Advertisement

ಟ್ವಿಟರ್‌ನಿಂದ ಶೇ.75 ಸಿಬ್ಬಂದಿಯನ್ನು ತೆಗೆದುಹಾಕುವ ಪ್ಲ್ಯಾನ್ ?

12:27 PM Oct 22, 2022 | Team Udayavani |

ವಾಷಿಂಗ್ಟನ್‌: ಟ್ವಿಟರ್‌ ಖರೀದಿಸುವ ಪ್ರಕ್ರಿಯೆಯಲ್ಲಿರುವ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್, ಮಕ್ರೋಬ್ಲಾಗಿಂಗ್‌ ಜಾಲತಾಣದ ಶೇ.75 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವುದಕ್ಕೂ ಯೋಜನೆ ಮಾಡಿಕೊಂಡಿದ್ದಾರೆ ಎಂದು “ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

Advertisement

ಆರ್ಥಿಕ ಹಿಂಜರಿತದ ಹಿನ್ನೆಲೆ ನೇಮಕ ಪ್ರಕ್ರಿಯೆ ನಿಧಾನ ಮಾಡುವುದಕ್ಕೆ ಮಸ್ಕ್ ಗೆ ಜುಲೈನಲ್ಲೇ ಸೂಚಿಸಿದ್ದರು. ಇದೀಗ ಕನಿಷ್ಠ 7,500 ಸಿಬ್ಬಂದಿಯನ್ನು ತೆಗೆದುಹಾಕಲಿದ್ದಾರೆ ಎನ್ನಲಾಗಿದೆ. ಈಗಿನ್ನೂ ಮಸ್ಕ್ ಅಧಿಕಾರ ಹಸ್ತಾಂತರವಾಗಿಲ್ಲವಾದರೂ ಈಗಿರುವ ಆಡಳಿತವು ಶೇ.25 ಸಿಬ್ಬಂದಿಯನ್ನು ತೆಗೆಯುವ ಯೋಜನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next