Advertisement

ಸಾಮೂಹಿಕ ರಾಜೀನಾಮೆ ನೀಡಿದ ಟ್ವಿಟರ್ ಉದ್ಯೋಗಿಗಳು: ಕಚೇರಿಗಳನ್ನು ಮುಚ್ಚಿದ ಮಸ್ಕ್

09:27 AM Nov 18, 2022 | Team Udayavani |

ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್‌ ಒಡೆತನವನ್ನು ಉದ್ಯಮಿ ಎಲಾನ್ ಮಸ್ಕ್ ಪಡೆದ ನಂತರ ದಿನಕ್ಕೊಂದು ಪ್ರಮಾದಗಳು ನಡೆಯುತ್ತಿದೆ. ಇದೀಗ ಮತ್ತೊಂದು ದುರಂತ ನಡೆದಿದ್ದು, ನೂರಾರು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.

Advertisement

ನೀಡಿದ ಸಮಯದೊಳಗೆ “ಅತ್ಯಂತ ಹಾರ್ಡ್‌ಕೋರ್” ಕೆಲಸದ ವಿಧಾನವನ್ನು ಒಪ್ಪಿಕೊಳ್ಳಬೇಕು ಅಥವಾ ಕಂಪನಿಯನ್ನು ತೊರೆಯಬೇಕು ಎಂಬ ಎಲಾನ್ ಮಸ್ಕ್ ನೀಡಿದ ಗಡುವಿಗೆ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ. ಸಂಜೆ 5 ಗಂಟೆಗೆ (ಅಮೆರಿಕ ಕಾಲಮಾನ) ಮುಂಚಿತವಾಗಿ ಹಲವಾರು ಉದ್ಯೋಗಿಗಳು ಟ್ವಿಟ್ಟರ್ ನಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಸಿದರು.

ಟ್ವಿಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಮಸ್ಕ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದೀಗ ಸುಮಾರು 3,000 ಉದ್ಯೋಗಿಗಳು ಟ್ವಿಟ್ಟರ್ ತೊರೆದರು.

“12 ವರ್ಷಗಳ ನಂತರ, ನಾನು ಟ್ವಿಟರ್ ಅನ್ನು ತೊರೆದಿದ್ದೇನೆ. ಸಾವಿರಾರು ಮುಖಗಳು ಮತ್ತು ಸಾವಿರ ದೃಶ್ಯಗಳು ಇದೀಗ ನನ್ನ ಮನಸ್ಸಿನಲ್ಲಿ ಮಿನುಗುತ್ತಿವೆ. ಐ ಲವ್ ಯೂ ಟ್ವಿಟರ್ ” ಎಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಸತಾಂಜೀವ್ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ವೈದ್ಯ ಡಾ| ಕೃಷ್ಣಮೂರ್ತಿ ಕೇಸ್: ಆರೋಪಿಗಳಿಗೆ ರಾಜಕೀಯ ಆಶ್ರಯ; ಪ್ರಕರಣವನ್ನೇ ತಿರುಚುವ ಯತ್ನ?

Advertisement

ಕಂಪನಿಯ ಆಂತರಿಕ ಸಂದೇಶ ಕಳುಹಿಸುವ ವೇದಿಕೆ ಸ್ಲಾಕ್‌ ನಲ್ಲಿ ಹಲವಾರು ಉದ್ಯೋಗಿಗಳು ಟ್ವಿಟ್ಟರ್ ಗೆ ವಿದಾಯ ಹೇಳಿದ್ದಾರೆ.

“ಗಡುವು ಮುಗಿದ ಬಳಿಕ ನೂರಾರು ಉದ್ಯೋಗಿಗಳು ತ್ವರಿತವಾಗಿ ವಿದಾಯ ಸಂದೇಶಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ಅವರು ಮಸ್ಕ್‌ ನ ನಿಯಮಗಳಿಗೆ ಒಲ್ಲೆ ಎಂದಿದ್ದಾರೆ” ಎಂದು ದಿ ವರ್ಜ್ ವರದಿ ಮಾಡಿದೆ.

“ಮುಂದಿನ ಟ್ವಿಟರ್ 2.0 ಅನ್ನು ನಿರ್ಮಿಸಲು ಮತ್ತು ಹೆಚ್ಚುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು, ನಾವು ಅತ್ಯಂತ ಹಾರ್ಡ್‌ಕೋರ್ ಆಗಿರಬೇಕು” ಎಂದು ಟ್ವಿಟ್ಟರ್ ಬರೆದಿದ್ದಾರೆ.

ಪ್ಲಾಟ್‌ ಫಾರ್ಮರ್‌ ನ ಮ್ಯಾನೇಜಿಂಗ್ ಎಡಿಟರ್ ಜೊಯ್ ಸ್ಕಿಫರ್, “ಟ್ವಿಟರ್ ಉದ್ಯೋಗಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಚ್ಚರಿಕೆ ನೀಡಿದೆ. ಎಲ್ಲಾ ಕಚೇರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಮತ್ತು ಬ್ಯಾಡ್ಜ್ ಪ್ರವೇಶವನ್ನು ಅಮಾನತುಗೊಳಿಸಲಾಗಿದೆ. ಏಕೆ ಎಂಬುದರ ಕುರಿತು ಯಾವುದೇ ವಿವರಗಳನ್ನು ನೀಡಲಾಗಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next