ಮಂಗಳವಾರ ಸರಿ ಹೋಗಿದೆ.
Advertisement
ಶಿಕ್ಷಣ ಇಲಾಖೆ ಸೂಚನೆ ಮೇರೆಗೆ ರಾತ್ರೋ ರಾತ್ರಿ ಪರೀಕ್ಷಾ ವಿಧಾನ ಹೊಸ ನಿಯಮಗಳಂತೆ ವ್ಯವಸ್ಥೆಗೊಂಡಿದ್ದು, ಮಂಗಳವಾರ ಎಲ್ಲೆಡೆ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ನೀಡಿ ಪರೀಕ್ಷೆ ನಡೆಸಲಾಯಿತು. ಹಳೆಯ ವಿಧಾನದಲ್ಲಿದ್ದ ಬುಕ್‌ಲೆಟ್ ಗಳನ್ನು ಶಾಲಾ ಮಟ್ಟದಲ್ಲಿಯೇ ಹೊಸ ವಿಧಾನಗಳಿಗೆ ಬದಲಿಸಿಕೊಳ್ಳಲಾಗಿದೆ. ಬಹುತೇಕ ಕಡೆ ಪ್ರಶ್ನೆಗಳನ್ನು ಡಿಟಿಪಿ ಮಾಡಿಸಿ ಅದನ್ನು ರಾತ್ರೋರಾತ್ರಿ ಜೆರಾಕ್ಸ್ ಮಾಡಿಸಿ ಬೆಳಗ್ಗೆ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಮೂಲಕ ಪೂರ್ವ ಸಿದ್ಧತಾ ಪರೀಕ್ಷೆಯ ಮೊದಲು ಮಾಡಿದ್ದ ಲೋಪವನ್ನು ಪರೀಕ್ಷೆಯ ಹೊಣೆ ಹೊತ್ತಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘ ಮರುದಿನ ಸರಿಪಡಿಸಿಕೊಂಡಂತಾಗಿದೆ. ವ್ಯವಸ್ಥೆ ಬಗ್ಗೆ ಮಾತನಾಡಿರುವ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರೇಗೌಡ, ಇಲಾಖೆ ಸುತ್ತೋಲೆ ಬೆನ್ನಲ್ಲೇ ಹೊಸ ವಿಧಾನದ ಮೂಲಕವೇ ಪರೀಕ್ಷೆ ನಡೆಸಲು ಎಲ್ಲಾ ಶಿಕ್ಷಕರಿಗೆ ತಿಳಿಸಿದ್ದೇವೆ. ಈಗಾಗಲೇ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಬುಕ್ ಲೆಟ್ ಬಂಡಲ್‌ಗಳನ್ನು ತಲುಪಿರುವುದರಿಂದ ಅವುಗಳನ್ನು ವಾಪಸ್ ಪಡೆದು ಬೇರೆ ಬುಕ್ ಲೆಟ್ ನೀಡಲು ಕಾಲಾವಕಾಶದ ಕೊರತೆ ಇದೆ ಎಂದರು.
ಮುಂದಿನ ಶೈಕ್ಷಣಿಕ ಸಾಲಿನಿಂದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದಲೇ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿಯ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಾದ ಎಡವಟ್ಟಿನ ಹಿನ್ನೆಲೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇs…, ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಎಸ್‌ಎಸ್‌ಎಲ್‌ಸಿ ಮಂಡಳಿಯಿಂದಲೇ ನಡೆಸಿದರೆ ಹೇಗೆ ಎಂಬ ಆಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 1972 ರಿಂದ ಇಲ್ಲಿಯವರೆಗೂ ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ
ಸಂಘ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದೆ. ಪ್ರಶ್ನೆ ಪತ್ರಿಕೆ ತಯಾರಿಸಿ ಶಾಲೆಗಳಿಗೆ ನೀಡುವುದು, ಪರೀಕ್ಷೆಗೆ ವೇಳಾಪಟ್ಟಿ ಸಿದ್ಧಪಡಿಸುವುದು, ಪರೀಕ್ಷೆ ನಡೆಸುವುದು ಸಂಘವೇ ಆಗಿರುತ್ತದೆ. ಇದರ ಬದಲು ಮಂಡಳಿಯಿಂದಲೇ ಪರೀಕ್ಷೆ ನಡೆಸಿದರೆ ಹೇಗೆ?
ಇದರಿಂದ ಈ ಬಾರಿಯಂತೆ ಗೊಂದಲಗಳು ಉಂಟಾಗುವುದಿಲ್ಲ ಎಂಬುದು ಸಚಿವರ ಚಿಂತನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷೆ ವಿಧಾನದಲ್ಲಿ ಬದಲಾವಣೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿಧಾನ ಬದಲಾಯಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೊರಡಿಸಿದ್ದ
ಅಧಿಸೂಚನೆ ರದ್ದು ಪಡಿಸುವಂತೆ ಕೋರಿ 34 ವಿದ್ಯಾರ್ಥಿಗಳ ಪೋಷಕರಿಂದ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ
ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ನ್ಯಾ. ಎಸ್. ಸುಜಾತಾ ಅವರಿದ್ದ ಏಕಸದಸ್ಯ ಪೀಠದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸುಮನ್ ಹೆಗ್ಡೆ, ಸರ್ಕಾರ ಹೊಸ ಅಧಿಸೂಚನೆ ವರ್ಷಾಂತ್ಯದಲ್ಲಿ ಮಾಡಿದೆ. ಇದರಿಂದ ವಿದ್ಯಾರ್ಥಿಗಳು
ಗೊಂದಲಧಿಕ್ಕೀಡಾಗಿದ್ದಾರೆ. ಅಲ್ಲದೆ ಈಗಾಗಲೇ ಪೂರ್ವಭಾವಿ ಪರೀಕ್ಷೆಯೂ ಹಳೇ ವಿಧಾನದಲ್ಲಿಯೇ ನಡೆಯುತ್ತಿದೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಶಿವಣ್ಣ, ಸರ್ಕಾರ ಡಿ. 6ರಂದು ಪರೀಕ್ಷೆ ವಿಧಾನ ಬದಲಾವಣೆಯ ಅಧಿಸೂಚನೆ ಹೊರಡಿಸಿದ್ದು, ಎಲ್ಲ ಜಿಲ್ಲೆಗಳ ಡಿಡಿಪಿಐಗಳಿಗೆ ಸುತ್ತೋಲೆ ಹೊರಡಿಸಿ ಬದಲಾದ ಪದ್ಧತಿಯಂತೆ ಪೂರ್ವಭಾವಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದೆ.
Related Articles
Advertisement
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪ್ರಾಂಶುಪಾಲರ ಸಂಘದ ನಡುವಿನ ಸಂವಹನ ಕೊರತೆಯಿಂದ ಖಾಸಗಿ ಶಾಲೆಗಳಿಗೆ ಹೊರೆಯಾಗುತ್ತಿದೆ. ಇಲಾಖೆ ಯಡವಟ್ಟಿನ ಸಮಸ್ಯೆಗೆ ಪರಿಹಾರ ಯಾರು ನೀಡುತ್ತಾರೆ? ಶಶಿ ಕುಮಾರ್, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ(ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ