Advertisement

ಕುಷ್ಠ ರೋಗದ ಅವೈಜ್ಞಾನಿಕ ನಂಬಿಕೆ ಹೋಗಲಾಡಿಸಿ

04:18 PM Jan 29, 2021 | Team Udayavani |

ಮಂಡ್ಯ: ಕುಷ್ಠ ರೋಗ ಸಾಮಾನ್ಯ ಖಾಯಿಲೆಯಾ ಗಿದ್ದು, ಇದನ್ನು ಬಹು ಔಷಧ ಚಿಕಿತ್ಸಾ ವಿಧಾನದ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು. ಇದರ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅವೈಜಾnನಿಕ ನಂಬಿಕೆಗಳನ್ನು ಹೋಗಲಾಡಿಸಿ ಎಂದು ಜಿಪಂ ಸಿಇಒ ಎಸ್‌.ಎಂ.ಜುಲ್‌ ಖಾರ್‌ ಉಲ್ಲಾ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಪಂನಿಂದ ನಡೆದ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಕುಷ್ಠ ಅರಿವು ಆಂದೋಲನದ ಜಿಲ್ಲಾ ಮಟ್ಟದ ಅಂತರ್‌ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಕುಷ್ಠದ ವಿರುದ್ಧ ಅಂತಿಮ ಯುದ್ಧ, ಬನ್ನಿ ಕೈ ಜೋಡಿಸಿ ಎಂಬ ಘೋಷಣೆಯೊಂದಿಗೆ ಜ.30ರಿಂದ ಫೆಬ್ರವರಿ 13ರವರೆಗೆ ಸ್ಪರ್ಶ್‌ ಕುಷ್ಠ ರೋಗ ಅರಿವು ಆಂದೋಲನ ವನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಮ್ಮ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಿಗೆ ಕುಷ್ಠ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ಮಚ್ಚೆಗಳನ್ನು ತಪಾಸಣೆಗೆ ಒಳಪಡಿಸಿ ಎಂದು ಹೇಳಿದರು.

ಇದನ್ನೂ ಓದಿ:ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿ: ತಿಪ್ಪೆಸ್ವಾಮಿ

ಕುಷ್ಠ ರೋಗ ಸಮೀಕ್ಷೆ ನಡೆಸಿ: ಜಿಲ್ಲಾ ಸಮಾಜ ಕಲ್ಯಾಣಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾ ಖೆಯವರು ತಮ್ಮ ವ್ಯಾಪ್ತಿಗೆ ಬರುವ ವಸತಿ ಶಾಲೆಗಳು ಹಾಗೂ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಮಚ್ಚೆತಪಾಸಣೆಗೆ ಒಳಪಡಿಸಲು ಕ್ರಮ ವಹಿಸಬೇಕು. ಕುಷ್  ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಎಲ್ಲ ಆಶಾ ಕಾರ್ಯಕರ್ತೆಯರು ಪ್ರತಿ ಮನೆ, ಮನೆಗೆ ಭೇಟಿ ನೀಡಿ ಕುಷ್ಠ ರೋಗ ಸಮೀಕ್ಷೆ ನಡೆಸಬೇಕು ಎಂದರು. ಜಿಲ್ಲಾಆರೋಗ್ಯಾಧಿಕಾರಿ ಡಾ.ಎಚ್‌.ಪಿ. ಮಂಚೇಗೌಡ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಸೋಮಶೇಖರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next