Advertisement

General Merit ಆಯ್ಕೆಯಾದ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸಿಂಧುತ್ವದ ಅಗತ್ಯತೆ ಇಲ್ಲ

08:36 PM Nov 29, 2023 | Team Udayavani |

ಕಾರವಾರ: ಜನರಲ್ ಮೆರಿಟ್‌ನಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವದ ಪರಿಶೀಲನೆ ಅಗತ್ಯತೆ ಇಲ್ಲ ಎಂದು ಸರಕಾರಕ್ಕೆ ಆಯೋಗದ ಶಿಫಾರಸ್ಸು ಮಾಡಲಿದೆ ಎಂದು ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದರು.

Advertisement

ಕಾರವಾರದಲ್ಲಿ ಅವರು ಬುಧುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಹುದ್ದೆಗಳಿಗೆ ಜನರಲ್ ಮೆರಿಟ್ ನಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಆದಾಯ ಪ್ರಮಾಣ ಪರಿಶೀಲನೆ ಅಗತ್ಯ ಇರುವುದಿಲ್ಲ. ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮೊದಲೇ ಆಗಿರುತ್ತದೆ ಎಂದರು. ಈಚೆಗೆ ವಿವಿಧ ಹುದ್ದೆಗಳಿಗೆ ಜನರಲ್ ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಅಲ್ಪ ಸಂಖ್ಯಾತ ಅಭ್ಯರ್ಥಿ ಗಳಿಗೆ ಸಿಂಧುತ್ವದ ನೆಪದಲ್ಲಿ ತೊಂದರೆ ಆಗುತ್ತಿದೆ ಎಂದು ಆಯೋಗಕ್ಕೆ ದೂರು ಬಂದಿವೆ. ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ತಕ್ಷಣ ಅವರು ಜಿಲ್ಲಾಧಿಕಾರಿ ಮತ್ತು ಸರ್ಕಾರದ ಕಾರ್ಯದರ್ಶಿ ಗೆ ಈ ಸಂಬಂಧ ಸೂಚನೆ ನೀಡಿದ್ದಾರೆ.

ಮೆರಿಟ್‌ ಮೇಲೆ ಆಯ್ಕೆಯಾದವರ ಆದಾಯ ಪ್ರಮಾಣ ಪತ್ರ ಪರಿಶೀಲನೆ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಗಳಿಗೆ ಮನವರಿಕೆಯಾಗಿದೆ. ಅಲ್ಲದೆ‌ ಈ ಸಂಬಂಧ ಆಡಳಿತ ಸಿಬ್ಬಂದಿ ಸುಧಾರಣೆ ಇಲಾಖೆ ಡಿಎಪಿಆರ್ ನಿಂದ ಜಿಲ್ಲಾಡಳಿತಕ್ಕೆ ಆದೇಶ ಬರುವುದು ಬಾಕಿ ಇದೆ ಎಂದರು. ಅಲ್ಪಸಂಖ್ಯಾತ ಫಲಾನುಭವಿಗಳ ಆಯ್ಕೆಯಲ್ಲಿ ಸರ್ಕಾರದ ಯೋಜನೆಯ ನಿಗದಿತ ಗುರಿಗೂ , ಫಲಾನುಭವಿಗಳ ಸಂಖ್ಯೆಗೂ ವಿಪರೀತ ವ್ಯಾತ್ಯಾಸ ಇದೆ. ಆಗ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡುವಂತೆ ಹಾಗೂ ಅಲ್ಪಸಂಖ್ಯಾತರ ಬೇಡಿಕೆಗೆ ತಕ್ಕಂತೆ ಖಬರಸ್ಥಾನ ಭೂಮಿ ನೀಡಿಕೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಯೋಗ ಶಿಫಾರಸ್ಸು ಮಾಡಲಿದೆ. ಅಲ್ಲದೆ ಹಾಸ್ಟೆಲ್ ನಲ್ಲಿ ಪಾಠ ಮಾಡುವ ಶಿಕ್ಷಕ ಮತ್ತು ಉಪನ್ಯಾಸಕರಿಗೆ ಕನಿಷ್ಠ ವೇತನ ನೀಡುವಂತೆ ಸಹ ಶಿಫಾರಸ್ಸು ಮಾಡಲಾಗುವುದು ಎಂದರು.

ಕಳೆದ ದಶಕದಲ್ಲಿ ಉತ್ತರ ಕನ್ನಡದ ಶಿರಸಿ, ಭಟ್ಕಳದಲ್ಲಿ ಕೋಮುಗಲಭೆ ನಡೆಯದೆ, ಭಾವೈಕ್ಯತೆ ಕಾಯ್ದುಕೊಂಡ ಜನತೆಗೆ ಧನ್ಯವಾದಗಳನ್ನು ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ತಿಳಿಸಿದರು. ಉತ್ತರ ಕನ್ನಡದ‌ ಜನತೆ ಹೀಗೆ ಭಾವೈಕ್ಯತರಯಿಂದ ಬದುಕಲಿ ಎಂದು ಅವರು ಹೇಳಿದರು. ಆಯೋಗದ ಕಾರ್ಯದರ್ಶಿ, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next