Advertisement

AI ಫ್ಯಾಷನ್‌ ಶೋಗೆ ನೆಟ್ಟಿಗರು ಫಿದಾ-ವಿಡಿಯೋ ವೈರಲ್‌

09:06 PM Jul 22, 2024 | Team Udayavani |

ನವದೆಹಲಿ: ಪ್ರಧಾನಿ ಮೋದಿಯವರು ಕಪ್ಪು ಕನ್ನಡಕ ಧರಿಸಿ, ಬಣ್ಣ ಬಣ್ಣದ ದಿರಿಸಿನೊಂದಿಗೆ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರೆ ಹೇಗಿರುತ್ತೆ? ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಡಿಯೋಗಳು ವೈರಲ್‌ ಆಗಿವೆ.

Advertisement

ಹೌದು, ಕೃತಕ ಬುದ್ಧಿಮತ್ತೆ ಬಳಸಿ ಈ ವಿಡಿಯೋ ಸೃಷ್ಟಿಸಲಾಗಿದೆ. ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್ ಹಂಚಿಕೊಂಡ “ಎಐ ಫ್ಯಾಷನ್‌ ಶೋ’ ವಿಡಿಯೋ ಇದಾಗಿದ್ದು, ಅದರಲ್ಲಿ ಜಗತ್ತಿನ ಪ್ರಮುಖ ನಾಯಕರಾದ ಮೋದಿ, ಡೊನಾಲ್ಡ್‌ ಟ್ರಂಪ್‌, ಪುಟಿನ್‌, ಬೈಡೆನ್‌ ಹಾಗೂ ಸ್ವತಃ ಎಲಾನ್‌ ಮಸ್ಕ್ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಾರೆ.

ಮಾಡರ್ನ್ ಹಾಗೂ ಕ್ಲಾಸಿಕ್‌ ಎರಡೂ ಮಾದರಿಯನ್ನು ಒಳಗೊಂಡ ಫ್ಯಾಶನ್‌ ಶೋ ಇದಾಗಿದ್ದು, ಎಐ ಫ್ಯಾಷನ್‌ ಶೋಗೆ ಇದು ಸಕಾಲ ಎಂದು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next