Advertisement
ಅರಮನೆ ಆವರಣದಲ್ಲಿ ಭಾನುವಾರ ನಡೆದ ಗಜಪಡೆ ಬೀಳ್ಕೊಡುಗೆ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಆನೆಗಳು ಉತ್ತಮವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿವೆ. ಮಾವುತರು, ಕಾವಾಡಿಗಳಿಗೆ ಅರಮನೆ ಮಂಡಳಿ ವತಿ ಯಿಂದ ತಲಾ 10 ಸಾವಿರ ರೂ. ಗೌರವ ಧನ ನೀಡಲಾಗಿದೆ.
Related Articles
Advertisement
ಅಭಿಮನ್ಯು ಆನೆ ಮಾವುತ ವಸಂತ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದೇ ಅದೃಷ್ಟವಾಗಿದೆ. ಅಭಿಮನ್ಯು ನನಗೆ ಸಿಕ್ಕಿರುವುದು, ನಾನು ಅಭಿಮನ್ಯುವಿಗೆ ಸಿಕ್ಕಿರುವುದು ಪುಣ್ಯ. ದಸರಾ ಮಹೋತ್ಸವದಲ್ಲಿ ಸತತ 2ನೇ ಬಾರಿ ಅಭಿಮನ್ಯುವನ್ನು ಮುನ್ನಡೆಸಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಇದಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತನ್ನ ಜತೆ ಇರುವ ಕಾವಾಡಿಗಳು ಮತ್ತು ಮಾವುತರು ಕಾರಣರಾಗಿದ್ದಾರೆ ಎಂದು ಹೇಳಿದರು. ಮೈಸೂರು ದಸರಾ ನಿರ್ವಿಘ್ನವಾಗಿ ನಡೆದಿದೆ ತಾಯಿ ಚಾಮುಂಡೇಶ್ವರಿ ದಯೆಯಿಂದ ಈ ಬಾರಿಯ ದಸರಾ ನಿರ್ವಿಘ್ನವಾಗಿ ನೆರವೇರಿದೆ.
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಗಜಪಡೆಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿದೆ. ಆನೆಗಳು ಯಾವುದೇ ತೊಂದರೆ ಇಲ್ಲದೇ ಸ್ವಸ್ಥಾನ ಸೇರುವಂತೆ ಪ್ರಾರ್ಥಿಸಲಾಗಿದೆ. ಮುಂದಿನ ದಸರಾ ವೇಳೆಗೆಕೊರೊನಾ ಸಂಪೂರ್ಣವಾಗಿ ತೊಲಗಿ ವೈಭವದಿಂದ ದಸರಾ ನಡೆಯುವಂತಾಗಲಿ ಎಂದು ದೇವರನ್ನು ಬೇಡಿಕೊಳ್ಳಲಾಗಿದೆ ಎಂದು ಅರ್ಚಕ ಪ್ರಹ್ಲಾದ್ ರಾವ್ ತಿಳಿಸಿದರು.