Advertisement

ಬಿಜೆಪಿಯ ರಾಜಸ್ಥಾನ ಚುನಾವಣ ಕಾರ್ಯತಂತ್ರ: ಕಟಾರಿಯಾರಿಗೆ ರಾಜ್ಯಪಾಲ ಹುದ್ದೆ

03:35 PM Feb 12, 2023 | Team Udayavani |

ಜೈಪುರ: ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದು ಅವರನ್ನು ರಾಜ್ಯದಲ್ಲಿ ಸಕ್ರಿಯ ರಾಜಕೀಯದಿಂದ ಪರಿಣಾಮಕಾರಿಯಾಗಿ ನಿವೃತ್ತಿಗೊಳಿಸಿದೆ .

Advertisement

78ರ ಹರೆಯದ ಕಟಾರಿಯಾ ಅವರು ಸಕ್ರಿಯ ರಾಜಕಾರಣಿಯಾಗಿದ್ದು, ಆರ್ ಎಸ್ ಎಸ್ ಸಿದ್ಧಾಂತದಲ್ಲಿ ಆಳವಾಗಿ ಬೇರೂರಿದ್ದಾರೆ. ಅವರು ಯಾವಾಗಲೂ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಯಾಗಿದ್ದರು ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳಲ್ಲಿ ಗೃಹ ಸಚಿವರಾಗಿದ್ದರು.

ಗುಲಾಬ್ ಚಂದ್ ಕಟಾರಿಯಾ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಆರಂಭದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು, ಆದರೆ ಈಗ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆಂದು ತಿಳಿದುಬಂದಿದೆ.ಕಟಾರಿಯಾ ಅವರು ದಕ್ಷಿಣ ರಾಜಸ್ಥಾನದ ಮೇವಾರ್-ವಾಗಡ್ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಕಟಾರಿಯಾ ಅವರನ್ನು ಸಕ್ರಿಯ ರಾಜಕೀಯದಿಂದ ಹೊರ ತಂದಿರುವುದು ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡುವ ಬಿಜೆಪಿಯ ತಂತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next