Advertisement

Mumbai: ಟ್ರೇಡ್ ವರ್ಲ್ಡ್ ಕಟ್ಟಡದ ಲಿಫ್ಟ್ ಕುಸಿದು 14 ಮಂದಿಗೆ ಗಾಯ

04:24 PM Jun 21, 2023 | Team Udayavani |

ಮುಂಬೈ: ಮುಂಬೈನ ಲೋವರ್ ಪರೇಲ್‌ನಲ್ಲಿರುವ ಟ್ರೇಡ್ ವರ್ಲ್ಡ್ ಕಟ್ಟಡದಲ್ಲಿ ಲಿಫ್ಟ್ ಕುಸಿದು ಸುಮಾರು 12 ರಿಂದ 14 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

Advertisement

ಈ ಘಟನೆಯು ನಗರದ ಕಮಲಾ ಮಿಲ್ಸ್ ಪ್ರದೇಶದಲ್ಲಿನ ಟ್ರೇಡ್ ವರ್ಲ್ಡ್ ಬಿಲ್ಡಿಂಗ್‌ನಲ್ಲಿ ಬುಧವಾರ ನಡೆದಿದ್ದು, ಲೋವರ್ ಪರೇಲ್‌ನಲ್ಲಿರುವ ವಾಣಿಜ್ಯ ಸಂಕೀರ್ಣವು ಇದಾಗಿದ್ದು ಇದರಲ್ಲಿ ಹಲವಾರು ಕಾರ್ಪೊರೇಟ್ ಕಚೇರಿಗಳು ಮತ್ತು ಪ್ರಮುಖ ರೆಸ್ಟೋರೆಂಟ್‌ಗಳನ್ನು ಹೊಂದಿದೆ.

ನಾಲ್ಕನೇ ಮಹಡಿಯಿಂದ ಲಿಫ್ಟ್ ಬಿದ್ದು ಅದರಲ್ಲಿದ್ದ 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಗ್ಗೆ ಬಿಎಂಸಿ ನೀಡಿದ ಮಾಹಿತಿಯ ಪ್ರಕಾರ, ಲೋವರ್ ಪ್ಯಾರಾಲ್‌ನ ಕಮಲಾ ಮಿಲ್‌ನಲ್ಲಿರುವ ಟ್ರೇಡ್ ವರ್ಲ್ಡ್ ಕಟ್ಟಡದಲ್ಲಿ ಲಿಫ್ಟ್ ಕುಸಿದು ಬಿದ್ದಿದೆ ಪರಿಣಾಮ 12 ರಿಂದ 14 ಜನರು ಗಾಯಗೊಂಡಿದ್ದಾರೆ. ಟ್ರೇಡ್ ವರ್ಲ್ಡ್ ಕಟ್ಟಡದ ಸಿ-ವಿಂಗ್‌ನ ನಾಲ್ಕನೇ ಮಹಡಿಯಿಂದ ಲಿಫ್ಟ್ ಕುಸಿದು ಬಿದ್ದಿದೆ. ಈ ಕಟ್ಟಡವು 16 ಅಂತಸ್ತುಗಳನ್ನು ಹೊಂದಿದೆ. ತಕ್ಷಣ ಭದ್ರತಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ಎಂಟು ಮಂದಿಯನ್ನು ಪರಾಲ್ಚ್ಯಾ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಲ್ಲಾಪುರ: ಗ್ಯಾಸ್ ಟ್ಯಾಂಕರ್, ಲಾರಿ ನಡುವೆ ಅಪಘಾತ… ಹೆದ್ದಾರಿ ಸಂಚಾರ ಅಸ್ತವ್ಯಸ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next