ಸ್ಯಾನ್ ಫ್ರಾನ್ಸಿಸ್ಕೋ : ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಯ ಮಹತ್ವದ ರೂಪಾಂತರಕ್ಕಾಗಿ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಈ ಯೋಜನೆಗಳಲ್ಲಿ ಒಂದು ಐಕಾನಿಕ್ ನೀಲಿ ಹಕ್ಕಿಯ ಲೋಗೋವನ್ನು ಸೋಮವಾರದಿಂದ ಬದಲು ಮಾಡಿದ್ದಾರೆ.
ಹೊಸ ಲೋಗೋವನ್ನು ‘X’ ಎಂದು ಮರುನಾಮಕರಣ ಮಾಡಲಾಗಿದೆ.“ಎಕ್ಸ್ ಡಾಟ್ ಕಾಮ್ ಈಗ ಟ್ವಿಟರ್ ಡಾಟ್ ಕಾಮ್ ಅನ್ನು ಸೂಚಿಸುತ್ತದೆ. ಮಧ್ಯಂತರ ಎಕ್ಸ್ ಲೋಗೋ ಇಂದು ಲೈವ್ ಆಗಲಿದೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಹೊಸ X ಪ್ರೊಫೈಲ್ ಚಿತ್ರದೊಂದಿಗೆ X ಗೆ ಬದಲಾಯಿಸಲಾಗಿದೆ. ಎಲಾನ್ ಮಸ್ಕ್ ಕೂಡ ಟ್ವಿಟ್ಟರ್ ನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದಾರೆ.
ಹೊಸ ಬದಲಾವಣೆಗಳನ್ನು ಜನರು ಹೆಚ್ಚಾಗಿ ಸ್ವಾಗತಿಸಿದರೂ ಈ ಬಾರಿ ಹಾಗಾಗುತ್ತಿಲ್ಲ. ಹಲವರು ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಬದಲಾವಣೆ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದು, ಇದು ‘ಕೆಟ್ಟ ಕಲ್ಪನೆ’ ಎಂದು ಹೇಳಿದ್ದಾರೆ.