Advertisement

ಪ್ರತಿಷಿತ ಸಂಸ್ಥೆ ನೆರವಿನೊಂದಿಗೆ ಅಂಧತ್ವ ನಿವಾರಣೆ

04:54 PM Jan 10, 2021 | Team Udayavani |

ಬೆಂಗಳೂರು: ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯಾದ್ಯಂತ ಅಂಧತ್ವ ನಿವಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

Advertisement

ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಶನಿವಾರ “ನೇತ್ರದಾನ’ದ ಮಹತ್ವ, ಕುರುಡುತನ, ಕಾರ್ನಿಯಲ್‌ ಕಸಿ ಚಿಕಿತ್ಸೆ ಕುರಿತು “ನಾರಾಯಣ ನೇತ್ರಾಲಯ ಐ ಫೌಂಡೇಶನ್‌’ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಕಣ್ಣಿಲ್ಲದವರು 80 ಲಕ್ಷ ಮತ್ತು ದೃಷ್ಟಿ ದೋಷವುಳ್ಳವರು ಆರು ಕೋಟಿ ಜನರಿದ್ದಾರೆ. ಕಳೆದ 10 ತಿಂಗಳಿಂದ ಕೋವಿಡ್ ಭೀತಿಯಿಂದ ಅಂಗಾಂಗ ದಾನ ಕುಗ್ಗಿದ್ದು, ನೇತ್ರದಾನಿಗಳ ಕೊರತೆಯಿಂದ ಅಂಧತ್ವ ನಿವಾರಣೆಗೂ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವಾಗಿ ನಾರಾಯಣ ನೇತ್ರಾಲಯದಂತಹ ಖಾಸಗಿ, ಪ್ರತಿಷ್ಠಿತ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ನೆರವಿನೊಂದಿಗೆ ವಿಶೇಷ ಶಿಬಿರ, ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ರೈತರ ಮೇಲೆ ಅಶ್ರುವಾಯು ಪ್ರಯೋಗ: ರೈತರೊಂದಿಗೆ ಹರ್ಯಾಣ ಸಿಎಂ ಖಟ್ಟರ್ ಮಾತುಕತೆ ರದ್ದು

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲ ವರ್ಗದವರಿಗೂ ಅಂಗಾಂಗ ಕಸಿ, ಮುಂತಾದ ಚಿಕಿತ್ಸೆಗಳು ದೊರೆಯಬೇಕು. ಇದಕ್ಕಾಗಿ ಈ ವಲಯಕ್ಕೆ ಸಹಕಾರ ನೀಡಲು ಸಿದ್ಧ ಎಂದು ಭರವಸೆ ನೀಡಿದರು. ತಮಿಳುನಾಡು ಜನರಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚು ಒಲವಿದೆ. ರಾಜ್ಯದಲ್ಲಿ ಕೂಡ ಅಂಗಾಂಗ ದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಕುರುಡುತನ ತಡೆಗಟ್ಟಲು ಶ್ರಮಿಸಬೇಕು. ಚಿಕಿತ್ಸೆಗಿರುವ ಅತ್ಯಾಧುನಿಕ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಳ್ಳಬೇಕು. ಸರ್ಕಾರವು ವಿಷನ್‌ ಗ್ರೂಪ್‌ ಮಾಡಿದ್ದು, ನೇತ್ರ ವಿಭಾಗಕ್ಕೆ ನಾರಾಯಣ ನೇತ್ರಾಲಯ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಅವರು ಚಿಕಿತ್ಸೆ ಸರಳೀಕರಣ, ವೆಚ್ಚಕಡಿತದಂತಹ ಅಂಶಗಳನ್ನು ಅಂಧತ್ವ ನಿವಾರಣೆಗೆ ನೀಡುವ ಸೂಕ್ತ ಸಲಹೆಗಳು ಆಧರಿಸಿ ಹೊಸ ನೀತಿ ರೂಪಿಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next