಗೀತ

ನೀಡಿದ್ದಾರೆ. ಕರ್ನಾಟಕ, ತಮಿಳು ನಾಡು, ಪಾಂಡಿಚೇರಿ, ಗೋವಾ ಹಾಗೂ ಮುಂಬೈನಲ್ಲಿ “ಇ-ಮೇಲ್‌’ ಸಿನಿಮಾದ ಚಿತ್ರೀಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next