Advertisement

ದಂಗಲ್‌ ನೋಡಿ ಕಣ್ಣೀರಿಟ್ಟ ಸ್ವೀಡನ್‌ ಟೆನಿಸ್‌ ತಾರೆ

06:20 AM Nov 25, 2018 | Team Udayavani |

ಸ್ವೀಡನ್‌: ಬಾಲಿವುಡ್‌ ನಟ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾ ವಿಶ್ವಾದ್ಯಂತ ಜನಪ್ರಿಯವಾಗಿದ್ದು ಹಳೆಯ ಸುದ್ದಿ. 

Advertisement

ಆ ಸಿನಿಮಾವನ್ನು ಇತ್ತೀಚೆಗೆ ನೋಡಿದ ಸ್ವೀಡನ್ನಿನ ನಂ.1 ಟೆನಿಸ್‌ ತಾರೆ ಎಲಿಯಾಸ್‌ ವೈಮರ್‌ ಕಣ್ಣೀರಿಟ್ಟಿದ್ದು ಹೊಸ ಸುದ್ದಿ. ಈ ಸಿನಿಮಾ ಕಥೆ ನನ್ನ ಜೀವನವನ್ನೇ ಹೋಲುತ್ತದೆ. ನಮ್ಮಪ್ಪ ನಾವಿಬ್ಬರೂ ಸಹೋದರರನ್ನು ಟೆನಿಸ್‌ನಲ್ಲಿ ಬೆಳೆಸಲು ಬಹಳ ಪರಿಶ್ರಮಪಟ್ಟರು. ಇಥಿಯೋಪಿಯದಲ್ಲಿ ಟೆನಿಸ್‌ ಜನಪ್ರಿಯವಲ್ಲ, ಆದ್ದರಿಂದ ಜನರೆಲ್ಲ ನೀವು ಟೆನಿಸ್‌ ತಾರೆಯರಾಗಲು ಸಾಧ್ಯವೇ ಇಲ್ಲ ಎಂದು ಆಡಿಕೊಳ್ಳುತ್ತಿದ್ದರು. ಅಂತಹದ್ದರ ನಡುವೆ ನಾನು ಟೆನಿಸ್‌ ತಾರೆಯಾದೆ ಎಂದು ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಎಲಿಯಾಸ್‌ ಇಥಿಯೋಪಿಯ ಮೂಲದವರು. ಈಗ ಸ್ವೀಡನ್‌ ಪರ ಟೆನಿಸ್‌ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next