ದೇವನಹಳ್ಳಿ: ಪರಿಶಿಷ್ಟ ಪಂಗಡಕ್ಕೆ ಬರುವ ಎಲ್ಲ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು. ಅರ್ಹ ಫಲಾನುಭವಿಗಳಿಗೆ ಸೌಕರ್ಯಗಳು ದೊರೆತಾಗ ಸೌಲಭ್ಯಕ್ಕೆ ಅರ್ಥ ಸಿಗುತ್ತದೆ ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದ ಅವರು, 72 ಲಕ್ಷ ರೂ. ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಿರುವವರಿಗೆ ಪಂಪು ಮೋಟಾರ್, ಕೇಬಲ್, ಪೈಪ್‌ಗ್ಳನ್ನು ನೀಡಲಾಗುತ್ತಿದೆ. ಇದರ ಆರ್ಥಿಕಮಟ್ಟವನ್ನು ಸದೃಢಗೊಳಿಸಿಕೊಳ್ಳಬೇಕು. 18 ಫಲಾನುಭವಿಗಳಿಗೆ ನೀಡುತ್ತಿದ್ದೇವೆ. ಟೆಂಪೋ ಖರೀದಿಸಲು 3 ಲಕ್ಷ ರೂ. ಸಹಾಯಧನದ ಚೆಕ್‌ನ್ನು ನೀಡುತ್ತಿದ್ದೇವೆ ಎಂದರು.
ತಾಲೂಕಿನಲ್ಲಿ 5 ವರ್ಷದಲ್ಲಿ ಯಾರಿಗೂ ಸಹ ಸರ್ಕಾರದ ಸೌಲಭ್ಯ ವಂಚಿತರಾಗಬಾರದು. ಸರ್ಕಾರ ಕೇವಲ 3-4 ಫಲಾನುಭವಿಗಳಿಗೆ ಹಲವಾರು ಸೌಲಭ್ಯ ನೀಡುತ್ತಾರೆ. 4 ಫಲಾನುಭವಿಗಳನ್ನು ಆಯ್ಕೆ ಮಾಡ ಬೇಕಾಗುತ್ತದೆ. ಒಂದು ಯೋಜನೆಗೆ 700 ಅರ್ಜಿಗಳು ಬರುತ್ತವೆ. ಯಾರಿಗೆ ಕೊಡಬೇಕು ಎಂಬ ಗೊಂದಲ ಸೃಷ್ಟಿಯಾಗುತ್ತವೆ. ಕನಿಷ್ಠ 200 ಫಲಾನುಭವಿಗಳಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿದರು ಎಲ್ಲ ಪಲಾನುಭವಿಗಳಿಗೂ ಅನುಕೂಲ ಆಗುತ್ತದೆ ಎಂದರು.
ನಿರುದ್ಯೋಗಿಗಳಿಗೆ ಸಾಲ ಮಂಜೂರು: ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಡೇರಿ ನಾಗೇಶ್ ಬಾಬು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬರುತ್ತಿರುವ ಸೌಲಭ್ಯ ಜನರಿಗೆ ತಲು ಪಿಸುವಂತೆ ಆಗುತ್ತಿದೆ. ಕೆಲವೊಂದು ಯೋಜನೆ ಅರ್ಹ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತಿದೆ. ಎಲ್ಲರಿಗೂ ಒಂದು ಯೊಜನೆಯಲ್ಲಿ ಸೌಲಭ್ಯ ನೀಡು ವುದು ಕಷ್ಟ. ಕೆಲ ನಿರುದ್ಯೋಗಿಗಳಿಗೆ ಯೋಜನೆ ಯಡಿಯಲ್ಲಿ ಸಾಲ ಮಂಜೂರು ಮಾಡಿಸಿ ಸಹಾಯಧನ ಸಹ ನೀಡಲಾಗುತ್ತಿದೆ ಎಂದರು.
ಕನಿಷ್ಠ 2 ಎಕರೆ ಜಮೀನು ಇರಬೇಕು: ಗಂಗಾ ಕಲ್ಯಾಣ ಯೋಜನೆಯಲ್ಲಿ ಕೆಲವು ಫಲಾನುಭವಿಗಳಿಗೆ ಜಮೀನು ಕಡಿಮೆ ಇದ್ದು, ಅವರನ್ನು ಆಯ್ಕೆ ಮಾಡಲಾಗುತ್ತಿಲ್ಲ. ಕನಿಷ್ಠ 1.5-2 ಎಕರೆ ಜಮೀನಿದ್ದರೆ ಅಂತಹ ಫಲಾನುಭವಿಗಳನ್ನು ಗಂಗಾಕಲ್ಯಾಣ ಯೋಜನೆಯಲ್ಲಿ ಆಯ್ಕೆ ಮಾಡಿ ಬೋರ್‌ವೆಲ್ ಕೊರೆಸಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆ ಪರಿಶಿಷ್ಟ ಜನಾಂಗಕ್ಕೆ ತಲುಪಿಸಲಾಗುತ್ತಿದೆ ಎಂದರು.
ಪುರಸಭಾಧ್ಯಕ್ಷೆ ಗೋಪಮ್ಮ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ಅಣ್ಣೇಶ್ವರ ಗ್ರಾಪಂ ಮಾಜಿ ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ವಸಂತಕುಮಾರ್, ಮಾಳಿಗೇನಹಳ್ಳಿ ಎಂಪಿಸಿಎಸ್ ಮಾಜಿ ಅಧ್ಯಕ್ಷ ವೆಂಕಟೇಶ್‌ಮೂರ್ತಿ, ಮುಖಂಡ ಯರ್ತಿಗಾನಹಳ್ಳಿ ಶಾಮಣ್ಣ, ಗೌರಮ್ಮ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕಲ್ಯಾಣಕುಮಾರ್ ಬಾಬು, ಮಹರ್ಷಿ ವಾಲ್ಮೀಕಿ ಅಬಿವೃದ್ಧಿ ನಿಗಮದ ಡಿಜಿಎಂ ಮಂಜುನಾಥ್, ವ್ಯವಸ್ಥಾಪಕ ಪರಮೇಶ್, ವಿಸ್ತರಣಾಧಿಕಾರಿ ರಮೇಶ್ ಹಾಗೂ ಮತ್ತಿತರಿದ್ದರು.