ಹಾಲಿವುಡ್ ನಟ ತೃತೀಯ ಲಿಂಗಿ ಎಲಿಯಟ್ ಪೇಜ್ ವಿಶೇಷ ಗೌವರಕ್ಕೆ ಪಾತ್ರರಾಗಿದ್ದಾರೆ. ಜನಪ್ರಿಯ ಟೈಮ್ ನಿಯತಕಾಲಿಕೆಯ ಮುಖಪುಟದಲ್ಲಿ ಅವರ ಫೋಟೊ ಪ್ರಕಟಗೊಂಡಿದೆ. ಇದೇ ಮೊದಲ ಬಾರಿ ತೃತೀಯ ಲಿಂಗಿಯ ಫೋಟೊ ನಿಯತಕಾಲಿಕೆಯ ಮುಖಪುಟದಲ್ಲಿ ಪ್ರಕಟಿಸಿರುವ ಟೈಮ್, ಎಲಿಯಟ್ ಅವರಿಗೆ ವಿಶೇಷ ಗೌರವ ನೀಡಿದೆ.
ಕೆನಡಾ ಮೂಲದ ಎಲಿಯಟ್ ಪೇಜ್ ನಟ ಹಾಗೂ ನಿರ್ಮಾಪಕ, ಕಳೆದ ವರ್ಷ ಡಿಸೆಂಬರ್ ನಲ್ಲಿ ತಮ್ಮ ಜೀವನದ ಕುರಿತು ಮಹತ್ವದ ರಹಸ್ಯ ಬಿಚ್ಚಿಟ್ಟಿದ್ದರು. ತಾನು ತೃತೀಯ ಲಿಂಗಿ ಎಂದು ಘೋಷಿಸಿಕೊಂಡಿದ್ದರು.
ಆಸ್ಕರ್ ನಾಮನಿರ್ದೇಶನಗೊಂಡಿದ್ದ ಸಿನಿಮಾ ಜುನೋ ಹಾಗೂ ನೆಟ್‌ಫ್ಲಿಕ್ಸ್‌ನ ದಿ ಅಂಬ್ರೆಲ್ಲಾ ಅಕಾಡೆಮಿ ಸ್ಟಾರ್ ಎಲಿಯಟ್ ಪೇಜ್ ಹೆಸರು ಈ ಹಿಂದೆ ಎಲೆನ್ ಪೇಜ್ ಎಂದಾಗಿತ್ತು. ನಂತರ ತೃತೀಯ ಲಿಂಗಿಯಾದ ಬಳಿಕ ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ :ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್: ಬರ್ತ್‌ಡೇಗೆ ‘ತೋತಾಪುರಿ’ ಪೋಸ್ಟರ್ ಗಿಫ್ಟ್
Related Articles
ನಾನು ತೃತೀಯ ಲಿಂಗಿ ಎಂಬುದನ್ನು ಪ್ರೀತಿಸುತ್ತೇನೆ. ನಾನು ಯಾರೆಂಬುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ನಾನು ಹೆಚ್ಚು ಕನಸು ಕಾಣುತ್ತೇನೆ. ಪ್ರತಿದಿನ ತೃತೀಯ ಲಿಂಗಿಗಳು ಅನುಭವಿಸುವ ಕಿರುಕುಳ, ಅಸಹ್ಯ, ನಿಂದನೆ ಮತ್ತು ಹಿಂಸಾಚಾರ ನಾನು ನೋಡುತ್ತೇನೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಇದನ್ನು ಬದಲಾಯಿಸಲು ನನ್ನಿಂದಾಗುವ ಎಲ್ಲವನ್ನು ಮಾಡುತ್ತೇನೆ ಎಂದು ಅವರು ಹೇಳಿಕೊಂಡಿದ್ದರು.
ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡ ಬಳಿಕವೂ ಅವರ ಸಿನಿಮಾರಂಗದ ಸಾಧನೆಗೆ ಅಡೆತಡೆಗಳು ಎದುರಾಗಿಲ್ಲ. ಅವರ ನೇರ ವ್ಯಕ್ತಿತ್ವಕ್ಕೆ ಎಲ್ಲರೂ ಗೌರವ ನೀಡುತ್ತಾರೆ. ಇದೀಗ ಟೈಮ್ ನಿಯತ ಕಾಲಿಕೆಯಲ್ಲಿ ಅವರ ಚಿತ್ರ ಪ್ರಕಟಗೊಂಡಿದ್ದಕ್ಕೆ ಹಾಲಿವುಡ್ ತಾರೆ ಮಾರ್ಕ್ ರೆಫೆರೊ, ನಟಿ ರಿಸೇ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ. ಇದೂ ಐತಿಹಾಸಿಕ ಮೈಲುಗಲ್ಲು ಎಂದು ಬಣ್ಣಿಸಿದ್ದಾರೆ.