Advertisement

ಇಂಗಾಲದ ಡೈ ಆಕ್ಸೈಡ್ ನಿಂದ ರಾಕೆಟ್‌ ಇಂಧನ?

07:38 PM Dec 14, 2021 | Team Udayavani |

ನ್ಯೂಯಾರ್ಕ್‌: ನಂಬಿದರೆ ನಂಬಿ, ಬಿಟ್ಟರೆ ಬಿಡಿ.. ನಮ್ಮ ಸುತ್ತ ಇರುವ ಗಾಳಿಯಿಂದ ಇಂಗಾಲದ ಡೈ ಆಕ್ಸೈಡ್ ಅನ್ನು ತೆಗೆದು, ರಾಕೆಟ್‌ ಇಂಧನವನ್ನಾಗಿ ಪರಿವರ್ತಿಸಲು ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಂಸ್ಥೆಯ ಸಿಇಒ ಮತ್ತು ಜಗತ್ತಿನ ಅತ್ಯಂತ ಸಿರಿವಂತ ಎಲಾನ್‌ ಮಸ್ಕ್ ಮುಂದಾಗಿದ್ದಾರೆ.

Advertisement

ಈ ಸಂಬಂಧ ಮಂಗಳವಾರ ಟ್ವೀಟಿಸಿರುವ ಅವರು, ಈ ಯೋಜನೆಯಲ್ಲಿ ಆಸಕ್ತರು ಭಾಗಿಯಾಗಬಹುದು ಎಂದೂ ಹೇಳಿದ್ದಾರೆ. ಇವರ ಪ್ಲ್ಯಾನ್ ಹೀಗಿದೆ; ಸದ್ಯ ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆಯಿಂದ ತತ್ತರಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್. ಒಮ್ಮೆ ಗಾಳಿಯಿಂದ ಇದನ್ನು ಹೊರತೆಗೆದರೆ, ಅದು ಶುದ್ಧವಾಗುತ್ತದೆ. ವಾತಾವರಣದಲ್ಲಿರುವ ಬಿಸಿಯೂ ಕಡಿಮೆಯಾಗುತ್ತದೆ.

ಮಂಗಳಯಾನಕ್ಕೂ ಸಹಕಾರಿ
ಪ್ರಸಕ್ತ ವರ್ಷ ಟೈಮ್‌ ಪತ್ರಿಕೆಯ ವರ್ಷದ ವ್ಯಕ್ತಿ ಎಂಬ ಗೌರವಕ್ಕೂ ಭಾಜನರಾಗಿರುವ ಎಲಾನ್‌ ಮಸ್ಕ್, ಇಂಥ ವಿಚಿತ್ರ ಯೋಜನೆಗಳಿಂದಲೇ ಯಶಸ್ವಿಯಾಗಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಂತೂ ರಾಕೆಟ್‌ಗಳ ಮರುಬಳಕೆಯಲ್ಲಿ ಅತ್ಯಂತ ದೊಡ್ಡ ಸಾಧನೆ ಮಾಡಿದ್ದಾರೆ. ಒಂದು ವೇಳೆ ರಾಕೆಟ್‌ ಇಂಧನವನ್ನಾಗಿ ಇಂಗಾಲದ ಡೈ ಆಕ್ಸೈಡ್ ಬಳಕೆ ಮಾಡಿದರೆ, ಮಾನವ ಸಹಿತ ಮಂಗಳಯಾನಕ್ಕೂ ಸಹಕಾರಿಯಾಗಲಿದೆ ಎಂಬುದು ಅವರ ಚಿಂತನೆ. ಅಲ್ಲಿನ ಇಂಗಾಲವನ್ನೇ ಹೀರಿ ಇಂಧನವನ್ನಾಗಿ ಪರಿವರ್ತನೆ ಮಾಡಿದರೆ, ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡಲು ಅನುಕೂಲವಾಗುತ್ತದೆ.

ಇದನ್ನೂ ಓದಿ:ಲಖೀಂಪುರ ಹಿಂಸಾಚಾರ ಯೋಜಿತ ಸಂಚು: ಎಸ್‌ಐಟಿ

ಮಸ್ಕ್ ಚಿಂತನೆಗಳು

  1. ಡ್ರೈವರ್‌ ಲೆಸ್‌ ಕಾರು
  2. ಹೈಪರ್‌ಸಾನಿಕ್‌ ರೈಲು
  3. ಟ್ರಾಫಿಕ್‌ ದಟ್ಟಣೆ ನಿವಾರಣೆಗೆ ಕ್ಯೂಬ್‌ ಸಿಸ್ಟಮ್‌
  4. ರಾಕೆಟ್‌ ಮರುಬಳಕೆ
Advertisement
Advertisement

Udayavani is now on Telegram. Click here to join our channel and stay updated with the latest news.

Next