ವಾಷಿಂಗ್ಟನ್ : ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯಲು “ಅತ್ಯುತ್ತಮ” ತಂತ್ರಜ್ಞಾನದ ಅಭಿವೃದ್ಧಿಗಾಗಿ ಟೆಸ್ಲಾ ಇಂಕ್ ಮುಖ್ಯಸ್ಥ ಮತ್ತು ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಗುರುವಾರ ಟ್ವಿಟ್ಟರ್ ಗೆ 100 ಮಿಲಿಯನ್ ಡಾಲರ್ ಬಹುಮಾನ ನೀಡುವ ಭರವಸೆ ನೀಡಿದರು.
“ಅತ್ಯುತ್ತಮ ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನ ಆವಿಷ್ಕಾರಕ್ಕಾಗಿ 100 ಮಿಲಿಯನ್ ದೇಣಿಗೆ ನೀಡುತ್ತಿದ್ದೇನೆ” ಎಂದು ಎಲೋನ್ ಮಸ್ಕ್ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ, ಎರಡನೇ ಟ್ವೀಟ್ ನಲ್ಲಿ ಈ ಬಗ್ಗೆ ‘ಪೂರ್ಣ ವಿವರವನ್ನು ಮುಂದಿನ ವಾರ ತಿಳಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?
ಇಂಟರ್ನೆಟ್ ಪೇಮೆಂಟ್ ಕಂಪನಿ ಪೇಪಾಲ್ ಹೋಲ್ಡಿಂಗ್ಸ್ ಇಂಕ್ ಅನ್ನು ಸಹ-ಸ್ಥಾಪಿಸಿದ ಮತ್ತು ಮಾರಾಟ ಮಾಡಿದ ಮಸ್ಕ್, ಈಗ ವಿಶ್ವದ ಕೆಲವು ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಟೆಸ್ಲಾ ಮಾತ್ರವಲ್ಲದೇ, ಮಾನವನ ಮೆದುಳನ್ನು ಕಂಪ್ಯೂಟರ್ ಗಳೊಂದಿಗೆ ಸಂಪರ್ಕಿಸಲು ಅಲ್ಟ್ರಾ-ಹೈ ಬ್ಯಾಂಡ್‌ವಿಡ್ತ್ ಮೆದುಳು-ಯಂತ್ರ ಸಂಪರ್ಕ ಸಾಧನಗಳನ್ನು ಅಭಿವೃದ್ಧಿಪಡಿಸಲು ಆರಂಭಿಕ ಪ್ರಯತ್ನ ಮಾಡುತ್ತಿರುವ ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ಮತ್ತು ನ್ಯೂರಾಲಿಂಕ್ ನ ಮುಖ್ಯಸ್ಥರಾಗಿದ್ದಾರೆ.
ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳನ್ನು ಪೂರೈಸಬೇಕಾದರೆ ಇಂಗಾಲ ಸೆರೆಹಿಡಿಯುವ ತಂತ್ರಜ್ಞಾನದ ನಿಯೋಜನೆಯಲ್ಲಿ ತೀವ್ರ ಏರಿಕೆ ಅಗತ್ಯ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಕಳೆದ ವರ್ಷದ ಹೇಳಿದೆ. ಗ್ರಹ -ತಾಪಮಾನ ಹೊರಸೂಸುವಿಕೆಯನ್ನು ಸೆರೆಹಿಡಿಯುವುದು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಅನೇಕ ಯೋಜನೆಗಳ ನಿರ್ಣಾಯಕ ಭಾಗವಾಗುತ್ತಿದೆ, ಆದರೆ ಇದುವರೆಗೆ ತಂತ್ರಜ್ಞಾನದ ಪ್ರಗತಿ ಅಷ್ಟಿರಲಿಲ್ಲ, ಇಂಗಾಲವನ್ನು ಗಾಳಿಯಿಂದ ಹೊರತೆಗೆಯುವ ಬದಲು ಹೊರಸೂಸುವಿಕೆಯನ್ನು ಕಡಿತಗೊಳಿಸುವುದರ ಬಗ್ಗೆ ಗಮನ ಹರಿಸಲಾಗಿತ್ತು.
ಇದನ್ನೂ ಓದಿ : ಸುರಕ್ಷಿತ ಏರ್ ಶೋಗೆ ವಿಪತ್ತು ನಿರ್ವಹಣಾ ಯೋಜನೆ
ಅಮೇರಿಕಾದ ನೂತನ ಅಧ್ಯಕ್ಷ ಜೋ ಬಿಡನ್ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಕುರಿತಾದ ಯೋಜನೆಯ ಭಾಗವಾಗಿ ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನದ ಅಭಿವೃದ್ಧಿಯನ್ನು ವೇಗಗೊಳಿಸಲು ವಾಗ್ದಾನ ಮಾಡುವುದರ ಜೊತೆಗೆ, ಅವರು ಯು.ಎಸ್. ಇಂಧನ ಇಲಾಖೆಯಲ್ಲಿ ಫೋಸೈಲ್ ಎನರ್ಜೀಯ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿಯಾಗಿ ಇಂಗಾಲ ತೆಗೆಯುವ ತಂತ್ರಜ್ಞಾನಗಳಲ್ಲಿ ಪರಿಣಿತರಾದ ಜೆನ್ನಿಫರ್ ವಿಲ್ಕಾಕ್ಸ್ ಅವರನ್ನು ಉಲ್ಲೇಖಿಸಿದ್ದರು.
ಇದನ್ನೂ ಓದಿ : ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು