ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ನಡೆದ ಗೋಡೆ ಹತ್ತುವ ಕ್ರೀಡಾಕೂಟದಲ್ಲಿ ಇರಾನ್ ಕ್ರೀಡಾಪಟು ಎಲ್ನಾಜ್ ರೆಕಾಬಿ ಹಿಜಾಬ್ ಧರಿಸದೇ ಭಾಗವಹಿಸದೇ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಪೂರಕವಾಗಿ ಸಿಯೋಲ್‌ನಲ್ಲಿ ಇರುವ ಇರಾನ್ ಅಧಿಕಾರಿಗಳು ಕ್ರೀಡಾಪಟುವನ್ನು ಅಧಿಕಾರಿಗಳು ಸ್ವದೇಶಕ್ಕೆ ಮಂಗಳವಾರ ವಿಮಾನ ಹತ್ತಿಸಿದ್ದಾರೆ.
ರಾಜಧಾನಿ ತೆಹ್ರಾನ್ ತಲುಪಿದ ನಂತರ ಅವರನ್ನು ಇರಾನ್ ಪೊಲೀಸರು ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಬೆಳವಣಿಗೆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ ಎಲ್ನಾಜ್ ರೆಕಾಬಿ “ಆಕಸ್ಮಿಕವಾಗಿ ತಲೆಯಿಂದ ಹಿಜಾಬ್ ಜಾರಿತು. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಸೆ.16ರಂದು ಪೊಲೀಸರ ನೈತಿಕಗಿರಿಯಿಂದಾಗಿ ಹಿಜಾಬ್ ಧರಿಸದೇ ಇರುವುದಕ್ಕಾಗಿ ಬಂಧಿತಳಾಗಿ ಮೃತಪಟ್ಟ ಮಹ್ಸಾ ಅಮಿನಿ ಅವರ ಸಾವು ಖಂಡಿಸಿ ಇರಾನ್‌ನಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.