ಮಜಾ ಟಾಕೀಸ್ ಶೋ ಮೂಲಕ ಕಿರುತೆರೆ ಲೋಕದಲ್ಲಿ ಸೃಜನ್ ಲೋಕೇಶ್ ದಾಖಲಿಸಿರುವ ಹೆಜ್ಜೆ ಗುರುತು ಮಹತ್ತರವಾದದ್ದು. ಕನ್ನಡದ ಕಿರುತೆರೆ ಶೋಗಳ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಶೋ ಮೂಲಕೇ ಪ್ರೇಕ್ಷಕರಿಂದ ಟಾಕಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ಸೃಜನ್ ನಟಿಸಿರೋ ಬಹು ನಿರೀಕ್ಷಿತ ಚಿತ್ರ ಎಲ್ಲಿದ್ದೆ ಇಲ್ಲಿ ತನಕ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಹಾಡುಗಳು ಸೃಷ್ಟಿಸಿದ ರೊಮ್ಯಾಂಟಿಕ್ ವಾತಾವರಣ ಮತ್ತು ಟ್ರೇಲರ್‌ನಿಂದ ಮೂಡಿಕೊಂಡಿರೋ ಅಗಾಧ ನಿರೀಕ್ಷೆಗಳ ಜೊತೆ ಜೊತೆಗೇ ಈ ಚಿತ್ರ ಚಿತ್ರಮಂದಿರಗಳತ್ತ ಪಯಣ ಹೊರಟಿದೆ.
ಇದು ತೇಜಸ್ವಿ ನಿರ್ದೇಶನ ಮಾಡಿರೋ ಮೊದಲ ಚಿತ್ರ. ಕಿರುತೆರೆ ಬರವಣಿಗೆಯ ಬಲದಿಂದಲೇ ಎಂಟ್ರಿ ಕೊಟ್ಟು ನಂತರದಲ್ಲಿ ಸೃಜನ್ ಜೊತೆಗೇ ನೆಲೆಗೊಂಡಿರುವ ತೇಜಸ್ವಿ ಹಲವಾರು ರಿಯಾಲಿಟಿ ಶೋಗಳು ಮತ್ತು ಧಾರಾವಾಹಿಗಳನ್ನು ನಿರ್ದೇಶನ ಮಾಡೋ ಮೂಲಕ ಯಶಸ್ವಿಯಾಗಿರುವವರು. ಹೀಗೆ ಪ್ರೇಕ್ಷಕರ ನಾಟಿ ಮಿಡಿತ ಮತ್ತು ಸೃಜನ್ ಲೋಕೇಶ್ ಅವರ ಪ್ರತಿಭೆಯ ಬಗ್ಗೆ ಸ್ಪಷ್ಟವಾದ ಅಂದಾಜು ಹೊಂದಿರೋ ತೇಜಸ್ವಿ ಅದರ ಆಧಾರದಲ್ಲಿಯೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ಈ ಸಿನಿಮಾವನ್ನು ರೂಪಿಸಿರುವ ರೀತಿ ಈಗಾಗಲೇ ಅನೇಕ ವಿಚಾರಗಳ ಮೂಲಕ ಜಾಹೀರಾಗಿದೆ. ಅದುವೇ ದೊಡ್ಡ ಮಟ್ಟದ ಗೆಲುವಿನ ಲಕ್ಷಣಗಳನ್ನೂ ಧ್ವನಿಸುತ್ತಿದೆ.
ಅಂದಹಾಗೆ ಈ ಚಿತ್ರದ ಪ್ರಧಾನ ಜೀವಾಳ ನಿರ್ದೇಶಕರು ಸೃಷ್ಟಿಸಿರೋ ಚೆಂದದ ಪಾತ್ರಗಳು. ಈ ಪಾತ್ರಗಳಿಗೆ ಅಳೆದೂ ತೂಗಿಯೇ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಮಾತಿನ ಮಲ್ಲ ಸೃಜನ್ ಲೋಕೇಶ್‌ಗೆ ತಾರೆಯದ ದಂಡೇ ಸಾಥ್ ಕೊಟ್ಟಿದೆ. ಸಾಧು ಕೋಕಿಲಾ, ಸಿಹಿಕಹಿ ಚಂದ್ರು ಮತ್ತು ತರಂಗ ವಿಶ್ವ ಮುಂತಾದವರ ಕಾಮಿಡಿ ಜುಗಲ್ಬಂದಿ ಇಲ್ಲಿದೆ. ಉಳಿದಂತೆ ತಾರಾ, ಗಿರಿಜಾ ಲೋಕೇಶ್, ಅವಿನಾಶ್ ಮುಂತಾದವರೆಲ್ಲ ಸೃಜನ್‌ಗೆ ಪಾತ್ರಗಳಾಗಿ ಶಕ್ತಿ ತುಂಬಿದ್ದಾರೆ. ಈ ಎಲ್ಲ ವಿಶೇಷತೆಗಳೂ ಕೂಡಾ ಈ ವಾರವೇ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.