Advertisement

ಆ. 29, 30: ‘ಎಲಿವೇಟ್‌ 100’ಅಂತಿಮ ಸುತ್ತು

11:35 AM Aug 28, 2017 | Team Udayavani |

ಬೆಂಗಳೂರು: ರಾಜ್ಯ ಸರಕಾರ ನವೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಿರುವ ‘ಎಲಿವೇಟ್‌ 100’ ಅಂತಿಮ ಸುತ್ತು ನಗರದ ಲಲಿತ್‌ ಅಶೋಕ್‌ ಹೊಟೇಲ್‌ನಲ್ಲಿ ಆ. 29 ಮತ್ತು 30ರಂದು ನಡೆಯಲಿದೆ. ಮಂಗಳೂರು, ಬೆಂಗಳೂರು, ಕಲಬುರಗಿ, ಮೈಸೂರು ಮತ್ತು ಹುಬ್ಬಳ್ಳಿ ಸಹಿತ ರಾಜ್ಯದ ವಿವಿಧ ಭಾಗಗಳಿಂದ 250 ಸ್ಟಾರ್ಟ್‌ಅಪ್‌ಗಳನ್ನು ‘ಎಲಿವೇಟ್‌ 100’ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ.

Advertisement

ಎಲಿವೇಟ್‌ ಅಂತಿಮ ಸುತ್ತಿಗೆ ಪ್ರವೇಶಿಸುತ್ತಿರುವ ಸ್ಟಾರ್ಟ್‌ಅಪ್‌ಗ್ಳು, ಪ್ಯಾನೆಲ್‌ ಚರ್ಚೆಗಳನ್ನು ನಡೆಸಲಿವೆ. ವಿಜೇತ 100 ಸ್ಟಾರ್ಟ್‌ಅಪ್‌ಗ್ಳಿಗೆ 400 ಕೋಟಿ ರೂ. ಸ್ಟಾರ್ಟ್‌ಅಪ್‌ ಫ‌ಂಡ್‌, ಮೆಂಟರ್‌ಗಳು, ನೆಟ್‌ವರ್ಕಿಂಗ್‌ ಅವಕಾಶಗಳು, ಇನ್‌ಕ್ಯುಬೇಶನ್‌ ಸೌಲಭ್ಯ ಮತ್ತು ರಾಜ್ಯ ಸರಕಾರ ಒದಗಿಸುವ ವಿವಿಧ ಸೌಲಭ್ಯಗಳು ಲಭ್ಯವಾಗಲಿವೆ.

ಆ. 29 ಮತ್ತು 30ರಂದು ನಡೆಯಲಿರುವ ಎರಡು ದಿನಗಳ ಅಂತಿಮ ಸುತ್ತಿನಲ್ಲಿ ಗ್ರಾಹಕರ ಮೌಲೀಕರಣ, ಮಾರ್ಕೆಟಿಂಗ್‌ ತಂತ್ರಗಳು, ಐಒಟಿ, ಸ್ಕೇಲಬಿಲಿಟಿ, ಫ‌ಂಡಿಂಗ್‌ ಮತ್ತು ಇತರ ವಿಷಯಗಳ ಬಗ್ಗೆ ಯಶಸ್ವಿ ಉದ್ಯಮಿಗಳಿಂದ ಮಾಹಿತಿ ಲಭ್ಯವಾಗಲಿದೆ. ಕರ್ನಾಟಕದಲ್ಲಿ ಮಹಿಳಾ ಉದ್ಯಮಶೀಲತೆ ಎಂಬ ವಿಷಯದ ಕುರಿತು ರಾಜ್ಯ ಸರಕಾರ ವಿಶೇಷ ಕಾರ್ಯಾಗಾರ ನಡೆಸಲಿದೆ.

ಎಲಿವೇಟ್‌ 100 ಎಂಬುದು ಕರ್ನಾಟಕದಲ್ಲಿನ 100 ಅತ್ಯಂತ ನವೀನ ಸ್ಟಾರ್ಟ್‌ಅಪ್‌ಗ್ಳನ್ನು ಗುರುತಿಸುವ ಕಾರ್ಯಕ್ರಮವಾಗಿದ್ದು, ಜುಲೈ 2017ರಲ್ಲಿ ಪರಿಚಯಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 1,700 ಸ್ಟಾರ್ಟ್‌ಅಪ್‌ಗ್ಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next