Advertisement
ನಾವು ಇನ್ನು ಕೆಲವೇ ವರ್ಷಗಳಲ್ಲಿ ಮಂಗಳನಲ್ಲಿ ಇಳಿಯಲಿದ್ದೇವೆ ಎಂದು ಮಾಡಿದ ಟ್ವೀಟೊಂದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, “5 ವರ್ಷಗಳ ಒಳಗೆ ಮಾನವರಹಿತ ನೌಕೆ ಮಂಗಳನ ಮೇಲೆ ಇಳಿಯಲಿದೆ, 10 ವರ್ಷಗಳ ಒಳಗೆ ಅಲ್ಲಿಗೆ ಮನುಷ್ಯರು ಹೋಗುತ್ತಾರೆ. ಬಹುಶಃ 20 ವರ್ಷಗಳ ಒಳಗೆ ಅಲ್ಲಿ ನಗರ ನಿರ್ಮಾಣವಾಗುತ್ತದೆ, ಆದರೆ ಖಚಿತವಾಗಿ 30 ವರ್ಷಗಳ ಒಳಗೆ ನಾಗರಿಕತೆಯೇ ಅಲ್ಲಿರುತ್ತದೆ’ ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲ, ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 10 ಲಕ್ಷ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸಿಕೊಡುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಕೊನೆಗೆ ಗಡುವು ಕೊಟ್ಟು ಸುಮ್ಮನಾದರು. ಈಗ ಅವರು ಮಂಗಳ ಗ್ರಹದಲ್ಲೇ ಮನುಷ್ಯ ವಾಸಿಸುವ ಕನಸನ್ನು ಹುಟ್ಟು ಹಾಕಿದ್ದಾರೆ. ಮಸ್ಕ್ ಹೇಳಿದ್ದೇನು?
- 5 ವರ್ಷಗಳ ಒಳಗೆ ಮಂಗಳನ ಅಂಗಳದಲ್ಲಿ ಮಾನವರಹಿತ ನೌಕೆ ಇಳಿಯುತ್ತದೆ.
- 10 ವರ್ಷಗಳಲ್ಲಿ ಜನರು ಅಲ್ಲಿಗೆ ಹೋಗುತ್ತಾರೆ.
- ಬಹುಶಃ 20 ವರ್ಷಗಳ ಒಳಗೆ ನಗರ ನಿರ್ಮಾಣವಾಗುತ್ತದೆ.
-ಖಚಿತವಾಗಿ 30 ವರ್ಷಗಳ ಒಳಗೆ ನಾಗರಿಕತೆಯೇ ಅಲ್ಲಿರುತ್ತದೆ.