ವಿಯೆನ್ನಾ: ಕೀನ್ಯದ ಸ್ಟಾರ್ ಮ್ಯಾರಥಾನ್ ಓಟಗಾರ ಯುಲಿಡ್ ಕಿಪ್ಚೋಗೆ ಐತಿಹಾಸಿಕ ಸಾಧನೆಯೊಂದಿಗೆ ಮೆರೆದಿ¨ªಾರೆ.
ವಿಯೆನ್ನಾದಲ್ಲಿ ನಡೆದ ಮ್ಯಾರ ಥಾನ್ ಸ್ಪರ್ಧೆಯನ್ನು ಒಂದು ಗಂಟೆ, 59 ನಿಮಿಷ, 40.2 ಸೆಕೆಂಡ್‌ನಲ್ಲಿ ಪೂರ್ತಿಗೊಳಿಸಿ¨ªಾರೆ. ಈ ಮೂಲಕ 2 ಗಂಟೆಯೊಳಗೆ ಮ್ಯಾರಥಾನ್ ಮುಗಿಸಿದ ವಿಶ್ವದ ಮೊದಲ ಓಟಗಾರ ಎಂಬ ಹಿರಿಮೆಗೆ ಪಾತ್ರರಾಗಿ¨ªಾರೆ.
ಆದರೆ ಕಿಪ್ಚೋಗೆ ಅವರ ಈ ಸಾಧನೆ ವಿಶ್ವದಾಖಲೆಯ ಪುಟ ಸೇರುವುದಿಲ್ಲ. ಇದೊಂದು “ಮುಕ್ತ ಸ್ಪರ್ಧೆ’ ಅಲ್ಲವಾದ್ದರಿಂದ ಅಧಿಕೃತ ವಿಶ್ವ ದಾಖಲೆಯಾಗಿ ಪರಿಗಣಿಸಲ್ಪಡದು ಎಂದು ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಆಫ್ ಆ್ಯತ್ಲೆಟಿಕ್ ಫೆಡರೇಶನ್ (ಐಎಎಎಫ್) ಸ್ಪಷ್ಟನೆ ನೀಡಿದೆ.
ಒಲಿಂಪಿಕ್ ಚಾಂಪಿಯನ್ ಕೂಡ ಆಗಿರುವ ಕಿಪೊcಗೆ, 2 ವರ್ಷಗಳ ಹಿಂದೆ ಈ ಸಾಧನೆಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು. ಅಂದು 2 ಗಂಟೆ, 25 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಪುರುಷರ ವಿಭಾಗದ ವಿಶ್ವದಾಖಲೆ ಕೂಡ ಇವರ ಹೆಸರಲ್ಲಿದೆ. 2018ರ ಬರ್ಲಿನ್ ಮ್ಯಾರಥಾನ್‌ನಲ್ಲಿ ಕಿಪೊcಗೆ 2 ಗಂಟೆ, 1 ನಿಮಿಷ, 39 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು.
ಇತಿಹಾಸ ನಿರ್ಮಿಸಲು ಓಟ
“ನಾನು ಇತಿಹಾಸ ನಿರ್ಮಿಸಲು ಓಡುತ್ತಿದ್ದೇನೆ. ಯಾವುದೇ ಮನುಷ್ಯನಿಗೂ ಮಿತಿಯಿಲ್ಲ ಎಂಬುದನ್ನು ತೋರಿಸಲು ಇಷ್ಟ ಪಡುತ್ತೇನೆ. ಇದು ಹಣದ ವಿಚಾರವಲ್ಲ. ಈ ಜಗತ್ತನ್ನು ಸುಂದರ ಹಾಗೂ ಶಾಂತಿಯುತವಾಗಿರಿಸಲು ನಮ್ಮೆಲ್ಲರ ಪ್ರಯತ್ನ ಸಾಗಬೇಕು’ ಎಂದು 34ರ ಹರೆಯದ ಎಲ್ಯೂಡ್ ಕಿಪೊcಗೆ ಹೇಳಿದ್ದಾರೆ.