Advertisement

ಕಾನೂನು ತೊಡಕು ನಿವಾರಿಸಿ ಮುಂದಡಿ

10:55 PM Feb 29, 2020 | Lakshmi GovindaRaj |

ಬೆಳಗಾವಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡು ಮುಂದುವರಿಯುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಕಳಸಾ ನಾಲಾ ಪ್ರದೇಶ ಹಾಗೂ ಮಲಪ್ರಭಾ ನದಿ ಉಗಮಸ್ಥಾನದ ಬಳಿಯ ಮಾಹುಲಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

Advertisement

ಸುಪ್ರೀಂಕೋರ್ಟ್‌ ಆದೇಶದಂತೆ ಕೇಂದ್ರ ಸರಕಾರ ಈಗ ಅಧಿಸೂಚನೆ ಹೊರಡಿಸಿದೆ. ಅದರಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಕಳಸಾ-ಬಂಡೂರಿ ಯೋಜನೆ ವಿಷಯದಲ್ಲಿ ಗೋವಾ ಸರಕಾರ ಆಕ್ಷೇಪಣೆ ಸಲ್ಲಿಸಿದ್ದು, ಅದರ ವಿಚಾರಣೆ ಬರುವ ಸೋಮವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚಿನ ವಿಷಯ ಗಳನ್ನು ಇಲ್ಲಿ ಚರ್ಚಿಸುವುದಿಲ್ಲ.

ಈ ಬಗ್ಗೆ ಅನಗತ್ಯ ವಿವಾದ ಸೃಷ್ಟಿಯಾಗುವುದು ಬೇಡ ಎಂದು ಹೇಳಿದರು. ಕುಡಿಯುವ ನೀರಿನ ಯೋಜನೆಗೆ ಅನುಮತಿ ಅಗತ್ಯ ಇಲ್ಲ ಎಂದು ತಿಳಿದುಕೊಂಡಿ ದ್ದೇನೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ಕೆಲ ವಿಷಯಗಳು ವಿಚಾರಣೆಗೆ ಬಾಕಿಯಿವೆ. ಈ ಎಲ್ಲಾ ಕಾನೂನು ತೊಡಕನ್ನು ನಿವಾರಿಸಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಚಿವರು ಹೇಳಿದರು.

ಮಹದಾಯಿ ಯೋಜನೆಯಲ್ಲಿ ಕರ್ನಾಟಕದ ಹಕ್ಕು ಇದ್ದರೂ ಸುಪ್ರೀಂಕೋರ್ಟ್‌ನ ಆದೇಶ ದಂತೆ ಮುಂದುವರಿಯುತ್ತೇವೆ. ನ್ಯಾಯಾಧಿಕರ ಣದ ಅಂತಿಮ ಆದೇಶ ಜುಲೈ ತಿಂಗಳಲ್ಲಿ ಹೊರ ಬರಲಿದೆ. ಮಹದಾಯಿ ನದಿಯ ಒಟ್ಟು 188 ಟಿಎಂಸಿ ನೀರಿನಲ್ಲಿ ಕರ್ನಾಟಕದ ಪಾಲು 44 ಟಿಎಂಸಿಯಷ್ಟಿದೆ. ಅದಕ್ಕಿಂತ ಹೆಚ್ಚು ಬಂದರೂ ಸಂತೋಷ ಎಂದು ಹೇಳಿದರು.

ಇದು ರಾಜ್ಯದ ಸಮಸ್ಯೆ. ಇದರಲ್ಲಿ ರಾಜ ಕಾರಣ ಮಾಡಬಾರದು. ನ್ಯಾಯಾಲಯದ ಆದೇಶ ಹಾಗೂ ಕೇಂದ್ರ ಸರಕಾರದ ಅಧಿಸೂಚ ನೆಗೆ ಮುನ್ನ ರಾಜ್ಯ ಸರಕಾರ ಈ ಯೋಜನೆಯ ಅನುಷ್ಠಾನಕ್ಕೆ ಬಜೆಟ್‌ನಲ್ಲಿ 200 ಕೋಟಿ ತೆಗೆದಿಟ್ಟಿತ್ತು. ಆದರೆ, ಇದಕ್ಕೆ 500 ರಿಂದ 1,000 ಕೋಟಿ ರೂ.ಕೊಟ್ಟರೆ ಒಳ್ಳೆಯದು. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.

Advertisement

ಪ್ರಚಾರ ಬೇಡ: ರೈತರು ಕರೆದಿದ್ದರಿಂದ ಅನಿವಾರ್ಯವಾಗಿ ಇಲ್ಲಿಗೆ ಬರಬೇಕಾಯಿತು. ತಮ್ಮ ಭೇಟಿಗೆ ಹೆಚ್ಚಿನ ಪ್ರಚಾರ ನೀಡುವುದು ಬೇಡ ಎಂದು ಮನವಿ ಮಾಡಿದ ಸಚಿವ ಜಾರಕಿಹೊಳಿ ಕಣಕುಂಬಿಯಲ್ಲಿ ನೀರಾವರಿ ನಿಗಮದಿಂದ ಆಯೋಜಿಸಿದ್ದ ಸಭೆಯನ್ನು ಸಹ ರದ್ದು ಮಾಡಿದರು. ಕಳಸಾ ನಾಲಾ ಪ್ರದೇಶದಲ್ಲಿ ಹೆಚ್ಚು ಸಮಯ ಕಳೆಯದ ಸಚಿವರು, ನೇರ ವಾಗಿ ಕಣಕುಂಬಿಯ ಮಾಹುಲಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಂದ ವಾಪಸ್ಸಾದರು. ಸಚಿವರ ಜೊತೆ ಶಾಸಕ ಆನಂದ ಮಾಮನಿ, ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next