Advertisement

ಎಳ್ಳಮಾವಾಸ್ಯೆ: ಮಲ್ಪೆಯಲ್ಲಿ ಸಹಸ್ರಾರು ಮಂದಿ ಸಮುದ್ರಸ್ನಾನ

09:23 PM Dec 23, 2022 | Team Udayavani |

ಮಲ್ಪೆ: ವಡಭಾಂಡೇಶ್ವರಸಮುದ್ರ ತೀರದಲ್ಲಿ ಸಾವಿರಾರು ಭಕ್ತರು ಸಮುದ್ರಸ್ನಾನ ಮಾಡಿ ಬಲರಾಮ ದರ್ಶನ ಮಾಡಿದರು. ಮುಂಜಾನೆ 3 ಗಂಟೆಯಿಂದಲೇ ಸಮುದ್ರಸ್ನಾನಕ್ಕೆ ಕಡಲತೀರ ಬಳಿ ಜನ ಸೇರಿದ್ದರು.

Advertisement

ಗತಿಸಿದ ತಮ್ಮ ಹಿರಿಯರಿಗೆ ಪಿಂಡ ಪ್ರದಾನ, ತಿಲ ಹವನ ನಡೆಸಿದರು. 20ಕ್ಕೂ ಅಧಿಕ ವೈದಿಕರ ತಂಡಗಳು ಇದ್ದವು. ವಡಭಾಂಡೇಶ್ವರ ಭಕ್ತವೃಂದದ ಸದಸ್ಯರು ಭಕ್ತರಿಗೆ ದೇವರ ದರ್ಶನ ಪಡೆಯುವಲ್ಲಿ ಸಹಕರಿಸಿದರು.

ಸಮುದ್ರತೀರದಲ್ಲಿ ಅಪಾಯ ಸಂಭವಿಸದಂತೆ ಮತ್ತು ವಾಹನ ಸುಗಮ ಸಂಚಾರಕ್ಕೆ ತೊಡಕಾಗದಂತೆ ಮಲ್ಪೆ ಠಾಣಾಧಿಕಾರಿ ಗುರುನಾಥ ಆದಿಮನಿ ನೇತೃತ್ವದಲ್ಲಿ 60 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.ರಕ್ಷಣ ಕಾರ್ಯಕ್ಕೆ ಅಡ್ವೆಂಚರ್‌ ವಾಟರ್‌ ನ್ಪೋರ್ಟ್‌ನ ಸನತ್‌ ಸಾಲ್ಯಾನ್‌ ಅವರ ನೇತೃತ್ವದಲ್ಲಿ 8 ಟೂರಿಸ್ಟ್‌ ಬೋಟ್‌ಗಳು ಸಜ್ಜಾಗಿದ್ದವು.

ಪಲಿಮಾರು ಉಭಯ ಶ್ರೀಪಾದರಿಂದ
ಕಟಪಾಡಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಎಳ್ಳಮಾವಾಸ್ಯೆಯ ಪ್ರಯುಕ್ತ ಮಟ್ಟು ಕಡಲಕಿನಾರೆಯಲ್ಲಿ ಸಮುದ್ರಸ್ನಾನ ಮಾಡಿ ಅನುಷ್ಠಾನ ನಡೆಸಿದರು.
ಸಾವಿರಾರು ಭಕ್ತರು ಇಲ್ಲಿ ಸಮುದ್ರ ಸ್ನಾನ ಮಾಡಿದ್ದರು.


ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಾದ ವೇ|ಮೂ|ಪ್ರವೀಣ್‌ ತಂತ್ರಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್‌, ಗ್ರಾ.ಪಂ. ಸದಸ್ಯರಾದ ನಾಗರಾಜ್‌, ಪರಶುರಾಮ ಭಟ್‌, ಸ್ಥಳೀಯರಾದ ಕೃಷ್ಣ ರಾವ್‌, ಡಾ|ಅನಂತ ಹೆಬ್ಟಾರ್‌, ಹರೀಶ್‌, ಶಂಕರ್‌, ಉದ್ಯಮಿ ಸಚ್ಚಿದಾನಂದ ರಾವ್‌, ಶ್ರೀ ಮಠದ ಮ್ಯಾನೇಜರ್‌ ಪ್ರಹ್ಲಾದ ರಾವ್‌ ಉಪಸ್ಥಿತರಿದ್ದರು.

ಜೋಮ್ಲು ಬೊಬ್ಬರ್ಯ ದೇವರ ಸನ್ನಿಧಿ
ಬ್ರಹ್ಮಾವರ: ಜೋಮ್ಲು ಬೊಬ್ಬರ್ಯ ದೇವರ ಸನ್ನಿಧಿಯಲ್ಲಿ ತೀರ್ಥೋತ್ಸವ, ಧಾರ್ಮಿಕ ಸಭೆ, ಯಕ್ಷ ಗಾನ ನಾಟ್ಯ ವೈಭವ ಜರಗಿತು. ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

Advertisement

ಹೆಜಮಾಡಿ ಅಮಾವಾಸ್ಯೆಕರಿಯ ಸಮುದ್ರ ತೀರ
ಪಡುಬಿದ್ರಿ: ಹೆಜಮಾಡಿಯ ಅಮಾವಾಸ್ಯೆಕರಿಯ ಸಮುದ್ರ ತೀರದಲ್ಲಿ ಸಹಸ್ರಾರು ಜನರು ಸಮುದ್ರ ಸ್ನಾನ ಗೈದರು. ತಿಲಹೋಮ, ಪಿಂಡ ಪ್ರದಾನಾದಿ ನೆರವೇರಿಸಿದರು. ಪಡುಬಿದ್ರಿ, ಎರ್ಮಾಳು, ಉಚ್ಚಿಲ ಸಮುದ್ರ ಕಿನಾರೆಯಲ್ಲೂ ಸಂಪ್ರದಾಯದಂತೆ ಅನೇಕರು ಸಮುದ್ರ ಸ್ನಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next